Snake Viral Video : “ಹುಡುಗೀರ ಸಹವಾಸವೇ ಬೇಡಪ್ಪಾ!” ಯುವತಿಯನ್ನು ನೋಡಿ ಹೆಡೆ ಎತ್ತದೆ ಸದ್ದಿಲ್ಲದೆ ಜಾಗ ಖಾಲಿ ಮಾಡಿದ ನಾಗರಹಾವು!

ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಅದ್ರಲ್ಲೂ ಈ ಹಾವಿನ ವಿಡಿಯೋಗಳಿಗಂತೂ (Snake Viral Video) ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್. ಇತ್ತೀಚೆಗೆ ಇನ್‌ಸ್ಟಾಗ್ರಾಮ್, ಎಕ್ಸ್ (ಟ್ವಿಟರ್) ನಲ್ಲಂತೂ ಪ್ರತಿದಿನ ಬಗೆಬಗೆಯ ಹಾವಿನ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದೀಗ ಇಂತದ್ದೇ ಒಂದು ವಿಚಿತ್ರ ಹಾಗೂ ಕಾಮಿಡಿಯಾಗಿರೋ ವೈರಲ್ ಹಾವಿನ ವಿಡಿಯೋ (Snake Viral Video) ನೆಟ್ಟಿಗರ ಗಮನ ಸೆಳೆದಿದೆ.  ಸಾಮಾನ್ಯವಾಗಿ ಹಾವು ಕಂಡ್ರೆ ಜನ ಮೈಲಿ ದೂರ ಓಡ್ತಾರೆ, ಆದ್ರೆ ಇಲ್ಲೊಬ್ಬಳು ಹುಡುಗಿ ಮಾಡಿದ ಕೆಲಸಕ್ಕೆ ಸ್ವತಃ ಆ ನಾಗರಹಾವೇ ಹೆದರಿ ಓಡಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Snake Viral Video showing a fearless young woman standing calmly while a cobra quietly slithers away without raising its hood.

Snake Viral Video – ಹಾವಿನ ವಿಡಿಯೋಗಳ ಕ್ರೇಜ್ ಮತ್ತು ಬದಲಾದ ಟ್ರೆಂಡ್

ಒಂದಾನೊಂದು ಕಾಲ ಇತ್ತು, ಹಾವು ಅಂದ್ರೆ ಸಾಕು ಜನ ಭಯದಿಂದ ನಡುಗುತ್ತಿದ್ದರು. ಆದ್ರೆ ಈಗ ಟ್ರೆಂಡ್ ಫುಲ್ ಬದಲಾಗಿದೆ. ಈಗಿನ ಜನ ಎಲ್ಲಿ ಹಾವು ಕಂಡ್ರೂ ತಕ್ಷಣ ಮೊಬೈಲ್ ಹಿಡಿದು ವಿಡಿಯೋ ಮಾಡೋಕೆ ರೆಡಿಯಾಗ್ತಾರೆ. ಇನ್ನು ಕೆಲವರಂತೂ ಹಾವಿನ ಜೊತೆ ಡೇಂಜರಸ್ ಸ್ಟಂಟ್‌ಗಳನ್ನು ಮಾಡೋದು, ಕುತ್ತಿಗೆಗೆ ಹಾಕಿಕೊಳ್ಳೋದು, ಅಷ್ಟೇ ಯಾಕೆ.. ಹಾವನ್ನು ಕಚ್ಚಿ ತಮ್ಮ ವಿಕೃತಿ ಮೆರೆಯುವ ವಿಡಿಯೋಗಳೂ ಇತ್ತೀಚೆಗೆ ವೈರಲ್ ಆಗಿದ್ದವು. ಆದ್ರೆ, ಸದ್ಯ ವೈರಲ್ ಆಗ್ತಿರೋ ಈ ವಿಡಿಯೋದ ಕಥೆಯೇ ಬೇರೆ!

ಹುಡುಗಿ ಎದುರು ತಲೆ ಎತ್ತದ ನಾಗರಹಾವು!

ವೈರಲ್ ಆಗ್ತಿರೋ ಈ ಹೊಸ ವಿಡಿಯೋದಲ್ಲಿ, ಹುಡುಗಿಯೊಬ್ಬಳು ತನ್ನ ಮನೆಯ ಅಂಗಳದಲ್ಲಿ ಆರಾಮಾಗಿ ನಿಂತಿರ್ತಾಳೆ. ಅಷ್ಟರಲ್ಲೇ ಅವಳ ಎದುರಿನಿಂದ ದೊಡ್ಡ ನಾಗರಹಾವೊಂದು (Cobra Video) ಗೋಡೆ ಪಕ್ಕದಲ್ಲೇ ಸರಸರನೆ ಹರಿದುಕೊಂಡು ಬರುತ್ತದೆ.

ಸಾಮಾನ್ಯವಾಗಿ ಯಾರೇ ಆದ್ರೂ ಅಷ್ಟು ಹತ್ತಿರದಲ್ಲಿ ಹಾವು ಬಂದ್ರೆ ಕಿರುಚಾಡಿಕೊಂಡು ಓಡಿಹೋಗ್ತಾರೆ. ಆದ್ರೆ ಈ ಹುಡುಗಿ ಮಾತ್ರ ‘ನನಗೇನು ಹೆದರಿಕೆಯಿಲ್ಲ’ ಅನ್ನೋ ತರಹ ಫುಲ್ ಧೈರ್ಯವಾಗಿ ಅಲ್ಲೇ ನಿಂತಿರ್ತಾಳೆ. ಹಾವಿಗೆ ಸವಾಲು ಹಾಕುವಂತೆ ಪೋಸ್ ನೀಡುತ್ತಾ ನಿಂತ ಧೀರ ವನಿತೆಯನ್ನು ನೋಡಿ ನೆಟ್ಟಿಗರೇ ಶಾಕ್ ಆಗಿದ್ದಾರೆ. Read this also : ಹಾವಿಗೆ ‘ಕಿಸ್’ ಕೊಡಲು ಹೋದ ಯುವತಿ! ಮೂಗಿಗೇ ಕಚ್ಚಿ ಬುದ್ಧಿ ಕಲಿಸಿದ ಹಾವು, ನಿನಗಿದು ಬೇಕಿತ್ತಾ ಎಂದ ನೆಟ್ಟಿಗರು….!

ಹೆಣ್ಣುಮಕ್ಕಳ ಸಹವಾಸವೇ ಬೇಡ ಅಂತ ಸೈಲೆಂಟಾಗಿ ಜಾಗ ಖಾಲಿ ಮಾಡ್ತಾ ಹಾವು?

ನಿಜ ಹೇಳಬೇಕೆಂದರೆ, ಹಾವಿನ ದಾರಿಗೆ ಯಾರಾದ್ರೂ ಅಡ್ಡ ಬಂದ್ರೆ ಅಥವಾ ಅದರ ಹತ್ತಿರ ಹೋದ್ರೆ ಅದು ತಕ್ಷಣ ಹೆಡೆ ಬಿಚ್ಚಿ ಬುಸುಗುಡುತ್ತದೆ ಇಲ್ಲವೇ ಕಚ್ಚೋಕೆ ಬರುತ್ತದೆ. ಆದ್ರೆ ಈ ನಾಗರಹಾವು ಮಾತ್ರ ಆ ಹುಡುಗಿಯನ್ನ ನೋಡಿ ಸ್ವತಃ ಹೆದರಿದಂತೆ ಕಾಣುತ್ತದೆ!

ವಿಡಿಯೋದ ಹೈಲೈಟ್: ಆ ಹುಡುಗಿ ತನ್ನ ಎದುರೇ ನಿಂತಿದ್ರೂ, ಹಾವು ಕನಿಷ್ಠ ಪಕ್ಷ ತಲೆ ಎತ್ತಿ ಹೆಡೆ ಬಿಚ್ಚಿ ನೋಡೋ ಧೈರ್ಯ ಕೂಡ ಮಾಡಿಲ್ಲ. “ದಮ್ಮಿದ್ರೆ ನನ್ನ ಕಡೆ ನೋಡು” ಅನ್ನೋ ರೇಂಜ್‌ಗೆ ಹುಡುಗಿ ಆಟಿಟ್ಯೂಡ್ ತೋರಿಸಿದ್ರೂ, ಹಾವು ಮಾತ್ರ “ಪ್ಪಾ.. ಈ ಹುಡುಗಿಯರ ಸಹವಾಸವೇ ಬೇಡ” ಅಂದ್ಕೊಂಡು ಸೈಲೆಂಟಾಗಿ ತನ್ನ ದಾರಿಯಲ್ಲಿ ತಾನು ಪಕ್ಕದಲ್ಲೇ ಹರಿದು ಹೋಗಿದೆ.

Snake Viral Video showing a fearless young woman standing calmly while a cobra quietly slithers away without raising its hood.

ನೆಟ್ಟಿಗರ ಫನ್ನಿ ಕಮೆಂಟ್‌ಗಳ ಸುರಿಮಳೆ

ಫನ್ನಿ ಹಾವಿನ ವಿಡಿಯೋ (Snake Video Link Here) ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗ್ತಿದ್ದು, ಬಗೆಬಗೆಯಾಗಿ ಕಮೆಂಟ್ ಮಾಡ್ತಿದ್ದಾರೆ:

  • ಈಗಿನ ಹುಡುಗಿಯರು ಹಾವಿಗಿಂತಲೂ ವೈಲೆಂಟ್ ಆಗಿರ್ತಾರೆ ಅಂತ ಹಾವಿಗೂ ಗೊತ್ತಾಗಿಬಿಟ್ಟಿದೆ!”
  • ಹಾವು ತುಂಬಾ ಬುದ್ಧಿವಂತ, ಅದಕ್ಕೆ ಸುಮ್ಮನೆ ಜಗಳ ಮಾಡದೆ ಪ್ರಾಣ ಉಳಿಸ್ಕೊಂಡು ಓಡಿಹೋಯ್ತು.”
  • ಹುಡುಗಿಯ ಆಟಿಟ್ಯೂಡ್ ನೋಡಿ ಹಾವಿಗೆ ಸುಸ್ಸು ಆಗ್ಬಿಟ್ಟಿದೆ ಅನ್ಸುತ್ತೆ!” ಒಟ್ಟಿನಲ್ಲಿ ಈ ವಿಡಿಯೋ ಸದ್ಯಕ್ಕಂತೂ ಇಂಟರ್ನೆಟ್‌ನಲ್ಲಿ ಫುಲ್ ಟ್ರೆಂಡಿಂಗ್‌ನಲ್ಲಿದೆ.

Leave a Comment

Your email address will not be published. Required fields are marked *

Scroll to Top