Traffic Jam – ನಮ್ಮ ದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ. ದೆಹಲಿ, ಮುಂಬೈ, ಬೆಂಗಳೂರು, ಗುರುಗ್ರಾಮ್ ಹೀಗೆ ಪ್ರತಿಯೊಂದು ದೊಡ್ಡ ನಗರಗಳಲ್ಲೂ ಜನರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ಜನರಿಗೆ ಬೇರೆ ದಾರಿ ಕಾಣದೆ ತೊಂದರೆ ಅನುಭವಿಸುತ್ತಾರೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಟ್ರಾಫಿಕ್‌ನಿಂದ ಬೇಸತ್ತ ಒಬ್ಬ ವ್ಯಕ್ತಿ ತನ್ನ ಸ್ಕೂಟಿಯನ್ನೇ ಭುಜದ ಮೇಲೆ ಎತ್ತಿ ನಡೆದ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

Traffic Jam – ಟ್ರಾಫಿಕ್ ತಪ್ಪಿಸಲು ಹೊಸ ದಾರಿ!
ಸಾಮಾನ್ಯವಾಗಿ ಟ್ರಾಫಿಕ್‌ನಲ್ಲಿ ಸಿಲುಕಿದಾಗ ಜನರು ತಾಳ್ಮೆಯಿಂದ ಕಾಯುತ್ತಾರೆ ಅಥವಾ ಎಷ್ಟೇ ಕಿರಿದಾದ ದಾರಿಯಿದ್ದರೂ ಮುಂದಕ್ಕೆ ಹೋಗಲು ಪ್ರಯತ್ನಿಸುತ್ತಾರೆ. ಆದರೆ ಈ ವಿಡಿಯೋದಲ್ಲಿ ಇಬ್ಬರು ಯುವಕರು ಮಾಡಿರುವ ಕೆಲಸ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಸುಮಾರು 12 ಸೆಕೆಂಡುಗಳ ಈ ವಿಡಿಯೋದಲ್ಲಿ ಭಾರಿ ಟ್ರಾಫಿಕ್ ಜಾಮ್ ಇರುವುದು ಸ್ಪಷ್ಟವಾಗಿ ಕಾಣುತ್ತದೆ. ಕಾರು ಮತ್ತು ಬೈಕ್‌ಗಳು ರಸ್ತೆಯುದ್ದಕ್ಕೂ ನಿಂತಿವೆ. ಈ ಮಧ್ಯೆ, ಇಬ್ಬರು ಯುವಕರು ತಮ್ಮ ಸ್ಕೂಟರನ್ನು ಭುಜದ ಮೇಲೆ ಎತ್ತಿ ಟ್ರಾಫಿಕ್‌ನಿಂದ ಹೊರಗೆ ನಡೆದುಕೊಂಡು ಹೋಗುತ್ತಿದ್ದಾರೆ. ಅವರ ಈ ಅಸಾಮಾನ್ಯ ಪ್ರಯತ್ನದ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
Read this also : ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಸಂಚಾರ ನಿಯಮ ಉಲ್ಲಂಘಿಸಿದ ಯುಟ್ಯೂಬರ್: ಮಾನವೀಯ ಕಾರ್ಯಕ್ಕೆ ಜನರಿಂದ ಮೆಚ್ಚುಗೆ…!
Traffic Jam – ಹರಿಯಾಣದಲ್ಲಿ ನಡೆದ ಘಟನೆ
ವಿಡಿಯೋದಲ್ಲಿರುವ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಗಮನಿಸಿದರೆ, ಇದು ಹರಿಯಾಣದಲ್ಲಿ (Haryana Traffic) ನಡೆದ ಘಟನೆ ಎಂದು ಊಹಿಸಲಾಗಿದೆ. ಹರಿಯಾಣದ ರಸ್ತೆಗಳಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಆದರೆ ಈ ಬಾರಿ ಟ್ರಾಫಿಕ್ ಜಾಮ್‌ಗಿಂತ, ಯುವಕರ ಈ ಸಾಹಸದ ವಿಡಿಯೋ ಜನರ ಗಮನ ಸೆಳೆದಿದೆ. ಈ ವಿಡಿಯೋವನ್ನು ‘gurgaon_locals’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದು ಶೀಘ್ರವಾಗಿ ವೈರಲ್ ಆಗಿದ್ದು, ಸಾವಿರಾರು ಜನರು ಇದನ್ನು ವೀಕ್ಷಿಸಿದ್ದಾರೆ ಮತ್ತು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಜನರು ಏನು ಹೇಳುತ್ತಾರೆ?
ಈ ವಿಡಿಯೋಗೆ ಜನರು ಸಾಕಷ್ಟು ತಮಾಷೆಯ ಮತ್ತು ಆಶ್ಚರ್ಯಕರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಬಳಕೆದಾರರು, “ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಇದು ಅದ್ಭುತವಾದ ಮಾರ್ಗ” ಎಂದು ಹೇಳಿದ್ದಾರೆ. ಮತ್ತೊಬ್ಬರು, “ಈ ರೀತಿ ಬೇಗ ತಲುಪಬಹುದು, ಆದರೆ ನಂತರ ಮಸಾಜ್ ಮಾಡಿಸಿಕೊಳ್ಳಬೇಕಾಗುತ್ತದೆ” ಎಂದು ನಕ್ಕಿದ್ದಾರೆ. ಮತ್ತೊಬ್ಬರು, “ಹಬೀಬಿ ಗುರುಗಾಂವ್‌ಗೆ ಸುಸ್ವಾಗತ” ಎಂದು ಕಾಮೆಂಟ್ ಮಾಡಿದ್ದಾರೆ.
