ಅನೇಕ ಚಾಲಕರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಬಸ್ ಚಾಲನೆ ಮಾಡುವಾಗ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿರುತ್ತಾರೆ. ಇದೀಗ ಬಸ್ ಚಾಲಕನೋರ್ವನಿಗೆ ಬಸ್ ಚಲಾಯಿಸುವಾಗ ಪಿಟ್ಸ್ ಬಂದರೂ ಸಮಯಪ್ರಜ್ಞೆ ಮೆರೆದು ಸಂಭವಿಸಬಹುದಾಗಿದ್ದ ಭಾರಿ ಅವಘಡ ತಪ್ಪಿಸಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ಉಡುಪಿಯ ಪರ್ಕಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ.
ಬಸ್ ಚಾಲಕ ಪರ್ಕಳ ಕೆನರಾ ಬ್ಯಾಂಕ್ ಬಳಿ ತಿರುವಿನಲ್ಲಿ, ಉಡುಪಿಯಿಂದ ಭೈರಂಜೆಗೆ ಹೋಗುತ್ತಿದ್ದ ಬಸ್ ಚಾಲಕನ ಬಾಯಿಯಿಂದ ನೊರೆ ಹೊರಗೆ ಬಂದು ಪಿಟ್ಸ್ ಕಾಣಿಸಿಕೊಂಡಿದೆ. ಈ ಕಾರಣದಿಂದ ಚಾಲಕನ ಕೈಯಿಂದ ಬಸ್ ನಿಯಂತ್ರಣ ತಪ್ಪಿದೆ. ಬಸ್ ಏರಿನಲ್ಲಿ ಹತ್ತುತ್ತಿರುವುದರಿಂದ ಬಸ್ ಕೂಡಲೇ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ. ಈ ನಡುವೆ ಚಾಲಕ ಸಮಯ ಪ್ರಜ್ಞೆ ಮೆರೆದಿದ್ದಾನೆ. ಅಸ್ವಸ್ಥತೆಯ ನಡುವೆಯೂ ಕಷ್ಟಪಟ್ಟು ಹಿಮ್ಮುಖವಾಗಿ ಚಲಿಸುತ್ತಿದ್ದಂತಹ ಬಸ್ ನ್ನು ಬಲಕ್ಕೆ ತಿರುಗಿಸಿ ಚರಂಡಿಗೆ ಇಳಿಯುವಂತೆ ಮಾಡಿ ಅವಘಡ ಸಂಭವಿಸಿದಂತೆ ಮಾಡಿದ್ದಾನೆ.
ಇನ್ನೂ ಬಸ್ ನಲ್ಲಿದ್ದ ಪ್ರಯಾಣಿಕರು ಈ ಸಮಯದಲ್ಲಿ ಗಾಬರಿಗೊಂಡು ಬಸ್ ನಿಂದ ಹೊರೆಗೆ ಹಾರಿದ್ದಾರೆ. ಬಳಿಕ ಚಾಲಕನನ್ನು ಆಟೋವೊಂದರ ಮೂಲಕ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಬಸ್ ಮೇಲಕ್ಕೆತ್ತುವ ಕಾರ್ಯ ಕೈಗೊಂಡಿದ್ದಾರೆ. ಸದ್ಯ ಚಾಲಕ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಚಾಲಕನ ಸಮಯ ಪ್ರಜ್ಞೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.