Tuesday, November 5, 2024

Teachers Day: ಶಿಕ್ಷಕ ವೃತ್ತಿ ಕೆಲಸವಲ್ಲ, ಅದೊಂದು ಹೊಣೆಗಾರಿಕೆ: ರವೀಂದ್ರ

ಜೀವನದಲ್ಲಿ ಹಣ, ಅಧಿಕಾರ ಕಳೆದುಕೊಂಡರೆ ಅವನ್ನು ಪ್ರಯತ್ನ ಮತ್ತು ಪರಿಶ್ರಮದಿಂದ ಮರಳಿ ಸಂಪಾದಿಸಬಹುದು. ಆದರೆ ವ್ಯಕ್ತಿತ್ವ ಕಳೆದುಕೊಂಡರೆ (Teachers Day) ಇಡಿ ಜೀವನವನ್ನೇ ಕಳೆದುಕೊಂಡಂತೆ. ಅಂಥ ವ್ಯಕ್ತಿತ್ವ ಕಟ್ಟಿಕೊಡುವವರು ಶಿಕ್ಷಕರು, ಹೀಗಾಗಿ, ಶಿಕ್ಷಕ ವೃತ್ತಿ ಒಂದು ಕೆಲಸವಲ್ಲ ಅದು ಹೊಣೆಗಾರಿಕೆ ಎಂದು (Teachers Day) ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ರವೀಂದ್ರ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆ ಪ್ರಯುಕ್ತ (Teachers Day) ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

Teachers day in PU Collage
Teachers day in PU Collage

ನಂತರ ಕನ್ನಡ ಉಪನ್ಯಾಸಕ ಡಿ.ಮೋಹನ್ ಕುಮಾರ್ ಮಾತನಾಡಿ, (Teachers Day) ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ಅತ್ಯಮೂಲ್ಯವಾದ ಕೊಡುಗೆ ಎಂದರೆ ಜೀವನದಲ್ಲಿ ಏನನ್ನಾದರೂ ಸಾಧಿಸಿ ಅವರ ಎದುರು ಬಂದು ನಿಂತು ನಾನಿಂದು ಈ ಹುದ್ದೆಯಲ್ಲಿ ಇದ್ದೆನೆ ಎಂದರೆ ಅದ್ಕಕ್ಕಿಂತ ಅಮೂಲ್ಯ ಕೊಡುಗೆ ಯಾವುದು ಇರುವುದಿಲ್ಲ, ಪ್ರತಿಯೊಬ್ಬರ ಜೀವನದ ಯಶಸ್ಸಿಗೆ ಶಿಕ್ಷಕರ ಮಾರ್ಗದರ್ಶನ ಅವಶ್ಯ, ಅಕ್ಷರಜ್ಞಾನ ಬದುಕಿಗೆ ಆಸರೆಯಾಗುತ್ತದೆ. ಆ ಜ್ಞಾನ ನೀಡಿದ ಗುರುವಿನ ಋಣ ಎಂದಿಗೂ ಮರೆಯಬಾರದು ಎಂದರು.

ಈ ಸಂದರ್ಭದಲ್ಲಿ (Teachers Day) ಪ್ರಥಮ ಪಿಯು ವಾಣಿಜ್ಯ ವಿಭಾಗದ ವಿಧ್ಯಾರ್ಥಿನಿ ನಂದಿನಿ ಮಾತನಾಡಿ ನಮಗೆ ನಮ್ಮ ಉಪನ್ಯಾಸಕರು ಈ ಪ್ರಾಥಮಿಕ ಹಂತದಲ್ಲಿ ಬಿತ್ತುವ ಅಕ್ಷರ ಜ್ಞಾನ ಮತ್ತು ನಮ್ಮೊಂದಿಗಿನ ಬಾಂಧವ್ಯ, ತಿದ್ದಿ ತೀಡುವುದು, ಇವೆಲ್ಲವೂ ನಮ್ಮ ಭವಿಷ್ಯದ ಬದುಕಿಗೆ ನೀಡುವ ದಾರಿದೀಪವಾಗಿದೆ ಎಂದು ಅಭಿಪ್ರಾಯ ಪಟ್ಟರು.  ಬಳಿಕ ಪ್ರಥಮ ಪಿಯು ವಿಜ್ಞಾನ ವಿಭಾಗದ ಮುಬಾರಕ್ (Teachers Day) ಮಾತನಾಡಿ ನಮ್ಮ ಶಿಕ್ಷಕರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಬೇಕಾದರೆ ಕಾಲೇಜಿಗೆ ಉತ್ತಮ ಫಲಿತಾಂಶ ತಂದು ಕೊಡುವ ಪ್ರತಿಜ್ಞೆ ಮಾಡೋಣ ಎಂದರು, ನಂತರ ಉಪನ್ಯಾಸಕರಿಗೆ ಅಭಿನಂದನೆ ಸಲ್ಲಿಸಿ ಶಿಕ್ಷಕರ ದಿನಾಚರಣೆಯ ಶುಭ ಹಾರೈಸಿದರು.

Teachers day in PU Collage
Teachers day in PU Collage

ವಿಜ್ಞಾನ ವಿಭಾಗದ ನೂರ್ ಸಲೀಮಾ (Teachers Day) ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ದೊಡ್ಡದು. ವಿದ್ಯಾರ್ಥಿಗಳ ಏಳಿಗೆಗಾಗಿ ಅಧ್ಯಾಪಕರ ಶ್ರಮ ಶ್ಲಾಘನೀಯ. ಇದನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳು ಶ್ರಮ ವಹಿಸಿ ಮುನ್ನಡದರೆ ಅಸಾಧಾರಣ ಸಾಧನೆ ಮಾಡಬಹುದು ಎಂದರು.  ಬಳಿಕ ಹಿರಿಯ ಉಪನ್ಯಾಸಕ ಆರ್. ಜಿ. ಸೋಮಶೇಖರ್ ಮಾತನಾಡಿ (Teachers Day) ಸೋಲೇ ಗೆಲುವಿನ ಮೆಟ್ಟಿಲು ಎನ್ನುವ ವಿಚಾರವನ್ನು ಮನದಟ್ಟು ಮಾಡಿಕೊಂಡು ವಿದ್ಯಾರ್ಥಿಗಳು ಸತತ ಪ್ರಯತ್ನದ ಮೂಲಕ ಗೆಲುವಿನ ಹಾದಿಯ ಕಡೆಗೆ ಸಾಗಬೇಕು. ತಮ್ಮ ಗುರಿಯ ಕಡೆಗೆ ಸ್ಪಷ್ಟನೆಯನ್ನು ರೂಪಿಸುತ್ತಾ ಮುಂದುವರಿಯಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ (Teachers Day) ಸಮಾಜ ಶಾಸ್ತ್ರ ಉಪನ್ಯಾಸಕ ನರೇಶ್, ಭೌತಶಾಸ್ತ್ರ ಉಪನ್ಯಾಸಕ ಮೆಹಬೂಬ್ ಖಾನ್, ಗಣಿತ ಉಪನ್ಯಾಸಕ ವರದರಾಜನ್, ಇತಿಹಾಸ ಉಪನ್ಯಾಸಕ ನೂರುಲ್ಲಾ, ಇಂಗ್ಲಿಷ್ ಉಪನ್ಯಾಸಕ ಅನಿಲ್ ಕುಮಾರ್, ಲೆಕ್ಕಶಾಸ್ತ್ರ ಪನ್ಯಾಸಕ ರಾಮಾಂಜಿನಪ್ಪ, ವ್ಯವಹಾರ ಅಧ್ಯಯನ ಉಪನ್ಯಾಸಕ ಅನಂತ್ ಕುಮಾರ್, ಬೋಧಕೇತರ ಸಿಬ್ಬಂದಿ ಮಧುಸೂಧನ್, ಜಯಮ್ಮ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!