Heart Attack – ಒಂದು ಪ್ರಾಣಿ ಹುಟ್ಟಿದ ಮೇಲೆ ಸಾಯೋದು ಖಚಿತ ಎಂದು ಹೇಳಬಹುದು. ಆ ಸಾವು ಯಾರಿಗೆ ಯಾವಾಗಾ ಹೇಗೆ ಬರುತ್ತದೆ ಎಂದು ಹೇಳೋಕೆ ಸಾಧ್ಯವೇ ಇಲ್ಲ. ಕೆಲವೊಮ್ಮೆ ಸಾವಿನ ಅಂಚಿನವರೆಗೂ ಹೋದಂತವರೂ ಬದುಕಿದ್ದಾರೆ. ಅದೇ ಮಾದರಿಯಲ್ಲಿ ಖುಷಿಯಾಗಿ ಎಲ್ಲರೊಂದಿಗೆ ಚೆನ್ನಾಗಿರುವಂತವರೇ ಕ್ಷಣದಲ್ಲೇ ಸಾವನ್ನಪ್ಪಿರುವಂತಹ ಘಟನೆಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸರ್ಕಾರಿ ಶಾಲೆಯ ಶಿಕ್ಷಕ ನೋಡ ನೋಡುತ್ತದಂತೆ ಕುಸಿದು ಬಿದ್ದು (Heart Attack) ಮೃತಪಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಜೈಪುರ ಜಿಲ್ಲೆಗೆ ಸೇರಿದ ಕಿಷ್ಣಗಡ್-ರೆನ್ವಾಲ್ ಎಂಬ ಪ್ರದೇಶದ ವ್ಯಾಪ್ತಿಯ ಸರ್ಕಾರಿ ಟೀಚರ್ ಮಂಗಲ್ ಝಕರ್ ಇತ್ತೀಚಿಗಷ್ಟೆ ನಿವೃತ್ತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸ್ಥಳೀಯವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. (Heart Attack) ಈ ಕಾರ್ಯಕ್ರಮಕ್ಕೆ ಹತ್ತಿರದ ಸಂಬಂಧಿಗಳು ಭಾಗವಹಿಸಿದ್ದರು. ಮಂಗಲ್ ಜಖರ್ ರವರ ಸ್ವಂತ ಸಹೋದರ ಮನ್ನಾರಾಮ್ ಜಖರ್ ಕುಟುಂಬ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಅಣ್ಣನ ರಿಟೈರ್ ಮೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದರು. ಕಳೆದ ಭಾನುವಾರ ರಾತ್ರಿ ಸಂಭ್ರಮದ ಅಂಗವಾಗಿ ಎಲ್ಲರೂ ನೃತ್ಯ (Heart Attack) ಮಾಡುತ್ತಿದ್ದರು.
ಈ ಸಂಭ್ರಮದಲ್ಲಿ ಕುಟುಂಬಸ್ಥರು ನೃತ್ಯ ಮಾಡುತ್ತಿದ್ದರು. ಅರ್ಧರಾತ್ರಿ 12 ಗಂಟೆಯ ಸಮಯದಲ್ಲಿ ಮತ್ತೊಂದು ಹಾಡಿಗೆ ನೃತ್ಯ ಮಾಡಲು (Heart Attack) ರಾಮ್ ಜಖರ್ ಶುರು ಮಾಡಿದರು. ಬಳಿಕ ನೃತ್ಯ ಆಡುತ್ತಲೇ ಆತನಿಗೆ (Heart Attack) ಹೃದಯಾಘಾತ ಸಂಭವಿಸಿದೆ. ನೃತ್ಯ ಆರಂಭಿಸಿದ 2 ನಿಮಿಷದಲ್ಲೇ ಆತ ಕುಸಿದುಬಿದ್ದಿದ್ದಾನೆ. ಬಳಿಕ ಗಾಬರಿಗೊಂಡ ಕುಟುಂಬಸ್ಥರು 10 ನಿಮಿಷಗಳ ಕಾಲ ಸಿಪಿಆರ್ ಮಾಡಿದ್ದಾರೆ. ಆದರೂ ಸಹ ಆತನಲ್ಲಿ ಯಾವುದೇ ರೀತಿಯ ಚೇತರಿಕೆ ಕಾಣಿಸದ ಹಿನ್ನೆಲೆಯಲ್ಲಿ ಹತ್ತಿರದ (Heart Attack) ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅದಾಗಲೇ ಮನ್ನಾರಾಮ್ ಮೃತಪಟ್ಟಿದ್ದಾಗಿ ವೈದ್ಯರು (Heart Attack) ಖಚಿತಪಡಿಸಿದ್ದರು. ಇನ್ನೂ ಈ ಘಟನೆ ಅವರ ಕುಟುಂಬಸ್ಥರು ಸೇರಿದಂತೆ ಸ್ಥಳೀಯರಿಗೆ ತೀವ್ರ ವಿಷಾದ ತಂದೊಡ್ಡಿದೆ.