ಗುಡಿಬಂಡೆಯಲ್ಲಿ ಸಸಿ ನೆಡುವ ಮೂಲಕ ಕಾರ್ಮಿಕ ದಿನಾಚರಣೆ ಆಚರಿಸಿದ ಪರಿಸರವಾದಿಗಳು

ಗುಡಿಬಂಡೆ: ಪರಿಸರ ವೇದಿಕೆ ಹಾಗೂ ಆಟೋ ಹಾಗೂ ಟೆಂಪೋ ಚಾಲಕರ ವತಿಯಿಂದ ಗುಡಿಬಂಡೆ ಪೋಸ್ಟ್ ಆಫೀಸ್ ಆವರಣದಲ್ಲಿ ಗಿಡ ನೆ ಟ್ಟು ಕಾರ್ಮಿಕ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಈ ವೇಳೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನರಸಿಂಹಮೂರ್ತಿ ಗಿಡ ನೆಟ್ಟು ಉದ್ಘಾಟನೆ ಮಾಡಿ ಹಾಗೂ ಮಾತನಾಡಿ, ಕಾರ್ಮಿಕ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ರೈತರು. ಟೆಂಪೋ,ಆಟೋ ಚಾಲಕರು ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸೇವೆ ಅ ಪಾರವಾದುದು ಕಾರ್ಮಿಕರು ಇಲ್ಲದೆ ದೇಶ ಅಭಿವೃದ್ಧಿ ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಕಾರ್ಮಿಕರನ್ನು ಗೌರವಿಸುವುದು ಆದ್ಯ ಕರ್ತವ್ಯ ಎಂದು ತಿಳಿಸಿದರು.

Picsart 24 05 01 14 03 59 402
{“remix_data”:[],”remix_entry_point”:”challenges”,”source_tags”:[“local”],”origin”:”unknown”,”total_draw_time”:0,”total_draw_actions”:0,”layers_used”:0,”brushes_used”:0,”photos_added”:0,”total_editor_actions”:{},”tools_used”:{“transform”:1},”is_sticker”:false,”edited_since_last_sticker_save”:true,”containsFTESticker”:false}

ಬಳಿಕ ಗುಡಿಬಂಡೆ ಪೋಸ್ಟ್ ಮಾಸ್ಟರ್ ಆನಂದ್ ಕುಮಾರ್ ಮಾತಾನಾಡಿ, ದೇಶದ ಪ್ರಗತಿಯಾಗಬೇಕಾದರೆ ಕಾರ್ಮಿಕರಿಂದ ಸಾಧ್ಯ ಆದ್ದರಿಂದ ಅವರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಪರಿಸರ ವೇದಿಕೆಯ ಅಧ್ಯಕ್ಷರಾದ ಡಾ.ಗುಂಪು ಮರದ ಆನಂದ್ ಮಾತಾಡಿ, ಗುಡಿಬಂಡೆಯಲ್ಲಿ ಪ್ರತಿಯೊಂದು ಹಬ್ಬಕ್ಕೂ ಹರಿದಿನಗಳಿಗೆ ಗಿಡಗಳನ್ನು ನೆಟ್ಟು ಆಚರಿಸುವುದು ರೂಢಿಯಾಗಿದೆ ಅದೇ ರೀತಿ ಇಂದು ವಿಶ್ವ ಕಾರ್ಮಿಕ ದಿನಾಚರಣೆಯ ದಿನದಂದು ಗಿಡಗಳನ್ನು ನೆಟ್ಟು ಪರಿಸರ ಉಳಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಹಾಗೂ ಎಲ್ಲಾ ಕಾರ್ಮಿಕರ, ರೈತರ ಜೀವನ ಉತ್ತಮವಾಗಿ ಇರಬೇಕಾದರೆ ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಿ ಹಸಿರುಮಯ ವಾತಾವರಣವನ್ನು ಸೃಷ್ಟಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಮಂಜುನಾಥ್. ಅಂಚೆ ಸಹಾಯಕರಾದ ಪವನ್ ಕುಮಾರ್, ಆಟೋ ಹಾಗೂ ಟೆಂಪೋ ಚಾಲಕರಾದ ಶಿವಕುಮಾರ್, ಜಿಸಿ ಮೂರ್ತಿ, ನರಸಿಂಹಪ್ಪ,ಶ್ರೀನಿವಾಸ್, ಜಬಿವುಲ್ಲಾ, ಹಾಗೂ ರೈತರು ಪಾಲ್ಗೊಂಡಿದ್ದರು. ಇದೇ ಸಮಯದಲ್ಲಿ ಆದಿನಾರಾಯಣ ನಾಯಕ್ ರವರಿಗೆ ಗಿಡವನ್ನು ದತ್ತು ನೀಡಲಾಯಿತು.

Leave a Comment

Your email address will not be published. Required fields are marked *

Scroll to Top