Tuesday, November 5, 2024

ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಿ: ನ್ಯಾ.ಜೆ.ರಂಗಸ್ವಾಮಿ

ಬಾಗೇಪಲ್ಲಿ:  ತಂಬಾಕು ಉತ್ಪನ್ನಗಳ ಸೇವನೆಯಿಂದ  ದೂರಸರಿದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಜೆಎಂಎಫ್‍ಸಿ ನ್ಯಾಯಾಲಯದ  ನ್ಯಾಯಾಧೀಶ  ಜೆ.ರಂಗಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ  ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಜನತೆ ತಂಬಾಕು ಸೇವನೆ, ಮಧ್ಯಪಾನ ಇತ್ಯಾಧಿ ದುಶ್ಚಟಗಳಿಗೆ ದಾಸರಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು ಸಿಗರೇಟ್, ಬೀಡಿ, ಮಧ್ಯಪಾನ ಇತ್ಯಾಧಿ ಮಾದಕ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆರೋಗ್ಯ ಹಾಳಾಗಿ ಚಿಕ್ಕವಯಸಿನಲ್ಲಿಯೇ ಸಾವೀಗಿಡಾಗುತ್ತಿದ್ದಾರೆ ಎಂದರು.

ಧೂಮಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬುದಾಗಿ ತಿಳಿದಿದ್ದರೂ ಸಹ ಇಂತಹ ದುಶ್ಚಟಗಳಿಗೆ ಯುವ ಜನತೆ ದಾಸರಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವುದಲ್ಲದೆ ಪರಿಸರವನ್ನು ಸಹ ಹಾಳು ಮಾಡುತ್ತಿದ್ದಾರೆ ಎಂದ ಅವರು ತಂಬಾಕು ಉತ್ಪನ್ನಗಳ ಸೇವನೆಗಳನ್ನು ತ್ಯೆಜಿಸಿದಾಗ ಮಾತ್ರ ಆರೋಗ್ಯವÀನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತೆ ಅಲ್ಲದೆ ತಂಬಾಕು, ಮಧ್ಯಪಾನ ಇತ್ಯಾಧಿ ಮಾರಕವಾದಂತಹ ದುಶ್ಚಟಗಳಿಂದ ರಕ್ಷಿಸಲು ಜನಜಾಗೃತಿ ಮೂಡಿಸುವಂತಹ ಕೆಲಸಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ,  ವಕೀಲರ ಸಂಘದ ಅಧ್ಯಕ್ಷ ಎ.ನಂಜುಡ,ಉಪಾಧ್ಯಕ್ಷ ರಾಮಾಂಜಿ, ಕಾರ್ಯದರ್ಶಿ ಪ್ರಸನ್ನಕುಮಾರ್, ಖಜಾಂಚಿ ಮಂಜುನಾಥ್, ಹಿರಿಯ ವಕೀಲರಾದ ಫಯಾಜ್ ಬಾಷಾ, ವೆಂಕಟೇಶ್, ವೆಂಕಟನಾರಾಯಣ ಮತ್ತಿತರರು ಇದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!