Saturday, August 2, 2025
HomeNationalಮದುವೆ ಮನೆಯಲ್ಲಿ ಶೋಕಸಾಗರ, ಅಕ್ಕನ ಮದುವೆಯಲ್ಲಿ ನೃತ್ಯ ಮಾಡುತ್ತಾ ಮೃತಪಟ್ಟ ತಂಗಿ, ವಿಡಿಯೋ ವೈರಲ್….!

ಮದುವೆ ಮನೆಯಲ್ಲಿ ಶೋಕಸಾಗರ, ಅಕ್ಕನ ಮದುವೆಯಲ್ಲಿ ನೃತ್ಯ ಮಾಡುತ್ತಾ ಮೃತಪಟ್ಟ ತಂಗಿ, ವಿಡಿಯೋ ವೈರಲ್….!

ಇತ್ತೀಚಿಗೆ ಹೃದಯಾಘಾತ ಯಾರಿಗೆ ಯಾವ ಸಮಯದಲ್ಲಿ ಸಂಭವಿಸುತ್ತದೆ ಎಂಬುದನ್ನು ಹೇಳುವುದು ತುಂಬಾ ಕಷ್ಟ ಎನ್ನಬಹುದು. ಮಕ್ಕಳು, ಯುವಕರು, ವೃದ್ದರು ಎಂಬ ವ್ಯತ್ಯಾಸವಿಲ್ಲದೇ ಎಲ್ಲಾ ವಯಸ್ಸಿನವರೂ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಅಂತಹುದೇ ಘಟನೆಯೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ರಿಮ್ಯಾ ಎಂದು ಗುರ್ತಿಸಲಾಗಿದ್ದು, ತಮ್ಮ ಅಕ್ಕನ ಮದುವೆಯ ಸಂತೊಷದಲ್ಲಿ ಖುಷಿಯಾಗಿ ನೃತ್ಯ ಮಾಡುತ್ತಾ ಮೃತಪಟ್ಟಿದ್ದಾಳೆ.

girl dead in sister marriage 1

ಇತ್ತೀಚಿಗೆ ಚಿಕ್ಕವರು ದೊಡ್ಡವರು ಎಂಬ ಬೇದಭಾವವಿಲ್ಲದೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಆಟವಾಡುತ್ತಾ, ಸಂತೋಷದಿಂದ ನೃತ್ಯ ಮಾಡುತ್ತಾ ಅನೇಕರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಅಂತಹುದೇ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ತನ್ನ ಸಹೋದರಿಯ ಮದುವೆ ಎಂದು ತಿಳಿದ ಕೂಡಲೇ ಆಕೆ ಪುಲ್ ಖುಷಿಯಿಂದ ನೃತ್ಯ ಮಾಡಿದ್ದಾಳೆ. ಮಕ್ಕಳೊಂದಿಗೆ ನೃತ್ಯ ಮಾಡುತ್ತಾ ಸಂತೋಷದಿಂದ ಕುಣಿದಿದ್ದಾಳೆ. ಆದರೆ ಇದ್ದಕ್ಕಿದ್ದಂತೆ ಆಕೆ ಕುಸಿದು ಬಿದ್ದಿದ್ದಾಳೆ. ಈ ಸಮಯದಲ್ಲಿ ಆಕೆಗೆ ಏನಾಯ್ತು ಎಂದು ಎಲ್ಲರೂ ಗಾಬರಿಗೊಂಡಿದ್ದಾರೆ. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಆದರೆ ಅದಾಗಲೇ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ವೈದ್ಯರು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಸಂಭ್ರಮ ಮನೆ ಮಾಡಿದ್ದ ಮದುವೆ ಮನೆಯಲ್ಲಿ ಇದೀಗ ಶೋಕಸಾಗರ ತುಂಬಿದೆ.

ಇನ್ನೂ ಮೃತ ರಿಮ್ಯಾಗೆ 18 ವರ್ಷ ವಯಸ್ಸು. ಬದುಕಿ ಬಾಳಬೇಕಾದ ಯುವತಿ ಇದೀಗ ಮೃತಪಟ್ಟಿದ್ದಾರೆ. ಆಕೆಯ ಮರಣದ ಸುದ್ದಿ ಇಡೀ ಕುಟುಂಬದಲ್ಲಿ ಶೋಕಸಾಗರ ತುಂಬುವಂತೆ ಮಾಡಿದೆ. ಈ ಸಂಬಂಧ ವಿಡಿಯೋ ಒಂದನ್ನು ಆನಂದ್ ಪನ್ನಾ ಎಂಬುವವರು ತಮ್ಮ ಟ್ವಿಟರ್‍ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular