Dance Video – ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಕಡಿಮೆ ಸಮಯದಲ್ಲೇ ಭಾರಿ ಸದ್ದು ಮಾಡುತ್ತಿದೆ. ಅದರಲ್ಲೂ ಡ್ಯಾನ್ಸ್ ವಿಡಿಯೋಗಳೂ ಸಹ ತುಂಬಾನೆ ವೈರಲ್ ಆಗುತ್ತಿರುತ್ತವೆ. ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗೋಕೆ ಅನೇಕರು ವಿಭಿನ್ನ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಿರುತ್ತಾರೆ. ಇದೀಗ ಯಂಗ್ ಟೀಚರ್ ಒಬ್ಬರು ಕ್ಲಾಸ್ ರೂಂ ನಲ್ಲೇ ಮಸ್ತ್ ಸ್ಟೆಪ್ಸ್ ಹಾಕಿದ್ದು, ಆಕೆಯ ಈ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಆಕೆಯ ಈ ವರ್ತನೆಗೆ ನೆಟ್ಟಿಗರಿಂದ ಕ್ಲಾಸ್ ಸಹ ಆಗುತ್ತಿದೆ.
ಶಿಕ್ಷಣ ನೀಡುವ ಶಿಕ್ಷಕರು ಎಂದರೇ ತುಂಬಾನೆ ಗೌರವ ಕೊಡುತ್ತಾರೆ. ಜೊತೆಗೆ ಅವರಿಗೆ ಪೂಜ್ಯ ಸ್ಥಾನವನ್ನು ಕೊಡುತ್ತಾರೆ. ಆದರೆ ಕೆಲ ಶಿಕ್ಷಕರು ಈ ಗೌರವವನ್ನು ಕಳೆದುಕೊಳ್ಳುತ್ತಿರುತ್ತಾರೆ. ಶಾಲೆಯೊಂದರ ಕ್ಲಾಸ್ ರೂಂ ನಲ್ಲಿ ಶಿಕ್ಷಕಿಯೊಬ್ಬರು ಭರ್ಜರಿಯಾಗಿ ನೃತ್ಯ ಮಾಡಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ವಿದ್ಯಾರ್ಥಿಗಳ ಮುಂದೆಯೇ ಆಕೆ ನೃತ್ಯ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಊಟ ಸೇವನೆ ಮಾಡುತ್ತಿರುತ್ತಾರೆ. ಈ ನಡುವೆ ಮೆರೂನ್ ಕಲರ್ ಸೀರೆಯನ್ನು ಧರಿಸಿದ ಟೀಚರ್ ಒಬ್ಬರು ಬ್ಲಾಕ್ ಬೋರ್ಡ್ ಮುಂದೆ ಬಂದು ಡ್ಯಾನ್ಸ್ ಮಾಡುತ್ತಾ ವಿದ್ಯಾರ್ಥಿಗಳ ಗಮನ ಸೆಳೆದಿದ್ದಾರೆ.
ವೈರಲ್ ವಿಡಿಯೋ ಅಲ್ಲಿದೆ ನೋಡಿ: Click Here
ಯಂಗ್ ಟೀಚರ್ ಭೋಜ್ ಪುರಿ ಹಾಡೊಂದಕ್ಕೆ ಆಕೆ ಗ್ರೇಡ್ ನಟಿಯಂತೆ ಸೊಂಟ ಬಳಕಿಸುತ್ತಾ ನೃತ್ಯ ಮಾಡಿದ್ದಾರೆ. ಹಾಡಿನ ರಿಧಮ್ ಹೆಚ್ಚಾಗುತ್ತಿದ್ದಂತೆ, ಟೀಚರ್ ಸಹ ಮತಷ್ಟು ಜೋಶ್ ನಿಂದ ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಕ್ಲಾಸ್ ರೂಂನಲ್ಲಿದ್ದ ಹುಡುಗಿಯರು ಟೀಚರ್ ನೃತ್ಯ ನೋಡಿ ಶಾಕ್ ಆಗಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ಕುರಿತು ನೆಟ್ಟಿಗರು ಸಹ ರಿಯಾಕ್ಟ್ ಆಗುತ್ತಿದ್ದು, ಟೀಚರ್ ವರ್ತನೆಯ ವಿರುದ್ದ ಕಾಮೆಂಟ್ಸ್ ಮಾಡುತ್ತಿದ್ದಾರೆ. ಅದರಲ್ಲಿ ಕೆಲವರು ಈ ರೀತಿಯ ನೃತ್ಯ ನೋಡಲು ಪಬ್ಸ್, ಬಾರ್, ಕ್ಲಬ್ ಗಳಿಗೆ ಹೋಗಬೇಕಾಗುತ್ತಿತ್ತು. ಆದರೆ ಇತ್ತೀಚಿಗೆ ಶಾಲಾ ಕಾಲೇಜುಗಳಲ್ಲಿ ಅಂತಹ ನೃತ್ಯ ನೋಡಬಹುದಾಗಿದೆ ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ, ಜೊತೆಗೆ ಆ ಶಿಕ್ಷಕಿಯ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಸಹ ಒತ್ತಾಯಿಸುತ್ತಿದ್ದಾರೆ.