ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತೆ. ಆದರೆ, ಸದ್ಯ ವೈರಲ್ ಆಗಿರೋ ಈ ವಿಡಿಯೋ ನೋಡಿದ್ರೆ ಎಂಥವರಿಗೂ ಕೋಪ ಬರೋದು ಗ್ಯಾರಂಟಿ. ರೈಲ್ವೆ ಸ್ಟೇಷನ್‌ನಲ್ಲಿ ನೆಮ್ಮದಿಯಾಗಿ ಮಲಗಿದ್ದ ಯುವಕನ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಮುಂಬೈ ರೈಲ್ವೆ ಸ್ಟೇಷನ್‌ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಮಂಗಳಮುಖಿಯರ (Transgender Attack) ಗುಂಪೊಂದು ಈ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Transgender Attack – ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಒಬ್ಬ ಯುವಕ ರೈಲ್ವೆ ಪ್ಲಾಟ್‌ಫಾರ್ಮ್‌ನ ಬೆಂಚ್ ಮೇಲೆ ನಿದ್ದೆ ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಅಲ್ಲಿಗೆ ಬಂದ ಮೂವರು (ವಿಡಿಯೋದಲ್ಲಿ ಮಂಗಳಮುಖಿಯರು ಎನ್ನಲಾದವರು), ಮಲಗಿದ್ದವನ ಬಳಿ ನಿಲ್ಲುತ್ತಾರೆ.
ಅಷ್ಟರಲ್ಲೇ ಒಬ್ಬರು ಕಾಲಿನಲ್ಲಿದ್ದ ಚಪ್ಪಲಿ ತೆಗೆದು, ಮಲಗಿದ್ದ ಯುವಕನಿಗೆ ಏಕಾಏಕಿ ಜೋರಾಗಿ ಹೊಡೆಯುತ್ತಾರೆ. ಗಾಢ ನಿದ್ದೆಯಲ್ಲಿದ್ದ ಆತ ಗಾಬರಿಯಿಂದ ಎದ್ದೇಳುತ್ತಾನೆ. ಏನಾಗುತ್ತಿದೆ ಎಂದು ಅರಿಯುವ ಮುನ್ನವೇ, ಆತನ ಕೆನ್ನೆಗೆ ಮತ್ತೆ ಬಾರಿಸುತ್ತಾರೆ. ಭಯಭೀತನಾದ ಆ ಯುವಕ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟಕ್ಕೇ ಸುಮ್ಮನಾಗದ ಆ ಗುಂಪು ಆತನನ್ನು ಅಟ್ಟಾಡಿಸಿಕೊಂಡು ಹೋಗುವುದರೊಂದಿಗೆ ವಿಡಿಯೋ ಕಟ್ ಆಗುತ್ತದೆ.
Transgender Attack – ನೆಟ್ಟಿಗರ ಆಕ್ರೋಶ
‘ವರಾಹ ವಾರಿಯರ್’ ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. “ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದ ಯುವಕನ ಮೇಲೆ ಮಂಗಳಮುಖಿಯರ ದಾಳಿ, ಸಾರ್ವಜನಿಕ ಸುರಕ್ಷತೆಯ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ” ಎಂಬ ಶೀರ್ಷಿಕೆಯಡಿ ವಿಡಿಯೋ ಪೋಸ್ಟ್ ಮಾಡಲಾಗಿದೆ. Read this also : ರೈಲಿನಲ್ಲಿ ಹಣ ವಸೂಲಿ ಮಾಡಬೇಡಿ ಎಂದಿದ್ದಕ್ಕೆ RPF ಇನ್ಸ್‌ಪೆಕ್ಟರ್ ಮೇಲೆ ಥರ್ಡ್ ಜೆಂಡರ್‍ಗಳ ಗುಂಪು ದಾಳಿ..!
ಈ ವಿಡಿಯೋ ನೋಡಿದ ನೆಟ್ಟಿಗರು ಫುಲ್ ಗರಂ
- “ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ರಕ್ಷಣೆ ಇಲ್ಲವೇ?” ಎಂದು ಪ್ರಶ್ನಿಸುತ್ತಿದ್ದಾರೆ.
- ವಿಡಿಯೋದಲ್ಲಿ ಅಕ್ಕಪಕ್ಕ ಜನ ಓಡಾಡುತ್ತಿರುವುದು ಕಾಣಿಸುತ್ತದೆ. ಆದರೆ, ಕಣ್ಣೆದುರೇ ಒಬ್ಬನ ಮೇಲೆ ಹಲ್ಲೆ ನಡೆಯುತ್ತಿದ್ದರೂ ಯಾರೂ ಸಹಾಯಕ್ಕೆ ಬಾರದಿರುವುದನ್ನು ಕಂಡು, “ಮನುಷ್ಯತ್ವ ಸತ್ತೋಗಿದ್ಯಾ?” ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
Transgender Attack – ರೈಲ್ವೆ ಇಲಾಖೆ ಹೇಳಿದ್ದೇನು?
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಭಾರತೀಯ ರೈಲ್ವೆ ಇಲಾಖೆಯ ಅಧಿಕೃತ ಖಾತೆ ‘Railway Seva’, ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. “ಪ್ರಯಾಣಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ನಮ್ಮ ಗುರಿ. ಇಂತಹ ಘಟನೆಗಳು ರೈಲ್ವೆ ಇಲಾಖೆಯ ಉದ್ದೇಶವನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಅಲ್ಲದೆ, ಘಟನೆ ಎಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ, ಸ್ಟೇಷನ್ ಹೆಸರು ಮತ್ತು ಸಮಯವನ್ನು ತಿಳಿಸುವಂತೆ ಅಥವಾ ‘RailMadad’ ವಾಟ್ಸಾಪ್ ಬಾಟ್ ಮೂಲಕ ದೂರು ನೀಡುವಂತೆ ಕೋರಿದೆ. ಅಧಿಕಾರಿಗಳು ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಮುಂಬೈನದ್ದು ಎಂದು ಹೇಳಲಾಗುತ್ತಿದ್ದರೂ, ಇದು ನಿಖರವಾಗಿ ಯಾವ ಸ್ಟೇಷನ್ ಅಥವಾ ಯಾವ ದಿನ ನಡೆದಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಅಥವಾ ರೈಲ್ವೆ ಅಧಿಕಾರಿಗಳು ಹಲ್ಲೆ ನಡೆಸಿದವರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.
