ಹಾವು ಅಂದ ತಕ್ಷಣ ಅದೆಂತಾ ಧೈರ್ಯವಂತರಿಗೂ ಒಂದು ಕ್ಷಣ ಮೈ ನಡುಗುವುದು ಗ್ಯಾರಂಟಿ. ಎದುರಿಗೆ ಹಾವು ಪ್ರತ್ಯಕ್ಷವಾಯಿತೆಂದರೆ ಸಾಕು, ಜನರು ಕಿಲೋಮೀಟರ್ ದೂರ ಓಡುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹಾವಳಿಯಿಂದಾಗಿ ಜನ ಪ್ರಾಣದ ಹಂಗು ತೊರೆದು ಸಾಹಸ ಮಾಡಲು ಹೋಗುತ್ತಿದ್ದಾರೆ. ಇದೀಗ ಅಂತಹದ್ದೇ ಒಂದು (Snake Video) ಮೈ ಜುಂ ಎನಿಸುವ ವಿಡಿಯೋ ವೈರಲ್ ಆಗಿದೆ.

Snake Video – ಏನಿದು ಘಟನೆ?
ಸಾಮಾನ್ಯವಾಗಿ ಹಾವುಗಳನ್ನು ಹಿಡಿಯಲು ಉರಗ ತಜ್ಞರು ಅದಕ್ಕೆ ಬೇಕಾದ ಪ್ರತ್ಯೇಕ ಸಾಧನಗಳನ್ನು ಬಳಸುತ್ತಾರೆ. ಆದರೆ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಯಾವುದೇ ಮುನ್ನೆಚ್ಚರಿಕೆ ಅಥವಾ ಸುರಕ್ಷತಾ ಸಾಧನಗಳಿಲ್ಲದೆ ನೇರವಾಗಿ ತನ್ನ ಬರಿಗೈಯಲ್ಲೇ ಹಾವನ್ನು ಹಿಡಿಯಲು ಮುಂದಾಗಿದ್ದಾಳೆ. Read this also : ತನ್ನನ್ನೇ ತಾನು ನುಂಗಲು ಹೋದ ಹಾವು! ಮನುಷ್ಯನಿಂದ ಬಚಾವ್.. ಇಲ್ಲಿದೆ ವಿಚಿತ್ರ ವಿಡಿಯೋ ವೈರಲ್…!
ಶ್ವೇತಾ ಸುತರ್ (@shweta_wildliferescuer) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಯುವತಿಯು ಹಾವಿನ ಬಾಲವನ್ನು ಹಿಡಿದು ಎಳೆಯುತ್ತಾ ಅದರೊಂದಿಗೆ ಚೆಲ್ಲಾಟವಾಡುತ್ತಿರುವುದನ್ನು ಕಾಣಬಹುದು. ಇದರಿಂದ ಅತೀವವಾಗಿ ಕೋಪಗೊಂಡ ಹಾವು ಕ್ಷಣಮಾತ್ರದಲ್ಲಿ ತಿರುಗಿಬಿದ್ದು ಯುವತಿಯ (Snake Video) ಮೇಲೆ ಪ್ರತಿ ದಾಳಿ ನಡೆಸಿದೆ.
ನೆಟ್ಟಿಗರ ಆಕ್ರೋಶ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯುವತಿಯ ಈ ಬೇಜವಾಬ್ದಾರಿತನಕ್ಕೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ. ವಿಡಿಯೋ ವೀಕ್ಷಿಸಿದ ಒಬ್ಬ ಬಳಕೆದಾರರು, “ಇದನ್ನೇ ಸಾವಿನೊಂದಿಗೆ (Snake Video) ಆಟವಾಡುವುದು ಎನ್ನುತ್ತಾರೆ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಇದು ತುಂಬಾ ಅಪಾಯಕಾರಿ, ದಯವಿಟ್ಟು ಪ್ರಾಣದ ಜೊತೆ ಈ ರೀತಿ ಆಟವಾಡಬೇಡಿ” ಎಂದು ಎಚ್ಚರಿಕೆ ನೀಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಲೈಕ್ಸ್ ಮತ್ತು ವ್ಯೂಸ್‌ಗಾಗಿ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಈಗ ಮೂಡಿದೆ. ಹಾವಿನಂತಹ ವನ್ಯಜೀವಿಗಳ ಹತ್ತಿರ ಹೋಗುವಾಗ (Snake Video) ಅತ್ಯಂತ ಎಚ್ಚರಿಕೆ ಅಗತ್ಯವಿರುತ್ತದೆ, ಇಲ್ಲವಾದಲ್ಲಿ ಇದು ಪ್ರಾಣಕ್ಕೇ ಕಂಟಕವಾಗಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಗಮನಿಸಿ: ವನ್ಯಜೀವಿಗಳೊಂದಿಗೆ ಅಥವಾ ಹಾವುಗಳೊಂದಿಗೆ ಇಂತಹ ಸಾಹಸಗಳನ್ನು ಮಾಡಲು ಪ್ರಯತ್ನಿಸಬೇಡಿ. ಇದು ಕಾನೂನುಬಾಹಿರ ಮತ್ತು ಜೀವಕ್ಕೆ ಅಪಾಯಕಾರಿ.
