ಸೋಷಿಯಲ್ ಮಿಡಿಯಾದಲ್ಲಿ ಯಾರು ಯಾವಾಗ ಸ್ಟಾರ್ ಆಗುತ್ತಾರೆ ಎಂಬುದು ಹೇಳೋದು ತುಂಬಾನೆ ಕಷ್ಟ ಎನ್ನಬಹುದು. ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾ ಮೂಲಕ ಫೇಂ ಪಡೆದುಕೊಂಡಂತಹವರ ಸಾಲಿನಲ್ಲಿ ತೆಲಂಗಾಣ ಮೂಲದ ಬರೆಲಕ್ಕಾ ಅಲಿಯಾಸ್ ಶಿರೀಷಾ ಸಹ ಒಬ್ಬರು ಎನ್ನಬಹುದು. ಕಳೆದೆರಡು ತಿಂಗಳ ಹಿಂದೆಯಷ್ಟೆ ಆಕೆ ಮದುವೆಯಾಗಿದ್ದರು. ಇದೀಗ ಆಕೆ ಚುನಾವಣೆ ಮುಗಿದ ಕೂಡಲೇ ಸೋಷಿಯಲ್ ಮಿಡಿಯಾದಿಂದ ದೂರವುಳಿಯುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಆಕೆಯ ಈ ನಿರ್ಧಾರಕ್ಕೆ ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,
ಇಂದಿನ ಕಾಲ ಸೋಷಿಯಲ್ ಮಿಡಿಯಾ ಕಾಲ ಎಂದೇ ಹೇಳಬಹುದು. ಸೋಷಿಯಲ್ ಮಿಡಿಯಾ ಬಳಸದವರ ಸಂಖ್ಯೆಯ ತುಂಬಾನೆ ವಿರಳ. ಸೋಷಿಯಲ್ ಮಿಡಿಯಾ ಮೂಲಕ ಸ್ಟಾರ್ ಆದಂತಹ ಬರೆಲಕ್ಕಾ ಅಲಿಯಾಸ್ ಶಿರಿಷಾ ತೆಲುಗು ರಾಷ್ಟ್ರಗಳಲ್ಲಿ ತುಂಬಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ಆಕೆ ಡಿಗ್ರಿ ಓದಿ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಹಸುಗಳನ್ನು ಮೇಯಿಸುತ್ತಿದ್ದೇನೆ ಎಂದು ವಿಡಿಯೋ ಮಾಡಿದ್ದರು. ಈ ವಿಡಿಯೋಗಳು ರಾಜ್ಯದಲ್ಲಿನ ನಿರುದ್ಯೋಗಿಗಳಿಗೆ ಕನೆಕ್ಟ್ ಆಗಿ ಸೋಷಿಯಲ್ ಮಿಡಿಯಾದಲ್ಲಿ ಆಕೆಯ ವಿಡಿಯೋಗಳು ಭಾರಿ ವೈರಲ್ ಆಗಿತ್ತು. ಆ ಮೂಲಕ ಆಕೆ ತುಂಬಾನೆ ಫೇಮಸ್ ಆಗಿದ್ದರು. ಬಳಿಕ ಆಕೆ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲೂ ಸಹ ಸ್ಪರ್ಧೆ ಮಾಡಿದ್ದರು. ಸ್ವಂತ ಪ್ರಣಾಳಿಕೆಯನ್ನು ಇಟ್ಟುಕೊಂಡು ಆಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಕೊಲ್ಲಾಪೂರ್ ಎಂಬ ವಿಧಾನಸಭಾ ಕ್ಷೇತ್ರದಿಂದ ಆಕೆ ಸ್ಫರ್ಧೆ ಮಾಡಿದ್ದರು. ಈ ಸಮಯದಲ್ಲಿ ಆಕೆ ತುಂಬಾನೆ ಸದ್ದು ಮಾಡಿದ್ದರು. ಆದರೆ ಅನೂಹ್ಯವಾಗಿ ಆಕೆ 5700 ಮತಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡೆದುಕೊಳ್ಳಬೇಕಾಗಿತ್ತು. ಬಳಿಕ ಆಕೆ ಪಾರ್ಲಿಮೆಂಟ್ ಎಲೆಕ್ಷನ್ ನಲ್ಲೂ ಸಹ ಸ್ಪರ್ಧೆ ಮಾಡಿದ್ದಾರೆ. ಕಳೆದ ಮಾರ್ಚ್ ಮಾಹೆಯಲ್ಲಿ ಆಕೆ ತನ್ನ ಹತ್ತಿರದ ಸಂಬಂಧಿಯಾದ ವೆಂಕಟೇಶ್ ಎಂಬಾತನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಸದ್ಯ ಬರೆಲಕ್ಕಾ ಶಿರಿಷಾಗೆ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಜಾಸ್ತಿಯಾಗಿದೆಯಂತೆ. ಈ ಕುರಿತು ಆಕೆ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನನ್ನು ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ನೆಗೆಟೀವ್ ಕಾಮೆಂಟ್ಸ್, ಕೆಟ್ಟದಾದ ರೀತಿಯಲ್ಲಿ ಥಂಬ್ ನೈಲ್ಸ್ ಮಾಡಿ ವಿಡಿಯೋಗಳನ್ನು ಮಾಡುತ್ತಿದ್ದಾರೆ. ನಾನು ಮಾಡಿದ ತಪ್ಪಾದರೂ ಏನು. ನನಗೆ ಈ ನೆಗೆಟಿವಿಟಿಯನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಎಂಪಿ ಯಾಗಿ ಸ್ಪರ್ಧೆ ಮಾಡಿದಕ್ಕಾಗಿ ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ಒಂದೊಂದು ಸಾರಿ ಸತ್ತುಹೋಗಣವೇ ಎಂದು ಅನ್ನಿಸುತ್ತದೆ. ಚುನಾವಣೆ ಮುಗಿದ ಕೂಡಲೇ ನಾನು ಸೋಷಿಯಲ್ ಮಿಡಿಯಾದಿಂದ ದೂರವಿರುತ್ತೇನೆ. ನನ್ನ ಪತಿಯೊಂದಿಗೆ ಸಂತೋಷದಿಂದ ಇರುತ್ತೇನೆ ಎಂದು ನೋವು ತೋಡಿಕೊಂಡಿದ್ದಾರೆ.
ಇನ್ನೂ ನಾನೇನಾದರೂ ತಪ್ಪು ಮಾಡಿದ್ದೀನಿ ಎಂದು ಅನ್ನಿಸಿದರೇ ನಿಮ್ಮ ಎಡಗಾಲಿನ ಚಪ್ಪಲಿಯಲ್ಲಿ ಹೊಡೆಯಿರಿ. ಆದರೆ ಟ್ರೋಲ್ ಮಾತ್ರ ಮಾಡಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿದೆ. ಸೋಷಿಯಲ್ ಮಿಡಿಯಾ ಮೂಲಕ ಫೇಮಸ್ ಆದವರಲ್ಲಿ ಅನೇಕರು ಅಂತಹ ಟ್ರೋಲ್ ಗಳಿಗೆ ಗುರಿಯಾಗಿದ್ದಾರೆ. ಬರೆಲಕ್ಕಾ ಸಹ ಟ್ರೋಲ್ ಗೆ ಗುರಿಯಾಗಿದ್ದಾರೆ.