ಲೋಕಸಭಾ ಚುನಾವಣೆಯ ನಿಮಿತ್ತ ಕೆಲ ನಾಯಕರ ನೀಡುವಂತಹ ಹೇಳಿಕೆಗಳು ವಿವಾದಗಳಿಗೆ, ಚರ್ಚೆಗಳಿಗೆ ಗುರಿಯಾಗತ್ತಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಕಾಂಗ್ರೇಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ಬಗ್ಗೆ ನೀಡಿದ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿತ್ತು ಜೊತೆಗೆ ವಿವಾದಕ್ಕೆ ಸಹ ಕಾರಣವಾಗಿತ್ತು. ಪಾಕಿಸ್ತಾನವನ್ನು ಭಾರತ ಗೌರವಯುತವಾಗಿ ಕಾಣದೇ ಇದ್ದರೇ ಅವರು ಅಣುಬಾಂಬ್ ಹಾಕಿಬಿಡುತ್ತಾರೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ನಡೆದ ಸಂದರ್ಶನದ ವೇಳೆ ಮಾತನಾಡಿದ್ದಾರೆ. ಅಣುಬಾಂಬ್ ಕುರಿತ ಮಣಿಶಂಕರ್ ಅಯ್ಯರ್ ಹೇಳಿಕೆಗೆ ಕೌಂಟರ್ ನೀಡಿದ್ದಾರೆ. ಇದು ನವ ಭಾರತ ಯಾರ ಬೆದರಿಕೆಗೆ ಹೆದರುವಂತಹ ದೇಶವಲ್ಲ. ನಾವು ಅಣುಬಾಂಬ್ ತಯಾರಿಸಿದ್ದೇವೆ. ಅಣುಬಾಂಬ್ ತಯಾರಿಸಿರೋದು ಫ್ರಿಡ್ಜ್ ನಲ್ಲಿ ಇಡೋಕೆ ಅಲ್ಲ. ನಾವು ಯಾರನ್ನು ಕೆಣಕೊಲ್ಲ, ಯಾರ ಮೇಲೂ ಧಾಳಿ ಮಾಡೋಲ್ಲ. ನಮ್ಮನ್ನು ಕೆಣಕಿದರೇ ಅವರ ಮನೆಗೆ ನುಗ್ಗಿ ಹೊಡೆಯುತ್ತೇವೆ. ಇದು ನವ ಭಾರತ ಎಂದಿದ್ದಾರೆ. ಇನ್ನೂ ಪಾಕಿಸ್ಥಾನದಲ್ಲಿ ಸದ್ಯ ಎಂತಹ ಪರಿಸ್ಥಿತಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಪಾಕಿಸ್ತಾನ ಅವರ ಜನತೆಗೆ ಮೊದಲು ಏನು ಮಾಡಬೇಕೋ ಅದನ್ನು ಮಾಡಲಿ. ಆಧುನಿಕ ಭಾರತದ ಶಕ್ತಿ ಹಾಗೂ ಸಾಮರ್ಥ್ಯದ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ ಎಂದು ಯೋಗಿ ಹೇಳಿದ್ದು, ಅವರ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನೂ ಇತ್ತೀಚಿಗೆ ಕೆಲ ಕಾಂಗ್ರೇಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ತಂದಿದೆ. ಪಾಕಿಸ್ತಾನ ಅಣುಬಾಂಬ್ ಹೊಂದಿದೆ. ಸಾರ್ವಭೌಮ ಪಾಕಿಸ್ತಾನಕ್ಕೆ ಬೇರೆ ದೊಡ್ಡ ದೊಡ್ಡ ದೇಶಗಳೂ ಸಹ ಗೌರವ ನೀಡುತ್ತವೆ. ಭಾರತ ಸಹ ಪಾಕಿಸ್ತಾನಕ್ಕೆ ಗೌರವ ನೀಡಬೇಕು. ಗನ್ ಹಿಡಿದುಕೊಂಡು ಯುದ್ದ ಮಾಡೋಕೆ ಮುಂದಾಗುವುದಲ್ಲ. ಅವರನ್ನು ಕೆಣಕಿದರೇ ಅವರ ಬಳಿಯಿರುವ ಅಣುಬಾಂಬ್ ಪ್ರಯೋಗ ಮಾಡುತ್ತಾರೆ. ಆದ್ದರಿಂದ ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ದ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ಆಕ್ರೋಷ ಹೊರಹಾಕಿದ್ದರು.