ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳಂತಹ ಪ್ರಕರಣಗಳಿಗೆ ಎಷ್ಟೇ ಕಠಿಣ ಶಿಕ್ಷೆಗಳಿದ್ದರೂ ಸಹ ಇನ್ನೂ ಅತ್ಯಾಚಾರಗಳು, ದೌರ್ಜನ್ಯಗಳು ಕಡಿಮೆಯಾಗಿಲ್ಲ. ಇದೀಗ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ, ಆಕೆಯನ್ನು ಬೀದಿ ನಾಯಿಯೊಂದು ಕಾಪಾಡಿದೆ. ಕಾಮುಕನಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಮಹಿಳೆಯನ್ನು ಬೀದಿ ನಾಯಿ ಕಾಪಾಡಿದ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral News) ಆಗುತ್ತಿದೆ.
ವಿಶ್ವಾಸಕ್ಕೆ ಹೆಸರುವಾಸಿಯಾಗಿರುವ ಪ್ರಾಣಿ ನಾಯಿ ಎಂದು ಕರೆಯಲಾಗುತ್ತದೆ. ತನ್ನನ್ನು ಸಾಕಿದಂತಹ ಮಾಲೀಕನಿಗಾಗಿ ಎಂತಹ ತ್ಯಾಗಕ್ಕೂ ಸಹ ಸಿದ್ದವಾಗಿರುತ್ತದೆ. ಜೊತೆಗೆ ಬೀದಿ ನಾಯಿಗಳೂ ಸಹ ಸಹಾಯಕ್ಕೆ ಧಾವಿಸಿದ ಅದೆಷ್ಟೋ ಘಟನೆಗಳನ್ನು ನೋಡಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದ್ದು, ಈ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಕಾಮುಕನೊಬ್ಬನಿಂದ ಅತ್ಯಾಚಾರಕ್ಕೊಳಗಾಗುತ್ತಿದ್ದ ಮಹಿಳೆಯನ್ನು ಬೀದಿ ನಾಯಿಯೊಂದು ಕಾಪಾಡಿದೆ. ಮುಂಬೈನಲ್ಲಿ ಈ ಘಟನೆ ಕಳೆದ ಜೂನ್ 30 ರಂದು ನಡೆದಿದೆ ಎನ್ನಲಾಗಿದೆ. ಮುಂಬೈನ (Mumbai) ಮಾಣಿಕ್ ಪುರ ಗಲ್ಲಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 32 ವರ್ಷ ಮಹಿಳೆಯ ಮೇಲೆ ಸಂದೀಪ್ ಖೋತ್ (35) ವ್ಯಕ್ತಿಯೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಸಮಯದಲ್ಲಿ ನಾಯಿ ಆತನಿಂದ ಮಹಿಳೆಯನ್ನು ಕಾಪಾಡಿದೆ ಎನ್ನಲಾಗಿದೆ.
ಅಕೌಂಟೆಂಟ್ ವೃತ್ತಿ ಮಾಡುತ್ತಿದ್ದ ಈ ಮಹಿಳೆ ಮಧ್ಯರಾತ್ರಿ ಸುಮಾರು 1.30 ರ ಸಮಯದಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ, ಆಕೆಯನ್ನು ಹಿಂಬಾಲಿಸುತ್ತಾ ಬಂದ ಸಂದೀಪ್ ಆಕೆಯನ್ನು ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. ಬಳಿಕ ಆಕೆಯ ಬಾಯನ್ನು ಬಿಗಿಯಾಗಿ ಹಿಡಿದು ಆಕೆಯನ್ನು ನೆಲಕ್ಕೆ ತಳ್ಳಿ ಆಕೆಯ ಮೇಲೆ ಎರಗಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಈ ಸಮಯದಲ್ಲಿ ನಾಯಿಯೊಂದು ಅಲ್ಲಿಗೆ ಬಂದು ಜೋರಾಗಿ ಬೊಗಳಲು ಶುರು ಮಾಡುತ್ತದೆ. ಈ ಸಮಯದಲ್ಲಿ ಕಾಮುಕ ಕಕ್ಕಾಬಿಕ್ಕಿಯಾಗುತ್ತಾನೆ. ಈ ಸಮಯದಲ್ಲಿ ಸಮಯ ಪ್ರಜ್ಞೆ ಬಳಸಿದ ಮಹಿಳೆ ಅಲ್ಲಿಂದ ಓಡಿ ಹೋಗಿದ್ದಾಳೆ.
ಬಳಿಕ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ನಾನು ಕತ್ತಲಲ್ಲಿ ನಡೆದುಕೊಂದು ಹೋಗುತ್ತಿದ್ದಾಗ ವ್ಯಕ್ತಿಯೋರ್ವ ನನ್ನನ್ನು ಹಿಂಬಾಲಿಸುತ್ತಾ ಬಂದಿದ್ದಾನೆ. ನಿನ್ನನ್ನು ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಸಿ, ಬಳಿಕ ನನ್ನ ಬಾಯನ್ನು ಬಿಗಿಯಾಗಿ ಹಿಡಿದು ಕೆಳಗೆ ತಳ್ಳಿಹಾಕಿ ಅತ್ಯಾಚಾರ ಮಾಡಲು ಮುಂದಾಗಿದ್ದು. ಈ ಸಮಯದಲ್ಲಿ ಬೀದಿ ನಾಯಿಯೊಂದು ಜೋರಾಗಿ ಬೊಗಳಿದೆ. ಈ ವೇಳೆ ನಾನು ಅಲ್ಲಿಂದ ಓಡಿ ಹೋಗಲು ಯತ್ನಿಸಿದಾಗ ಆತ ನನ್ನ ಐಪೋನ್ ಕಸಿದುಕೊಂಡಿದ್ದಾನೆ ಎಂದು ದೂರು ನೀಡಿದ್ದಾಳೆ. ಇನ್ನೂ ಮಹಿಳೆ ನೀಡಿದ ದೂರಿನ ಮೇರೆಗೆ ಘಟನೆ ನಡೆದ ಪ್ರದೇಶದಲ್ಲಿದ್ದ ಸಿಸಿ ಟಿವಿ ದೃಶ್ಯವಾಳಿಯನ್ನು ಪರಿಶೀಲನೆ ನಡೆಸಲಾಗಿದೆ. ಮಹಿಳೆಯನ್ನು ಯಾರೋ ಓಡಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಇನ್ನೂ ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.