ಸಿನಿಮಾಗಳಲ್ಲಿ ಪ್ರೇಮಿಗಳು ಮದುವೆ ನಿಲ್ಲಿಸಲು ಮಂಟಪಕ್ಕೆ ಬಂದು ಹೈಡ್ರಾಮಾ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ತೆಲಂಗಾಣದಲ್ಲಿ ನಡೆದ ಈ ರಿಯಲ್ ಸ್ಟೋರಿ ಕೇಳಿದರೆ ಸಿನಿಮಾಗಳೂ ಫೇಲ್ ಅನಿಸತ್ತೆ. ತಾನು 7 ವರ್ಷಗಳಿಂದ ಪ್ರೀತಿಸಿದ ಹುಡುಗಿಗೆ ಬೇರೆ ಕಡೆ ಮದುವೆ ನಿಶ್ಚಯವಾಗಿದೆ (Telangana Lover Poster) ಎಂದು ಗೊತ್ತಾದ ತಕ್ಷಣ, ಈ ಪ್ರೇಮಿ ಮಾಡಿದ್ದೇನು ಗೊತ್ತಾ? ನೇರವಾಗಿ ಹುಡುಗನ ಊರಿಗೇ ಹೋಗಿ ಇಡೀ ಹಳ್ಳಿಯ ತುಂಬಾ ಪೋಸ್ಟರ್ ಅಂಟಿಸಿಬಿಟ್ಟಿದ್ದಾನೆ. ರಾಜನ್ನ ಸಿರಿಸಿಲ್ಲ ಜಿಲ್ಲೆಯಲ್ಲಿ ನಡೆದಿರುವ ಈ ರೋಚಕ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

Telangana Lover Poster – ಸಿನಿಮೀಯ ಶೈಲಿಯಲ್ಲಿ ಮದುವೆ ನಿಲ್ಲಿಸಲು ಪ್ರೇಮಿಯ ಮಾಸ್ಟರ್ ಪ್ಲಾನ್!
ಲಾಜಿಕ್ ಇಲ್ಲದ ಕಥೆಗಳಿಗಿಂತ ಈ ಪ್ರೇಮಿಯ ಐಡಿಯಾ ನಿಜಕ್ಕೂ ಸೋಶಿಯಲ್ ಮೀಡಿಯಾ ಮಂದಿಯನ್ನು ದಂಗಾಗಿಸಿದೆ. ಸಿದ್ದಿಪೇಟೆ ಜಿಲ್ಲೆಯ ಯುವಕ ಮತ್ತು ಯುವತಿ ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಹುಡುಗಿಯ ಮನೆಯವರು ಇವರ ಪ್ರೀತಿಯನ್ನು ಒಪ್ಪದೆ, ತಂಗಳ್ಳಪಲ್ಲಿಯ ಯುವಕನ ಜೊತೆ ಮದುವೆ ಫಿಕ್ಸ್ ಮಾಡಿ ಮುಹೂರ್ತವನ್ನೂ ಇಟ್ಟಿದ್ದರು. ತನ್ನ ಪ್ರೀತಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಪ್ರೇಮಿ, ಮದುವೆ ನಿಲ್ಲಿಸಲು ಒಂದು ಭಿನ್ನವಾದ ಹಾದಿ ಹಿಡಿದಿದ್ದಾನೆ. ನೇರವಾಗಿ ಮದುಮಗನ ಊರಿಗೆ ಕಾರಿನಲ್ಲಿ ಎಂಟ್ರಿ ಕೊಟ್ಟವನೇ, ರಾತ್ರೋರಾತ್ರಿ ಇಡೀ ಊರಿನ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದ್ದಾನೆ.
ಪೋಸ್ಟರ್‌ನಲ್ಲಿ ಏನಿತ್ತು? ವರದಕ್ಷಿಣೆ ಆರೋಪ ಮಾಡಿದ ಯುವಕ!
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹುಡುಗ ನೇರವಾಗಿ ಹುಡುಗಿಯ ಮದುವೆ ಮಂಟಪಕ್ಕೆ ಹೋಗುತ್ತಾನೆ. ಆದರೆ ಇಲ್ಲಿ ಪ್ರೇಮಿ ಮಾಡಿದ್ದು ಬೇರೆ. ತಾನು ಮತ್ತು ತನ್ನ ಗರ್ಲ್‌ಫ್ರೆಂಡ್ ಒಟ್ಟಿಗೆ ಇರುವ ಫೋಟೋಗಳ ಜೊತೆಗೆ, (Telangana Lover Poster) ಮದುವೆಯಾಗಲಿರುವ ಹುಡುಗನ ಫೋಟೋವನ್ನು ಹಾಕಿ ಪೋಸ್ಟರ್ ಪ್ರಿಂಟ್ ಮಾಡಿಸಿದ್ದಾನೆ. ಅಷ್ಟೇ ಅಲ್ಲ, ಅದರಲ್ಲಿ ಹುಡುಗ ಮತ್ತು ಆತನ ತಂದೆಯ ಹೆಸರು, ಫೋನ್ ನಂಬರ್ ಸೇರಿದಂತೆ ಕಂಪ್ಲೀಟ್ ಡಿಟೇಲ್ಸ್ ಹಾಕಿದ್ದಾನೆ. Read this also : 60ರ ಹರೆಯದಲ್ಲಿ ಅರಳಿದ ಪ್ರೀತಿ: ಟೀ ಸ್ಟಾಲ್‌ನಲ್ಲಿ ಶುರುವಾದ ಪರಿಚಯ, ಕೇವಲ 15 ದಿನಗಳಲ್ಲಿ ಮದುವೆ!
‘ವರದಕ್ಷಿಣೆಗಾಗಿ ಬಲವಂತದ ಮದುವೆ’
ನಾವು ಪ್ರೀತಿಸುತ್ತಿರುವ ವಿಷಯ ಮನೆಯವರಿಗೆ ಗೊತ್ತಿದ್ದರೂ ಒಪ್ಪಿಲ್ಲ. ಕೇವಲ ಹಣ ಮತ್ತು ವರದಕ್ಷಿಣೆ ಆಸೆಗೆ ಬಿದ್ದು ತನ್ನ ಪ್ರೇಯಸಿಗೆ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಈ ಮದುವೆ ಮಾಡುತ್ತಿದ್ದಾರೆ ಎಂದು ಆ (Telangana Lover Poster) ಪೋಸ್ಟರ್‌ನಲ್ಲಿ ಹುಡುಗ ಗಂಭೀರ ಆರೋಪ ಮಾಡಿದ್ದಾನೆ. “ನಾವು ಪ್ರೀತಿಸುತ್ತಿದ್ದೇವೆ, ನೀನು ಈ ಮದುವೆ ಮಾಡ್ಕೋಬೇಡ” ಎಂದು ಮದುಮಗನಿಗೆ ನೇರವಾಗಿಯೇ ಮೆಸೇಜ್ ಕೊಟ್ಟಿದ್ದಾನೆ.

ಸಿಸಿಟಿವಿಯಲ್ಲಿ ಸೆರೆಯಾಯ್ತು ಪ್ರೇಮಿಯ ಪೋಸ್ಟರ್ ಸಾಹಸ
ಬೆಳಗ್ಗೆ ಎದ್ದು ನೋಡಿದ ಗ್ರಾಮಸ್ಥರಿಗೆ ಊರಿನ ಗೋಡೆಗಳ ಮೇಲಿದ್ದ ಪೋಸ್ಟರ್‌ಗಳನ್ನು (ಸಂಬಂಧಪಟ್ಟ ಪೋಸ್ಟ್ ವಿಡಿಯೋ ಲಿಂಕ್ ಇಲ್ಲಿದೆ ನೋಡಿ) ನೋಡಿ ಶಾಕ್ ಆಗಿದೆ. ಸದ್ಯ ಈ ಮದುವೆ ಪೋಸ್ಟರ್ ಸುದ್ದಿ ಇಡೀ ಜಿಲ್ಲೆಯಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಯುವಕ ಕಾರಿನಲ್ಲಿ ಬಂದು ಪೋಸ್ಟರ್ ಅಂಟಿಸುತ್ತಿರುವ ದೃಶ್ಯಗಳು ಹತ್ತಿರದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸದ್ಯಕ್ಕೆ ಈ ಹೈಡ್ರಾಮಾ ಪೊಲೀಸ್ ಠಾಣೆ ಮೆಟ್ಟಿಲೇರುವ (Telangana Lover Poster) ಸಾಧ್ಯತೆಯಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸರು, “ಸದ್ಯಕ್ಕೆ ಘಟನೆ ನಮ್ಮ ಗಮನಕ್ಕೆ ಬಂದಿದೆ. ಮದುಮಗನ ಕಡೆಯವರಿಂದ ಅಥವಾ ಹುಡುಗಿಯ ಮನೆಯವರಿಂದ ಅಧಿಕೃತ ದೂರು ಬಂದರೆ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.
