TTD News, ದೇಶದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ತಿರುಪತಿ ಎಷ್ಟು ಪ್ರಸಿದ್ದಿ ಪಡೆದಿದೆಯೋ ಅಲ್ಲಿನ ಪ್ರಸಾದ ಲಡ್ಡು ಸಹ ಅಷ್ಟೇ ಪ್ರಸಿದ್ದಿ ಪಡೆದಿದೆ. ಆದರೆ ಕೆಲವು ದಿನಗಳಿಂದ ತಿರುಪತಿ ಲಡ್ಡು ಗುಣಮಟ್ಟದಲ್ಲಿ ಲೋಪ ಕಂಡು ಬಂದಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಟಿಟಿಡಿ (TTD News) ಇ.ಒ ಜೆ.ಶ್ಯಾಮಲಾ ರಾವ್ ಕಳಪೆ ಗುಣಮಟ್ಟದ ತುಪ್ಪ ಪೂರೈಕೆ ಮಾಡುತ್ತಿದ್ದ ಕಂಪನಿಗಳಿಗೆ ನೊಟೀಸ್ ನೀಡಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ತಿರುಮಲದ (TTD News) ಗೋಕುಲಂ ವಿಶ್ರಾಂತಿ ಗೃಃದ ಸಭಾಭವನದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಟಿಟಿಡಿ ಇ.ಒ ಜೆ.ಶ್ಯಾಮಲಾ ರಾವ್ ತಿರುಮಲ ಶ್ರೀವಾರಿ ಲಡ್ಡು ಪ್ರಸಾದಗಳನ್ನು ಹೆಚ್ಚು ಗುಣಮಟ್ಟದ ಹಾಗೂ ರುಚಿಕರವಾಗಿ ನೀಡುವ ಉದ್ದೇಶದಿಂದ ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದರಿಂದ ಲಡ್ಡು ಪ್ರಸಾದಗಳ ರುಚಿ ಹಾಗೂ ಗುಣಮಟ್ಟ ಹೆಚ್ಚಿದೆ. ಕಳಪೆ ಗುಣಮಟ್ಟದ ತುಪ್ಪ ಸರಬರಾಜು ಮಾಡುವ ಪೂರೈಕೆದಾರರು ನಿಯಮ ಪಾಲಿಸದೇ ಇದ್ದರೇ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಈಗ ಲಡ್ಡುಗೆ ತುಪ್ಪ ಪೂರೈಕೆ ಮಾಡುತ್ತಿರುವ ಸಂಸ್ಥೆಗಳನ್ನು ಕರೆಸಿ ಗುಣಮಟ್ಟದ ತುಪ್ಪ ಪೂರೈಸಲು ಸೂಚಿಸಲಾಗಿದೆ. ಕೆಲವು ಕಂಪನಿಗಳು ಉತ್ತಮ ಗುಣಮಟ್ಟದ ತುಪ್ಪವನ್ನು ಕಳುಹಿಸುತ್ತಿದ್ದಾರೆ, ಕೆಲವು ಕಂಪನಿಗಳು ಕಳಪೆ ತುಪ್ಪವನ್ನು ನೀಡುತ್ತಿವೆ ಎಂದು ಮಾಹಿತಿ ನೀಡಿದರು.
for more information : https://www.instagram.com/p/C9u-ooJyOXW/
ಇನ್ನೂ (TTD News) ಟಿಟಿಡಿ ಟೆಂಡರ್ ನಿಯಮ ಉಲ್ಲಂಘಟನೆ ಮಾಡಿ ಕಲಬೆರಕೆ ತುಪ್ಪ ಸರಬರಾಜು ಮಾಡುತ್ತಿರುವುದು ಹಾಗೂ ತರಕಾರಿ ಕೊಬ್ಬನ್ನು ಮಿಶ್ರಣ ಮಾಡಿ ಪೂರೈಕೆ ಮಾಡುತ್ತಿರುವುದು ಕಂಡು ಬಂದಿದೆ. ಆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಬೇರೆ ಕಂಪನಿ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ. ಎರಡೂ ಕಂಪನಿಗಳಿಗೆ ನೊಟೀಸ್ ಸಹ ಜಾರಿ ಮಾಡಲಾಗಿದೆ. ಸದ್ಯ ಟಿಟಿಡಿ ಬಳಿ ಕಲಬೆರಕೆ ಪರೀಕ್ಷೆ ಮಾಡುವ ಸಾಧನವಿಲ್ಲ. ಶೀಘ್ರದಲ್ಲೇ ಕಲಬೆರಕೆ ಪರೀಕ್ಷೆ ಸಾಧನವನ್ನು ಸ್ಥಾಪಿಸಲಾಗುತ್ತದೆ. ಪ್ರಸಾದ ತಯಾರಿಕೆಗೆ ಬೇಕಾಗುವಂತಹ ಕಚ್ಚಾ ವಸ್ತು, ತುಪ್ಪ ಖರೀದಿಗೆ ಸಂಬಂಧಿಸಿದಂತೆ ನಾಲ್ವರು ಪ್ರಮುಖ ಹೈನುಗಾರಿಕೆ ತಜ್ಞರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.