TTD Updates – ವಿಶ್ವ ವಿಖ್ಯಾತ ತಿರುಮಲ ತಿರುಪತಿ ದೇವಾಲಯಕ್ಕೆ (TTD Updates) ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಪ್ರತಿ ಮಾಹೆ (TTD Updates) ತಿಮ್ಮಪ್ಪನ ಭಕ್ತರಿಗೆ ಶ್ರೀವಾರಿ ದರ್ಶನದ 300 ರೂಪಾಯಿ ಟಿಕೆಟ್ ಗಳನ್ನು ವಿತರಣೆ ಮಾಡುತ್ತದೆ. ಇದೀಗ ನವೆಂಬರ್ ಮಾಹೆಯ ಕೋಟಾ ಬಿಡುಗಡೆ ಮಾಡಿದೆ. ಆ.19 ರಂದು ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಆ.19 ರಂದು ಬೆಳಿಗ್ಗೆ 10 ಗಂಟೆಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.
ನವೆಂಬರ್ 2024 ರ ಮಾಹೆಯ (TTD Updates) ತಿಮ್ಮಪ್ಪನ ದರ್ಶನದ ಟಿಕೆಟ್ ಗಳನ್ನು ಆ.19 ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಶ್ರೀವಾರಿ ಆರ್ಜಿತ ಸೇವಾ ಟಿಕೆಟ್ ಗಳನ್ನು ಆನ್ ಲೈನ್ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಈ ಸೇವಾ ಟಿಕೆಟ್ ಗಳಿಗಾಗಿ ಎಲೆಕ್ಟ್ರಾನಿಕ್ ಡಿಪ್ ಗಾಗಿ ಆ.21 ರಂದು ಬೆಳಿಗ್ಗೆ 10 ಗಂಟೆಗಳ ವರೆಗೂ ರಿಜಿಸ್ಟರ್ ಮಾಡಿಕೊಳ್ಳಬಹುದು. ಈ (TTD Updates) ಎಲೆಕ್ಟ್ರಾನಿಕ್ ಡಿಪ್ ನಲ್ಲಿ ಆಯ್ಕೆಯಾದವರು ಆ.21 ರಿಂದ ಆ.23ರ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿ ಖಚಿತಪಡಿಸಿಕೊಳ್ಳಬೇಕು. ಇನ್ನೂ (TTD Updates) ಕಲ್ಯಾಣೋತ್ಸವ, ಊಂಜಲ್ ಸೇವ, ಆರ್ಜಿತ ಬ್ರಹ್ಮೋತ್ಸವ, ಸಹಸ್ರಾದಿಪಾಲಂಕಾರ ಸೇವಾ ಸೇರಿದಂತೆ ನ.9 ರಂದು ಶ್ರೀವಾರಿ ಆಲಯದಲ್ಲಿ ನಡೆಯಲಿರುವ (TTD Updates) ಪುಷ್ಪಯಾಗದ ಟಿಕೆಟ್ ಗಳನ್ನು ಆ.22 ರ ಬೆಳಿಗ್ಗೆ 10 ಗಂಟೆಗೆ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಅದೇ ರೀತಿ ಆ.22 ರಂದು ವರ್ಚುವಲ್ ಸೇವಾ ಕೋಟವನ್ನು ಸಹ ಟಿಟಿಡಿ (TTD Updates) ಬಿಡುಗಡೆ ಮಾಡಲಾಗುತ್ತದೆ. ಅದಕ್ಕೆ ಸಂಬಂಧಿಸಿದ ಸ್ಲಾಟ್ ಗಳ ನವೆಂಬರ್ ಮಾಹೆಯ ಕೋಟಾವನ್ನು ಆ.22 ರ ಮದ್ಯಾಹ್ನ 3 ಗಂಟೆಗೆ ಟಿಟಿಡಿ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಲಿದೆ. ಇನ್ನೂ ಆ.23 ರಂದು ಬೆಳಿಗ್ಗೆ 10 ಗಂಟೆ ನವೆಂಬರ್ ಮಾಹೆಯ (TTD Updates) ಅಂಗಪ್ರದಕ್ಷಿಣೆ ಟೋಕನ್ ಸಹ ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ ದಿವ್ಯಾಂಗರು, ವಯೋವೃದ್ದರು, ದೀರ್ಘಕಾಲಿಕ ವ್ಯಾಧಿಗಳಿರುವಂತಹವರು ತಿಮ್ಮಪ್ಪನನ್ನು ದರ್ಶನ ಮಾಡಿಕೊಳ್ಳಲು ನವೆಂಬರ್ ತಿಂಗಳ ಉಚಿತ ಪ್ರತ್ಯೇಕ ದರ್ಶನ ಟೋಕನ್ ಗಳನ್ನು ಆ.23 ರ ಮದ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುತ್ತದೆ. ಆ.24 ರ ಬೆಳಿಗ್ಗೆ 10 ಗಂಟೆಗೆ ಸ್ಪೇಷಲ್ ಎಂಟ್ರಿ ಟೋಕನ್ ಗಳನ್ನು ಬಿಡುಗಡೆ ಮಾಡಲಾಗುತ್ತದೆ. (TTD Updates) ಈ ದರ್ಶನದ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳಲು ಟಿಟಿಡಿಯ ಅಧಿಕೃತ ವೆಬ್ ಸೈಟ್ https://ttdevasthanams.ap.gov.in ನಲ್ಲಿ ಲಾಗಿನ್ ಆಗಿ ಬುಕ್ ಮಾಡಿಕೊಳ್ಳಬಹುದಾಗಿದೆ.