Teachers Day – ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ದೊಡ್ಡದು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುಡಿಬಂಡೆ ತಾಲೂಕು ಕಾರ್ಯದರ್ಶಿ ವಿ.ಶ್ರೀರಾಮಪ್ಪ ಹೇಳಿದರು. ಕೇವಲ ಪಾಠ ಹೇಳಿಕೊಡುವುದಷ್ಟೇ ಅಲ್ಲದೆ, ಶಿಕ್ಷಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
Teachers Day – ಶಿಕ್ಷಕರಿಗೂ ಮಾನಸಿಕ ನೆಮ್ಮದಿ ಬೇಕು
“ಪ್ರತಿ ಸಾಧಕನ ಯಶಸ್ಸಿನ ಹಿಂದೆ ಒಬ್ಬ ಶಿಕ್ಷಕನ ಶ್ರಮ ಇರುತ್ತದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಬೆಳಗ್ಗಿನಿಂದ ಸಂಜೆಯವರೆಗೆ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ನಿರತರಾಗಿರುವ ಶಿಕ್ಷಕರಿಗೂ ಮಾನಸಿಕ ನೆಮ್ಮದಿ ಬೇಕು. ಅದಕ್ಕಾಗಿ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಮುಖ್ಯ” ಎಂದು ಶ್ರೀರಾಮಪ್ಪ ವಿವರಿಸಿದರು.
Teachers Day – ಶಿಕ್ಷಕರು ಕ್ರೀಡಾಕೂಟಗಳಲ್ಲಿ ಭಾಗಿಯಾಗಿ
ಇದೇ ವೇಳೆ, ಶಿಕ್ಷಣ ಇಲಾಖೆಯ ಟಿಪಿಒ ಅಂಜಿನಪ್ಪ ಮಾತನಾಡಿ, “ಆರೋಗ್ಯಕರ ಜೀವನ ಪ್ರತಿಯೊಬ್ಬರಿಗೂ ಮುಖ್ಯ. ಸರ್ಕಾರಿ ನೌಕರರು ಮತ್ತು ಶಿಕ್ಷಕರು ಹೆಚ್ಚಾಗಿ ಕೆಲಸದ ಒತ್ತಡದಲ್ಲಿರುತ್ತಾರೆ. ವರ್ಷಕ್ಕೆ ಒಂದೆರಡು ದಿನ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು” ಎಂದರು. ಅವರು ‘ಆರೋಗ್ಯವೇ ಅತಿ ದೊಡ್ಡ ಸಂಪತ್ತು’ ಎಂಬ ಮಾತನ್ನು ಒತ್ತಿ ಹೇಳಿದರು, ಮತ್ತು ಎಲ್ಲರೂ ಇಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು. Read this also : ಶಿಕ್ಷಕರಿಗೆ ಇರುವ ಗೌರವ ಈ ಜಗತ್ತಿಗಳಲ್ಲಿ ಯಾವುದೇ ಉನ್ನತ ಹುದ್ದೆಯಲ್ಲಿರುವವರಿಗೆ ಸಿಗೊಲ್ಲ: ಸುಬ್ಬಾರೆಡ್ಡಿ
Teachers Day – ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾದ ಶಿಕ್ಷಕರು
ಕಾರ್ಯಕ್ರಮದ ಅಂಗವಾಗಿ ಗುಂಡು ಎಸೆತ, ಹಗ್ಗಜಗ್ಗಾಟ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರು ಈ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ವಿ.ಶ್ರೀರಾಮಪ್ಪ, ಉಪಾಧ್ಯಕ್ಷೆ ಸುಮಿತ್ರ, ಇಸಿಒ ರಾಘವೇಂದ್ರ, ಬಿಆರ್‌ಪಿ ಮಂಜುನಾಥ್, ದೈಹಿಕ ಶಿಕ್ಷಕರ ಸಂಘದ ಮುಬಾರಕ್, ಎನ್‌ಪಿಎಸ್ ಸಂಘದ ಮುರಳಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.