TV serial – ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ಟಿವಿ ಸೀರಿಯಲ್ನಿಂದ ವಿಚಿತ್ರ ಘಟನೆಯೊಂದು ನಡೆದಿದೆ. ಧಾರಾವಾಹಿ ನೋಡುತ್ತಿದ್ದ ಪತ್ನಿ ಹಾಗೂ ಊಟ ಕೇಳಿದ ಪತಿಯ ನಡುವೆ ಜಗಳವಾಗಿದ್ದು, ಈ ಹಿನ್ನಲೆ ಮನನೊಂದ ಪತ್ನಿ ತನ್ನ ಮಗನೊಂದಿಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆಯು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ.
TV serial – ಬೈಯಾರಂನ ದಂಪತಿ
ಬೈಯಾರಂ ಮಂಡಲದ ಕೋಡಿಪುಂಜುಲಾ ತಾಂಡಾ ನಿವಾಸಿ ದಾರಾವತ್ ರಾಜು ಮತ್ತು ಕವಿತಾ ಎಂಬ ದಂಪತಿ ಇದ್ದರು. ಇವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದರು. ಇವರಿಬ್ಬರೂ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ರಾಜು ಪ್ರತಿದಿನ ವ್ಯವಸಾಯ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬರುತ್ತಿದ್ದ. ಅಂತೆಯೇ ನಿನ್ನೆ ಕೂಡ, ಕೆಲಸ ಮುಗಿಸಿ ಮನೆಗೆ ಬಂದ ರಾಜು, ತನ್ನ ಪತ್ನಿ ಕವಿತಾ ಬಳಿ ಊಟಕ್ಕೆ ಸಿದ್ಧಪಡಿಸುವಂತೆ ಕೇಳಿದ್ದಾನೆ.
TV serial – ಟಿವಿ ಸೀರಿಯಲ್‌ಗಾಗಿ ಜಗಳ
ಆದರೆ, ಕವಿತಾ ಆಗಲೇ ಟಿವಿ ಸೀರಿಯಲ್ ನೋಡುತ್ತಾ ತಲ್ಲೀನಳಾಗಿದ್ದಳು. ರಾಜು ಊಟಕ್ಕೆ ಕರೆದಾಗ, ಜಾಹೀರಾತು ಬರುವಾಗ ಊಟ ಬಡಿಸುವುದಾಗಿ ಹೇಳಿದ್ದಾಳೆ. ಇದರಿಂದಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ. ರಾಜು “ನನ್ನ ಹಸಿವಿಗಿಂತ ನಿನಗೆ ಸೀರಿಯಲ್ ಮುಖ್ಯವೇ?” ಎಂದು ಕೋಪಗೊಂಡಿದ್ದಾರೆ. ಇದರಿಂದ ರಾಜು ಮನೆ ಬಿಟ್ಟು ಹೊರಗೆ ಹೋಗಿದ್ದಾನೆ.
Read this also : ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ; ಕರಾಳ ಸತ್ಯ ಬಿಚ್ಚಿಟ್ಟ 8 ವರ್ಷದ ಪುತ್ರ!
ಮನನೊಂದ ಪತ್ನಿಯ ಆತ್ಮಹತ್ಯೆ ಯತ್ನ
ಪತಿ ತನ್ನ ಮೇಲೆ ಕೋಪಗೊಂಡಿದ್ದಕ್ಕೆ ಮನನೊಂದ ಕವಿತಾ ತೀವ್ರ ಬೇಸರಗೊಂಡಿದ್ದಾಳೆ. ಬಳಿಕ ತನ್ನ ಮಗನಿಗೆ ಕೀಟನಾಶಕವನ್ನು ಕುಡಿಸಿ, ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತನ್ನ ಮಗಳಿಗೂ ಕುಡಿಸಲು ಮುಂದಾದಾಗ, ಹೊರಗಡೆಯಿಂದ ಮನೆಗೆ ಬಂದ ಪತಿ ರಾಜು ಕೂಡಲೇ ಗಮನಿಸಿ ತಡೆದಿದ್ದಾರೆ. ತಕ್ಷಣವೇ ವಿಷ ಕುಡಿದ ತಾಯಿ-ಮಗನನ್ನು ಸ್ಥಳೀಯರ ಸಹಾಯದಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದರಿಂದ, ಉತ್ತಮ ಚಿಕಿತ್ಸೆಗಾಗಿ ವಾರಂಗಲ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇನ್ನೂ ಈ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದಂಪತಿಗಳ ನಡುವಿನ ಜಗಳ, ಮತ್ತು ಹೆಂಡತಿಯ ಇಂತಹ ವಿಪರೀತ ನಿರ್ಧಾರ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ.