Sunday, August 31, 2025
HomeSpecialನಿಮ್ಮ ಫೋನ್ ಸ್ಟೋರೇಜ್ ಖಾಲಿ ಮಾಡಲು ಈ ಸಿಂಪಲ್ ಟ್ರಿಕ್ಸ್, ಒಮ್ಮೆ ಟ್ರೈ ಮಾಡಿ….!

ನಿಮ್ಮ ಫೋನ್ ಸ್ಟೋರೇಜ್ ಖಾಲಿ ಮಾಡಲು ಈ ಸಿಂಪಲ್ ಟ್ರಿಕ್ಸ್, ಒಮ್ಮೆ ಟ್ರೈ ಮಾಡಿ….!

ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್ ಪೋನ್ ಬಳಸುತ್ತಿದ್ದಾರೆ. ಅವರವರ ಬಜೆಟ್ ಗೆ ತಕ್ಕಂತೆ ಸ್ಮಾರ್ಟ್ ಪೋನ್ ಗಳನ್ನು ಹೊಂದಿರುತ್ತಾರೆ. ಬಜೆಟ್ ಸ್ಮಾರ್ಟ್ ಪೋನ್ ನಿಂದ ಟಾಪ್ ರೇಂಜ್ ಪೋನ್ ವರೆಗೂ ಅನೇಕರು ಸ್ಟೋರೇಜ್ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಮೊಬೈಲ್ ನಲ್ಲಿ ಪೊಟೋಗಳು, ವಿಡಿಯೋಗಳು, ಮ್ಯೂಸಿಕ್ ಸೇರಿದಂತೆ ಹಲವು ರೀತಿಯ ಫೈಲ್ ಸ್ಟೋರೇಜ್ ಗಳ ಕಾರಣದಿಂದ ಸ್ಟೋರೇಜ್ ಬೇಗ ತುಂಬಿಬಿಡುತ್ತದೆ. ಇದೀಗ ನಿಮ್ಮ ಪೋನ್ ನಲ್ಲಿರುವ ಸ್ಟೋರೇಜ್ ಖಾಲಿ ಮಾಡಲು ಈ ಸಿಂಪಲ್ ಟ್ರಿಕ್ಸ್ ಬಳಸಬಹುದಾಗಿದೆ.

phone storage optimization trics 2

ಬಹುತೇಕ ಸ್ಮಾರ್ಟ್ ಪೋನ್ ಬಳಕೆದಾರರು ತಮ್ಮ ವಿಶೇಷ ಕ್ಷಣಗಳನ್ನು ಮೊಬೈಲ್ ನಲ್ಲಿ ಸ್ಟೋರ್‍ ಮಾಡಿಕೊಳ್ಳುತ್ತಿರುತ್ತಾರೆ. ಪೊಟೋಗಳು, ವಿಡಿಯೋಗಳ ಮೂಲಕ ತಮ್ಮ ಸುಂದರವಾದ ಕ್ಷಣಗಳನ್ನು ಸ್ಟೋರ್‍ ಮಾಡಿಕೊಳ್ಳುತ್ತಿರುತ್ತಾರೆ.  ಆಗಾಗ ಆ ನೆನಪುಗಳನ್ನು ಮೆಲುಕು ಹಾಕಿಕೊಳ್ಳಲು ಸ್ಟೋರ್‍ ಆಗಿರುವಂತಹ ಪೊಟೋಗಳು, ವಿಡಿಯೋಗಳನ್ನು ನೋಡುತ್ತಿರುತ್ತಾರೆ. ಅಂತಹ ಸಮಯದಲ್ಲಿ ನಿಮ್ಮ ಪೋನ್ ಸ್ಟೋರೇಜ್ ತುಂಬಿದೆ ಎಂಬ ನೊಟಿಫೀಕೇಷನ್ ಬಂದಾಗಲೆಲ್ಲಾ, ಹೊಸ ಪೋನ್ ಖರೀದಿಸಬೇಕೆ ಎಂಬ ಚಿಂತೆಗೆ ಗುರಿಯಾಗುತ್ತಿರುತ್ತಾರೆ.  ಈ ಸಮಯದಲ್ಲಿ ತಮ್ಮ ಪೋನ್ ನಲ್ಲಿ ಸ್ಟೋರ್‍ ಆಗಿರುವಂತಹ ಪೊಟೋಗಳು ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಲು ಒಲ್ಲದ ಮನಸ್ಸಿನಿಂದ ಮುಂದಾಗುತ್ತಾರೆ. ಇಲ್ಲಿ ಸಂಗ್ರಹಿಸಿದ ಮಾಹಿತಿಯಂತೆ ನೀವು ಫಾಲೋ ಮಾಡಿದರೇ ನಿಮ್ಮ ಸ್ಟೋರೇಜ್ ಕೊಂಚ ಸೇವ್ ಆಗುತ್ತದೆ.

phone storage optimization trics 1

ಈ ಟಿಪ್ಸ್ ಬಳಸಿ ಖಾಲಿ ಮಾಡಬಹುದು: ಸ್ಮಾರ್ಟ್‌ಫೋನ್‌ಗಳನ್ನು ಬಳಸುವಾಗ ನಾವು ಸಾಮಾನ್ಯವಾಗಿ ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತೇವೆ. ಫೋನ್‌ನಲ್ಲಿರುವ ಜಾಗ ತುಂಬಿದಾಗ, ಹೊಸ ಫೋಟೋಗಳು, ವೀಡಿಯೋಗಳು, ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ಕಷ್ಟವಾಗುತ್ತದೆ. ಸ್ಟೋರೇಜ್ ಖಾಲಿ ಮಾಡಲು ಈ ಕೆಲವೊಂದು ಸರಳ ಉಪಾಯಗಳನ್ನು ಅನುಸರಿಸಬಹುದು:

  • ಅನಾವಶ್ಯಕ ಫೈಲ್‌ಗಳನ್ನು ಅಳಿಸಿ: ನೀವು ಹೆಚ್ಚಾಗಿ ಬಳಸದ ಫೈಲ್‌ಗಳನ್ನು ಅಳಿಸಿ. ವಿಶೇಷವಾಗಿ ಡೌನ್‌ಲೋಡ್ ಫೋಲ್ಡರ್‌ ಅನ್ನು ಪರಿಶೀಲಿಸಿ. ಅನಾವಶ್ಯಕ ಫೈಲ್‌ಗಳು ಅಲ್ಲಿ ಹೆಚ್ಚು ಸಂಗ್ರಹವಾಗಿರುವ ಸಾಧ್ಯತೆ ಇದೆ.
  • ಕೆಲವು ಅಪ್ಲಿಕೇಶನ್‌ಗಳನ್ನು ಅನ್‌ಇನ್ಸ್ಟಾಲ್ ಮಾಡಿ: ನೀವು ಬಳಸದ ಅಥವಾ ಕಡಿಮೆ ಬಳಸುವ ಅಪ್ಲಿಕೇಶನ್‌ಗಳನ್ನು ಅನ್‌ಇನ್ಸ್ಟಾಲ್ ಮಾಡಿ. ಹೆಚ್ಚಿನ ಅಪ್ಲಿಕೇಶನ್‌ಗಳು ಡೇಟಾ ಮತ್ತು ಕ್ಯಾಶೆ ಇತ್ಯಾದಿಗಳನ್ನು ಸಂಗ್ರಹಿಸುತ್ತವೆ.
  • ಫೋಟೋಗಳು ಮತ್ತು ವೀಡಿಯೋಗಳನ್ನು ಕ್ಲೌಡ್‌ಗೆ ಸ್ಥಳಾಂತರಿಸಿ: ನಿಮ್ಮ ಪ್ರಮುಖ ಫೋಟೋಗಳು ಮತ್ತು ವೀಡಿಯೋಗಳನ್ನು Google Photos ಅಥವಾ i Cloud ಮತ್ತಿತರ ಕ್ಲೌಡ್ ಸ್ಟೋರೇಜ್ ಸೇವೆಗಳಿಗೆ ಅಪ್ಲೋಡ್ ಮಾಡಿ. ಇದರಿಂದ ನಿಮ್ಮ ಫೋನ್‌ನಲ್ಲಿ ಜಾಗ ಖಾಲಿಯಾಗುತ್ತದೆ.
  • ಆಪ್ಟಿಮೈಸ್ ಮಾಡಿದ ಸಂಗ್ರಹಣೆ (Storage Optimization) ಬಳಸಿ: iPhone ಬಳಕೆದಾರರು “Storage Optimization” ಆಯ್ಕೆಯನ್ನು ಬಳಸಬಹುದು. ಇದು ಸ್ವತಃ ಫೈಲ್‌ಗಳನ್ನು ಕ್ಲೌಡ್‌ಗೆ ಸ್ಥಳಾಂತರಿಸುತ್ತದೆ ಮತ್ತು ನಿಮ್ಮ ಫೋನ್‌ನಲ್ಲಿ ಜಾಗವನ್ನು ಖಾಲಿ ಮಾಡುತ್ತದೆ.
  • ಚಾಟ್ ಅಪ್ಲಿಕೇಶನ್‌ಗಳ ಕ್ಯಾಶ್ ಮತ್ತು ಡೇಟಾ ಅಳಿಸಿ: WhatsApp, Telegram ಮತ್ತಿತರ ಚಾಟ್ ಅಪ್ಲಿಕೇಶನ್‌ಗಳ ಕ್ಯಾಶೆ ಮತ್ತು ಡೇಟಾ ಹೆಚ್ಚು ಸ್ಟೋರೇಜ್ ಬಳಕೆ ಮಾಡಬಹುದು. ಆ ಅಪ್ಲಿಕೇಶನ್‌ಗಳ ಸೆಟ್ಟಿಂಗ್ ಗಳಲ್ಲಿ ಹೋಗಿ, ಕ್ಯಾಶ್ ಮತ್ತು ಡೇಟಾ ಕ್ಲಿಯರ್ ಮಾಡಿ.
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular