SSLC Result – ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳಿಂದ ಪೋಷಕರು ಅತ್ಯುತ್ತಮವಾದ ಫಲಿತಾಂಶವನ್ನು ನಿರೀಕ್ಷಿಸುತ್ತಿರುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ನ್ಯೂ ಹೊರೈಜನ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಜಶ್ವಂತ್,ಯು ಎಂಬ ವಿದ್ಯಾರ್ಥಿ 624 ಅಂಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದು ಅ ದ್ವಿತೀಯ ಸಾಧನೆ ಮಾಡಿ ಶಾಲೆ ಹಾಗೂ ಪೋಷಕರ ಗೌರವ ಹೆಚ್ಚಿಸಿದ್ದಾನೆ.
SSLC Result – ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಗಣ್ಯರಿಂದ ಅಭಿನಂದನೆ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ನ್ಯೂ ಹೊರೈಜನ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಯು.ಜಶ್ವಂತ್ ಎಂಬ ವಿದ್ಯಾರ್ಥಿ ತಾಲ್ಲೂಕಿನ ನೆಟ್ಟಕುಂಟಪಳ್ಳಿ ಗ್ರಾಮದ ರೈತ ದಂಪತಿಗಳಾದ ಉತ್ತಮರೆಡ್ಡಿ ಮತ್ತು ಸುಶೀಲ ರವರ ಪುತ್ರನಾಗಿರುವ ಯು. ಜಶ್ವಂತ್ 624 ಅಂಕಗಳನ್ನು ಪಡೆದು ರಾಜ್ಯಮಟ್ಟದ 2ನೇ ಸ್ಥಾನ ಪಡೆದುಕೊಂಡಿದ್ದು ವಿದ್ಯಾರ್ಥಿಯ ಸಾಧನೆಗೆ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಸೇರಿದಂತೆ ತಹಶೀಲ್ದಾರ್ ಎನ್.ಮನೀಷ ಮಹೇಶ್ ಪತ್ರಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಗಣ್ಯರು ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ತಾಪಂ ಇಓ ಜಿ.ವಿ.ರಮೇಶ್, ಬಿಇಓ ಎನ್. ವೆಂಕಟೇಶಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ, ನ್ಯೂ ಹೊರೈಜನ್ ಶಾಲೆಯ ಸಂಸ್ಥಾಪಕ ಬೈರಾರೆಡ್ಡಿ, ಮುಖ್ಯ ಶಿಕ್ಷಕ ಕಾ.ಪಿ.ಎನ್.ಶ್ರೀನಿವಾಸರೆಡ್ಡಿ ಹಾಗೂ ಹಲವರು ಹಳ್ಳಿ ಹುಡುಗನ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
SSLC Result – ಶಾಲೆಯ ಟಾಪರ್ ಗಳು
ನ್ಯೂ ಹೊರೈಜನ್ ಶಾಲೆಯ ವಿದ್ಯಾರ್ಥಿ ಹಾಗೂ ಹೊಸಹುಡ್ಯ ಗ್ರಾಮದ ರೈತ ನಾರಾಯಣಸ್ವಾಮಿ ಮತ್ತು ಆದಿಲಕ್ಷ್ಮೀ ದಂಪತಿಗಳ ಪುತ್ರ ಆಕಾಶ್ ಎನ್. 617 ಅಂಕಗಳನ್ನು ಗಳಿಸುವುದರ ಮೂಲಕ ಉತ್ತಮ ಸಾಧನೆಯನ್ನು ತೋರಿದ್ದಾನೆ. ಸದರಿ ಶಾಲೆಯ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಲ್ಲಿ ಎಸ್. ಎನ್.ಬಿಂದುಶ್ರೀ (597), ಅಫ್ರೀನ್ ತಾಜ್ (587), ನಯನ (587), ಅಭಿಲಾಷ್ (583) ಫಲಾಕ್ ಕೌಸರ್ (578), ಪ್ರೀತಿ ( 577), ವತ್ಸಲ (577), ರಾಹುಲ್ ಕುಮಾರ್ ( 577 ), ತನುಜಾ ( 577 ), ವತ್ತ್ಸಲ (577), ನಿಖಿಲ್ (569), ಮೆಹಕ್ (564) ಹರ್ಷಿತ (560), ಜೀವನ್ ರೆಡ್ಡಿ ( 555 ), ಸುಪ್ರಿಯ(554), ಪುಷ್ಪಲತಾ (549), ಮಮತಾ (548), ಪ್ರಣತಿ (547), ಸಾಯಿದ್ ಸಮೀರ (542), ದೀಕ್ಷಿತಾ (539) ಮೊದಲಿಗರಾಗಿದ್ದಾರೆ.
SSLC Result – ವಿದ್ಯಾರ್ಥಿಗಳ ಸಾಧನೆಗೆ ಗಣ್ಯರ ಶ್ಲಾಘನೆ
ಈ ಸಂದರ್ಭದಲ್ಲಿ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಮಾತನಾಡಿ, ಹೆತ್ತವರ ಕನಸನ್ನು ಈಡೇರಿಸುವುದು ಮಕ್ಕಳ ಮೊದಲ ಕರ್ತವ್ಯವಾಗಿರಬೇಕು. ಆ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೇಯ ಯು.ಜಶ್ವಂತ್ ಸಲ್ಲುತ್ತದೆ. ಅವರ ಸಾಧನೆಯ ಹಿಂದಿರುವ ಶಾಲೆಯ ಆಡಳಿತ ಮಂಡಳಿ, ಕಲಿಸಿದ ಶಿಕ್ಷಕ ಶಿಕ್ಷಕಿಯರ ಪಾತ್ರವನ್ನು ನೆನೆಯಲೇ ಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನ್ಯೂ ಹೊರೈಜನ್ ಶಾಲೆಯ ಮೇನೇಜಿಂಗ್ ಟ್ರಸ್ಟಿ ಪುಥ್ವಿರಾಜ್ ಬಿ ರೆಡ್ಡಿ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ 2ನೇ ಸ್ಥಾನ ಪಡೆಯುವ ಜೊತೆಗೆ, ಶಾಲೆಯ 23 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 6 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿರುವುದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. Read this also : ಎಸ್.ಎಸ್.ಎಲ್.ಸಿ ನಂತರ ತೆಗೆದುಕೊಳ್ಳಬಹುದಾದ ಬೆಸ್ಟ್ ಡಿಪ್ಲೊಮಾ ಕೋರ್ಸ್‌ಗಳು…!
ನಮ್ಮ ಸಂಸ್ಥೆಯ ಮೇಲೆ ನಂಬಿಕೆಯಿಟ್ಟು ನಮ್ಮ ಶಾಲೆಗೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿದ್ದ ಪೋಷಕರು ಸಂಭ್ರಮ ಇಂದು ಪಡುವಂತಾಗಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸುತ್ತಿದ್ದು, ಶಾಲಾ ಆಡಳಿತ ಮಂಡಳಿಯ ಅವಿರತ ಶ್ರಮ ಎದ್ದು ಕಾಣುತ್ತಿದೆ. ನ್ಯೂ ಹೊರೈಜನ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣದ ಜೊತೆಗೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎಂದರು.