ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ದೇಶಾದ್ಯಂತ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ 250 ವೆಲ್ತ್ ಮ್ಯಾನೇಜರ್ (Wealth Manager) ಹುದ್ದೆಗಳ ಭರ್ತಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಾರ್ವಜನಿಕ ವಲಯದ ಈ ಪ್ರಮುಖ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 25, 2025ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Union Bank Recruitment 2025 – ವರ್ಗವಾರು ಹುದ್ದೆಗಳ ವಿವರ
ಯೂನಿಯನ್ ಬ್ಯಾಂಕ್ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಒಟ್ಟು 250 ಹುದ್ದೆಗಳನ್ನು ವಿವಿಧ ವರ್ಗಗಳಿಗೆ ಮೀಸಲಿರಿಸಲಾಗಿದೆ.
- ಸಾಮಾನ್ಯ: 103 ಹುದ್ದೆಗಳು
- ಎಸ್‌ಸಿ: 37 ಹುದ್ದೆಗಳು
- ಎಸ್ಟಿ: 18 ಹುದ್ದೆಗಳು
- ಒಬಿಸಿ: 67 ಹುದ್ದೆಗಳು
- ಇಡಬ್ಲ್ಯುಎಸ್: 25 ಹುದ್ದೆಗಳು
ಒಟ್ಟು 250 ಹುದ್ದೆಗಳಿವೆ.
Union Bank Recruitment 2025 – ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿರ್ದಿಷ್ಟ ಅರ್ಹತೆಗಳನ್ನು ಹೊಂದಿರಬೇಕು.
- ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಎ/ ಎಂಎಂಎಸ್/ ಪಿಜಿಡಿಬಿಎ/ ಪಿಜಿಡಿಬಿಎಂ/ ಪಿಜಿಎ/ ಪಿಜಿಡಿಎಂ ಕೋರ್ಸ್‌ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಇದರ ಜೊತೆಗೆ, ಸಂಬಂಧಿಸಿದ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಕಾರ್ಯಾನುಭವ ಕಡ್ಡಾಯವಾಗಿದೆ.
- ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಆಗಸ್ಟ್ 1, 2025ಕ್ಕೆ ಅನ್ವಯವಾಗುವಂತೆ ಕನಿಷ್ಠ 25 ಮತ್ತು ಗರಿಷ್ಠ 35 ವರ್ಷಗಳೊಳಗಿರಬೇಕು.
Union Bank Recruitment 2025 ಅರ್ಜಿ ಸಲ್ಲಿಕೆ ವಿಧಾನ ಮತ್ತು ಶುಲ್ಕ
ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸಬೇಕಾದ ವೆಬ್ಸೈಟ್: https://www.unionbankofindia.co.in/
- ಅರ್ಜಿ ಶುಲ್ಕ:
- ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: ₹1,180
- ಪ.ಜಾತಿ/ಪ.ಪಂಗಡ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ: ₹177
ಆಯ್ಕೆ ಪ್ರಕ್ರಿಯೆ ಮತ್ತು ವೇತನ ವಿವರ
ಅಭ್ಯರ್ಥಿಗಳ ಆಯ್ಕೆ ಬಹು ಹಂತಗಳಲ್ಲಿ ನಡೆಯಲಿದೆ.
- ಆಯ್ಕೆ ಪ್ರಕ್ರಿಯೆ: ಆನ್‌ಲೈನ್‌ನಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ, ಅವರಿಗೆ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ, ಗುಂಪು ಚರ್ಚೆ (Group Discussion) ಮತ್ತು ವೈಯಕ್ತಿಕ ಸಂದರ್ಶನ (Personal Interview) ನಡೆಸಲಾಗುತ್ತದೆ. ಒಂದು ವೇಳೆ ಆನ್‌ಲೈನ್ ಪರೀಕ್ಷೆ ನಡೆಸದಿದ್ದರೆ, ಗುಂಪು ಚರ್ಚೆ ಮತ್ತು ಸಂದರ್ಶನದ ಮೂಲಕವೇ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
- ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ₹64,820- ₹93,960 ವೇತನ ಶ್ರೇಣಿ ನೀಡಲಾಗುತ್ತದೆ. ಜೊತೆಗೆ, ಬ್ಯಾಂಕಿನ ನಿಯಮಗಳ ಪ್ರಕಾರ ತುಟ್ಟಿ ಭತ್ಯೆ, ವಿಶೇಷ ಭತ್ಯೆ ಮತ್ತು ಇತರೆ ಭತ್ಯೆಗಳು ಲಭ್ಯವಿರುತ್ತವೆ. Read this also : ಉತ್ತರ ಪ್ರದೇಶದ ರೈತನಿಂದ ಕರುವಿನ ಮೊದಲ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಿಸಿದ ವಿಡಿಯೋ ವೈರಲ್…!
- ಪ್ರೊಬೇಷನರಿ ಅವಧಿ: ಆಯ್ಕೆಯಾದವರಿಗೆ 2 ವರ್ಷಗಳ ಪ್ರೊಬೇಶನರಿ ಅವಧಿ ಇರುತ್ತದೆ.
ಪರೀಕ್ಷಾ ಮಾದರಿ : ಆನ್‌ಲೈನ್ ಪರೀಕ್ಷೆಯಲ್ಲಿ ಒಟ್ಟು 150 ಪ್ರಶ್ನೆಗಳಿಗೆ 225 ಅಂಕಗಳು ಇರಲಿವೆ. ಪರೀಕ್ಷೆಯ ಅವಧಿ 2.30 ಗಂಟೆಗಳು.
- ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್: 25 ಪ್ರಶ್ನೆಗಳು
- ರೀಸನಿಂಗ್: 25 ಪ್ರಶ್ನೆಗಳು
- ಇಂಗ್ಲಿಷ್: 25 ಪ್ರಶ್ನೆಗಳು
- ಹುದ್ದೆಗಳಿಗೆ ಸಂಬಂಧಿಸಿದ ವಿಷಯಾಧಾರಿತ ಪ್ರಶ್ನೆಗಳು: 75 ಪ್ರಶ್ನೆಗಳು (150 ಅಂಕಗಳು)
ಸಂದರ್ಶನಕ್ಕೆ 50 ಅಂಕಗಳನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಯೂನಿಯನ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ www.unionbankofindia.co.in ಗೆ ಭೇಟಿ ನೀಡಬಹುದು.
Union Bank of India Advertisement & Apply Link:
| Official Career Page of Union Bank of India: Website Link |
| Advertisement for Union Bank of India: Notification PDF |
| Online Application Form for Union Bank of India: Apply Link |


