Thursday, November 21, 2024

Waqf: ರೈತರ ಜಮೀನು, ಸರ್ಕಾರಿ ಜಾಗ ವಕ್ಫ್ ಎಂದು ನಮೂದಿಸದಂತೆ ಮನವಿ….!

Waqf: ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ರೈತರು, ಸರ್ಕಾರ, ಮಠ, ಮಂದಿರಗಳಿಗೆ ಸೇರಿದ ಜಾಗವನ್ನು ಯಾವುದೇ ಮುನ್ಸೂಚನೆ ನೀಡದೇ ಪಹಣಿ ಕಲಂ 11 ರಲ್ಲಿ ವಕ್ಫ್ (Waqf) ಎಂದು ನಮೂದು ಮಾಡುತ್ತಿರುವುದನ್ನು ತಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಕಾನೂನು ಪ್ರಕೋಷ್ಠ ತಾಲೂಕು ಘಟಕದ ವತಿಯಿಂದ ಗರ್ವನರ್ ರವರಿಗೆ ಗುಡಿಬಂಡೆ ತಹಸೀಲ್ದಾರ್ ರವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

BJP Legal Parakosta gave memorindm 1

ಈ ವೇಳೆ ಮಾತನಾಡಿದ ಗುಡಿಬಂಡೆ ತಾಲೂಕು ಬಿಜೆಪಿ ಕಾನೂನು ಪ್ರಕೋಷ್ಠದ ಮಂಜುನಾಥ್, ಕರ್ನಾಟಕದಲ್ಲಿ ಇಂದು ಕರ್ನಾಟಕ ರಾಜ್ಯ ಸರ್ಕಾರ ವಕ್ಸ್‌ (Waqf) ಕಾಯ್ದೆಯ ದುರ್ಬಳಕೆಯ ಕಾರಣಕ್ಕಾಗಿ ರೈತರು ಮಠಮಾನ್ಯಗಳು, ಹಿಂದೂ ದೇವಾಲಯಗಳು ಎಲ್ಲರೂ ಆತಂಕದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್ ನವರು ರೂಪಿಸಿರುವ ವಕ್ಫ್ ಕಾಯ್ದೆ ಮುಸ್ಲಿಂ ತುಷ್ಟಿಕರಣಕ್ಕಾಗಿ ರಚಿಸಿರುವ ಕಾಯ್ದೆಯಾಗಿದೆ. ಕರ್ನಾಟಕದ ಅಲ್ಪಸಂಖ್ಯಾತರ ಹಾಗೂ ವಕ್ಫ್ ಸಚಿವರಾದ (Waqf)  ಜಮೀರ್ ಅಹ್ಮದ್‌ ಖಾನ್‌  ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ವಕ್ಫ್ ಪ್ರಗತಿ ಪರಿಶೀಲನೆ ಹಾಗೂ ವಕ್ಫ್ ಅದಾಲತ್‌ಗಳನ್ನು ನಡೆಸಿ ಕರ್ನಾಟಕ ಸರ್ಕಾರದ 1974ರ ಗೆಜೆಟ್ ಆಗಿರೋ ಪ್ರಕಾರ ರೈತರ (Waqf)  ಕೃಷಿ ಜಮೀನುಗಳನ್ನು ಮಠ-ಮಂದಿರಗಳ ಆಸ್ತಿಗಳನ್ನೂ ಸೇರಿದಂತೆ ಬಹುದೊಡ್ಡ ಪ್ರಮಾಣದ ಆಸ್ತಿಗಳನ್ನು ವಕ್ಫ್ ಹೆಸರಿನಲ್ಲಿ ತಕ್ಷಣ ಕಂದಾಯ ದಾಖಲೆಗಳಲ್ಲಿ (Waqf)  ನಮೂದಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈಗಾಗಲೇ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ವಕ್ಫ್ ಕಾಯ್ದೆಯ (Waqf)  ಕುರಿತು ಹೊಸ ವಕ್ಫ್ ಕಾಯ್ದೆ ರಚಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಕರಡು ಕಾಯ್ದೆಯನ್ನು ಸದನದಲ್ಲಿ ಮಂಡಿಸಿದ್ದಾರೆ. ಈ ಕಾಯ್ದೆ ಮುಂದಿನ (Waqf) ಸಂಸತ್ತಿನಲ್ಲಿ ಮಂಜೂರಾಗುವ ಸಾಧ್ಯತೆಯಿದೆ. ಈ ಆತಂಕದಿಂದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸೂಚನೆಯ ಮೇರೆಗೆ ಜಮೀರ್ (Waqf) ಅಹ್ಮದ್ ಖಾನ್ ಎಲ್ಲಾ ಜಿಲ್ಲೆಗಳಲ್ಲಿ ಅದಾಲತ್ ನಡೆಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ರೈತರ ಜಮೀನು, ಮಠ-ಮಂದಿರಗಳನ್ನು ಕಂದಾಯ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ದಾಖಲೆಯನ್ನು ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ. ಜೊತೆಗೆ ರಾಜ್ಯದ ಹಲವು ಕಡೆ ಈ ಕೆಲಸ (Waqf) ನಡೆದಿದ್ದು, ಜನರ ಆಕ್ರೋಷ ಹೊರಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ರಾಜ್ಯಪಾಲರು ವಕ್ಫ್ ಎಂದು ನಮೂದಿಸದಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದರು.

BJP Legal Parakosta gave memorindm 0

ಈ ವೇಳೆ (Waqf)  ಭಾರತೀಯ ಜನತಾ ಪಾರ್ಟಿ ಕಾನೂನು ಪ್ರಕೋಷ್ಠ ತಾಲೂಕು ಘಟಕದ ಬದ್ರಿನಾಥ್, ಶರತ್, ಬಿಜೆಪಿ ಪಕ್ಷದ ಗಂಗರೆಡ್ಡಿ, ಗಜನಾಣ್ಯ ನಾಗರಾಜು, ಮಧುಸೂಧನ್, ಪದ್ಮಾವತಮ್ಮ, ರವಿ, ರೈತ ಸಂಘದ ಸೋಮಶೇಖರ್‍, ಚಲವಾದಿ ಸಂಘಟನೆಯ ಎಂ.ಸಿ.ಚಿಕ್ಕನರಸಿಂಹಪ್ಪ ಸೇರಿದಂತೆ ಹಲವರು ಇದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!