Train Viral Video – ಬೆಚ್ಚಿಬೀಳಿಸುವ ದೃಶ್ಯ, ರೈಲಿನ ಕಿಟಕಿ ಪಕ್ಕ ಕುಳಿತಿದ್ದ ಬಾಲಕಿಯ ಕೈಯಿಂದಲೇ ಮೊಬೈಲ್ ಕದ್ದ ಖದೀಮ!

ರೈಲು ಜರ್ನಿ ಅಂದ್ಮೇಲೆ ಕಿಟಕಿ ಪಕ್ಕ ಕೂತು ತಂಪಾದ ಗಾಳಿ ಸವಿಯುತ್ತಾ ಮೊಬೈಲ್ ಸ್ಕ್ರಾಲ್ ಮಾಡೋ ಮಜಾನೇ ಬೇರೆ. ಆದರೆ, ಇಲ್ಲೊಬ್ಬ ಬಾಲಕಿಗೆ ಅದೇ ಅಭ್ಯಾಸ ಜೀವನದಲ್ಲೇ ಮರೆಯಲಾಗದ (Train Viral Video) ಶಾಕ್ ಕೊಟ್ಟಿದೆ. ಕಣ್ಣು ಮಿಟುಕಿಸುವುದರೊಳಗೆ ಕಿಟಕಿಯ ಹೊರಗಿಂದ ಬಂದ ಕೈಯೊಂದು ಆಕೆಯ ಫೋನ್ ಕಸಿದುಕೊಂಡು ಪರಾರಿಯಾಗಿದ್ದು, ಈ ದೃಶ್ಯ ಇಂಟರ್ನೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.

Train Viral Video showing a thief snatching a girl’s mobile phone through a train window

Train Viral Video – ವಿಡಿಯೋದಲ್ಲಿ ಏನಿದೆ?

ಸಾಮಾಜಿಕ ಜಾಲತಾಣ ‘X’ ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಇಬ್ಬರು ಬಾಲಕಿಯರು ರೈಲಿನ ಕಿಟಕಿಯ ಪಕ್ಕ ಕುಳಿತು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಮುಳುಗಿರುವುದು ಕಾಣಿಸುತ್ತದೆ. ರೈಲು ನಿಧಾನವಾಗಿ ಸಾಗುತ್ತಿದ್ದಾಗ, ಕಿಟಕಿಯ ಹೊರಗಡೆ ಹೊಂಚು ಹಾಕಿ ನಿಂತಿದ್ದ ವ್ಯಕ್ತಿಯೊಬ್ಬ ಏಕಾಏಕಿ ಒಳಗೆ ಕೈಹಾಕಿ ಬಾಲಕಿಯ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಳ್ಳಲು ನೋಡಿದ್ದಾನೆ.

ಫೋನ್ ಉಳಿಸಿಕೊಳ್ಳಲು ಬಾಲಕಿಯ ಹರಸಾಹಸ, ಕೊನೆಗೂ ಜಯ ಕಳ್ಳನದ್ದೇ!

ಕಳ್ಳ ಕೈಹಾಕುತ್ತಿದ್ದಂತೆ ಎಚ್ಚೆತ್ತ ಬಾಲಕಿ ಮೊಬೈಲನ್ನು ಬಿಟ್ಟುಕೊಡದೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಕೊನೆಯವರೆಗೂ ಹೋರಾಟ ನಡೆಸಿದ್ದಾಳೆ. ಇಬ್ಬರ ನಡುವೆ ಕೆಲ ಕ್ಷಣಗಳ ಕಾಲ ತೀವ್ರ ಸೆಣಸಾಟ ನಡೆದರೂ, ಹೊರಗಿದ್ದ ವ್ಯಕ್ತಿ ಬಲಪ್ರಯೋಗ ಮಾಡಿ ಫೋನ್ ಕಿತ್ತುಕೊಂಡು ಓಡಿಹೋಗಿದ್ದಾನೆ. ಫೋನ್ ಕೈತಪ್ಪಿದ ಆಘಾತದಲ್ಲಿ ಬಾಲಕಿ ಬಿಕ್ಕಿ ಬಿಕ್ಕಿ ಅಳುತ್ತಿದ್ದರೆ, (Train Viral Video) ಪಕ್ಕದಲ್ಲಿದ್ದ ಗೆಳತಿ ದಿಗ್ಭ್ರಮೆಗೊಂಡು ನೋಡುತ್ತಿದ್ದಾಳೆ.

Train Viral Video showing a thief snatching a girl’s mobile phone through a train window

ಸಂಕಷ್ಟದಲ್ಲಿದ್ದ ಬಾಲಕಿಗೆ ಸಹಾಯ ಮಾಡದೆ ವಿಡಿಯೋ ಮಾಡೋದಾ?

ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ:

ಇದು ರಿಯಲ್ ಘಟನೆಯೇ ಅಥವಾ ವ್ಯೂಸ್‌ಗಾಗಿ ಮಾಡಿದ ನಾಟಕವೇ?

ವಿಡಿಯೋದ ಹಿನ್ನೆಲೆಯ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾಗಿವೆ:

  • ಕಳ್ಳ ಮೊಬೈಲ್ ಕದಿಯಲು ಬರುತ್ತಾನೆ ಎಂಬುದು ವಿಡಿಯೋ ಮಾಡುತ್ತಿದ್ದ ವ್ಯಕ್ತಿಗೆ ಮೊದಲೇ ಹೇಗೆ ತಿಳಿಯಿತು?
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಅಥವಾ ಜಾಗೃತಿ (Train Viral Video) ಮೂಡಿಸಲು ಮೊದಲೇ ಪ್ಲಾನ್ ಮಾಡಿ ಚಿತ್ರೀಕರಿಸಿರಬಹುದೇ? ಎಂಬ ಚರ್ಚೆಯೂ ನಡೆಯುತ್ತಿದೆ.

Train Viral Video showing a thief snatching a girl’s mobile phone through a train window

ಆದರೆ ಈ ವಿಡಿಯೋ ನಿಜವಾದದ್ದೇ ಅಥವಾ ಸ್ಕ್ರಿಪ್ಟೆಡ್ ಎಂಬುದಕ್ಕೆ ಯಾವುದೇ ಅಧಿಕೃತ ಪುಷ್ಟಿ ಸಿಕ್ಕಿಲ್ಲ.

ಕಿಟಕಿಯ ಬಳಿ ಕೂತಾಗ ಪಾಲಿಸಬೇಕಾದ ಸೇಫ್ಟಿ ಟಿಪ್ಸ್

ವಿಡಿಯೋ (Video link Here) ಅಸಲಿಯೇ ಇರಲಿ ಅಥವಾ ನಕಲಿಯೇ ಇರಲಿ, ರೈಲು ಪ್ರಯಾಣಿಕರಿಗೆ ಇದು ಎಚ್ಚರಿಕೆಯ ಗಂಟೆ. ವಿಶೇಷವಾಗಿ ರೈಲು ನಿಲ್ದಾಣ ಪ್ರವೇಶಿಸುವಾಗ ಅಥವಾ ಸಿಗ್ನಲ್‌ಗಳಲ್ಲಿ ನಿಂತಾಗ ಇಂತಹ ಕಳ್ಳತನಗಳು ಹೆಚ್ಚು.

  • ಕಿಟಕಿಯಿಂದ ದೂರವಿರಲಿ ಗ್ಯಾಜೆಟ್: ಕಿಟಕಿಯ ಪಕ್ಕ (Train Viral Video) ಕುಳಿತಾಗ ಮೊಬೈಲ್, ಪರ್ಸ್ ಅಥವಾ ಬೆಲೆಬಾಳುವ ವಸ್ತುಗಳನ್ನು ಹೊರಗಿನವರ ಕೈಗೆ ಸಿಗದಂತೆ ಒಳಭಾಗದಲ್ಲಿ ಹಿಡಿದುಕೊಳ್ಳಿ.
  • ಫೋಟೋ-ವಿಡಿಯೋ ಕ್ರೇಜ್ ಬೇಡ: ರೈಲು ಚಲಿಸುವಾಗ ಕಿಟಕಿಯಿಂದ ಕೈಹೊರಹಾಕಿ ಫೋಟೋ, ಸೆಲ್ಫಿ ಅಥವಾ ವಿಡಿಯೋ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಿ.
  • ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ಇರಲಿ: ರೈಲು ನಿಧಾನವಾದಾಗ ಕಿಟಕಿಯ ಹೊರಗೆ ಟ್ರ್ಯಾಕ್ ಬದಿಯಲ್ಲಿ ನಿಂತಿರುವ ಅಪರಿಚಿತ ವ್ಯಕ್ತಿಗಳ ಚಲನವಲನಗಳ ಬಗ್ಗೆ ಜಾಗರೂಕರಾಗಿರಿ.

Leave a Comment

Your email address will not be published. Required fields are marked *

Scroll to Top