ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಚಿರತೆಯನ್ನು ಕಂಡು ಭಯಭೀತರಾಗಿದ್ದರು. ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ಚಿರತೆ ದಾಳಿ (leopard Attack) ಸಹ ಮಾಡಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಚಿರತೆ ಹುಡುಕಿ ಕೊಂದು ಹಾಕಿದ್ದಾರೆ.
ಚಿರತೆಯೊಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಈ ಚಿರತೆ ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಬಳಿಕ ಭಯಭೀತರಾದ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆದರೆ ಏನು ಪ್ರಯೋಜನವಾಗದ ಕಾರಣದಿಂದ ಗ್ರಾಮಸ್ಥರು ತಾವೇ ಚಿರತೆ ಹಿಡಿಯಲು ಮುಂದಾಗಿದ್ದರು. ಚಿರತೆ ಕಾಣಿಸಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಕಟ್ಟಿಗೆ ಕಲ್ಲು ಬಡಿಗೆಗಳೊಂದಿಗೆ ಏಕಕಾಲಕ್ಕೆ ಚಿರತೆ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಿರತೆ ಸತ್ತಿದೆ. ಈ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರೂ ಸಹ ಚಿರತೆಯನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಅರಣ್ಯ ಸಿಬ್ಬಂದಿ, ಪೊಲೀಸರ ಎದುರಿನಲ್ಲೇ ರೊಚ್ಚಿಗೆದ್ದ ಗ್ರಾಮಸ್ಥರು ಚಿರತೆಯನ್ನು ಹೊಡೆದು ಕೊಂದಿದ್ದಾರೆ.
ಇನ್ನೂ ರೊಚ್ಚಿಗೆದ್ದ ಪೊಲೀಸರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯ್ತು ಎನ್ನಲಾಗಿದೆ. ಜೊತೆಗೆ ಲಘು ಲಾಠಿ ಪ್ರಹಾರ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲವಂತೆ. ಚಿರತೆಯನ್ನು ಕೊಂದ ಬಳಿಕ ಪಶು ಅಂಬ್ಯುಲೆನ್ಸ್ ನಲ್ಲಿ ಚಿರತೆಯ ಮೃತದೇಹವನ್ನು ಹಾಕಿದ್ದಾರೆ. ಚಿರತೆ ಹಿಡಿಯಲು ಅಸಹಾಯಕರಾಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಮೊದಲೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ. ಆದ್ದರಿಂದಲೇ ಗ್ರಾಮಸ್ಥರೇ ಚಿರತೆ ಮೇಲೆ ದಾಳಿ ಮಾಡಿ ಕೊಂದಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಈ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.