Tamilnadu – ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವ್ಯಾಪ್ತಿಯಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದೆ. 12ನೇ ತರಗತಿ ವಿದ್ಯಾರ್ಥಿಯೋರ್ವ ಪರೀಕ್ಷೆಗೆ ಇನ್ನೇನು ಕೆಲವೇ ಗಂಟೆಗಳ ಸಮಯವಿತ್ತು. ಆದರೆ ಮನೆಯಲ್ಲೊಂದು ದುರ್ಘಟನೆ ನಡೆದಿದೆ. ತನ್ನ ತಾಯಿ ಹಠಾತ್ ಆಗಿ ಮೃತಪಟ್ಟಿದ್ದಾರೆ. ಆದರೆ ಬಾಲಕ ಪರೀಕ್ಷೆ ಹಾಜರಾಗಬೇಕಿತ್ತು. ಆದ್ದರಿಂದ ಕಣ್ಣಿನ ತುಂಬಾ ನೀರು ತುಂಬಿಕೊಂಡೇ ಕಾಲೇಜಿಗೆ ಪರೀಕ್ಷೆ ಬರೆಯಲು ಹೋಗಿದ್ದಾನೆ. ಪರೀಕ್ಷೆಗೆ ಹಾಜರಾಗುವುದಕ್ಕೂ ಮುನ್ನಾ ತನ್ನ ತಾಯಿಯ ಮೃತದೇಹಕ್ಕೆ ನಮಸ್ಕರಿಸಿದ್ದಾನೆ.

ತಮಿಳುನಾಡಿನ ತಿರುವನ್ವೇಲಿ ಜಿಲ್ಲೆಯ ವಲಿಯೂರಿನಲ್ಲಿ ಈ ಘಟನೆ ನಡೆದಿದೆ. ವಲಿಯೂರಿನ ವಿದ್ಯಾರ್ಥಿ ಸುನೀಲ್ ಕುಮಾರ್ ಎಂಬ ಬಾಲಕ 12 ನೇ ತರಗತಿ ಪರೀಕ್ಷೆ ಬರೆಯಬೇಕಿತ್ತು. ಆದರೆ ಆತನ ತಾಯಿ ಸುಬ್ಬಲಕ್ಷ್ಮೀ ಎಂಬಾಕೆ ಮಾರ್ಚ್ 3 ರಂದು ಹೃದಯಾಘಾತದಿಂದ ಮೃತಪಟ್ಟಿದ್ದು. ಮಾ.3 ರಂದೇ 12ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಮೊದಲ ದಿನವಾಗಿತ್ತು. ಪರೀಕ್ಷೆಯ ಮೊದಲನೇ ದಿನವೇ ಸುನೀಲ್ ಕುಮಾರ್ ತಾಯಿ ಮೃತಪಟ್ಟಿದ್ದಾರೆ. ಇನ್ನೂ ಸುನೀಲ್ ಕುಮಾರ್ ತಂದೆ ಕೃಷ್ಣಮೂರ್ತಿ ಆರು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು. ಸುನೀಲ್ ಹಾಗೂ ಆತನ ಸಹೋದರಿ ಸುಹಾಸಿನಿಯ ಸಂಪೂರ್ಣ ಜವಾಬ್ದಾರಿ ಸುಬ್ಬಲಕ್ಷ್ಮೀ ಮೇಲಿತ್ತು. ಆದರೆ ದುರದೃಷ್ಟಾವಶಾತ್ ಹೃದಯಾಘಾತಕ್ಕೆ ಸುಬ್ಬಲಕ್ಷ್ಮೀ ಮೃತಪಟ್ಟಿದ್ದಾಳೆ.
ಆದರೆ ತನ್ನ ತಾಯಿಯ ಮರಣದಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರೂ ಸಹ ಸುನೀಲ್ ಸಂಬಂಧಿಕರು ಹಾಗೂ ನೆರೆಹೊರೆಯವರು ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡಿದ್ದರು. ತಮ್ಮ ವಿದ್ಯಾಭ್ಯಾಸಕ್ಕಾಗಿ ತಾಯಿ ಪಟ್ಟಂತಹ ಶ್ರಮದ ಬಗ್ಗೆ ನೆನಪಿಸಿಕೊಂಡು ಪರೀಕ್ಷೆ ಬರೆಯಲು ವಿದ್ಯಾರ್ಥಿ ಮುಂದಾಗಿದ್ದಾನೆ. ಪರೀಕ್ಷೆಗೆ ಹೋಗುವುದಕ್ಕೂ ಮುನ್ನಾ ಭಾವುಕರಾದ ಸುನೀಲ್ ತನ್ನ ಹಾಲ್ ಟಿಕೆಟ್ ಅನ್ನು ತಾಯಿಯ ಪಾದಗಳ ಬಳಿಯಿಟ್ಟು ಕಣ್ಣಿರು ಸುರಿಸುತ್ತಾ, ಪರೀಕ್ಷೆಗೆ ಹೊರಟಿದ್ದಾನೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರವರ ಪೋಸ್ಟ್ ಇಲ್ಲಿದೆ ನೋಡಿ: Click Here
ಇನ್ನೂ ತಮಿಳುನಾಡಿನ ರಾಜ್ಯದ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ರವರ ತಂಡ ಸುನೀಲ್ ಗೆ ಬೆಂಬಲ ನೀಡಿತ್ತು. ಸಚಿವರು ನಿಮ್ಮ ಜೊತೆಗೆ ಇದ್ದಾರೆ. ಹಾಗೂ ಅವರಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಮಾಡುತ್ತಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರವರು ಸಹ ತಮ್ಮ ಎಕ್ಸ್ ಖಾತೆಯಲ್ಲಿ ಈ ಘಟನೆಯ ಕುರಿತು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದು ತಮಿಳು ಸಮುದಾಯ, ಶಿಕ್ಷಣ ನಮ್ಮ ಜೀವಕ್ಕಿಂತ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ಅನೇಕರು ಭಾವುಕರಾಗಿದ್ದಾರೆ.