(Snake in home) ಈಗಿನ ಕಾಲದಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಗ್ಯಾಸ್ ಇರುತ್ತದೆ. ಈ ಗ್ಯಾಸ್ ಅನ್ನು ತುಂಬಾ ಎಚ್ಚರಿಕೆಯಿಂದ ಬಳಸಬೇಕಿದೆ. ಇದೀಗ ಮನೆಯೊಂದರ ಅಡುಗೆ ಕೋಣೆಯಲ್ಲಿ ಸ್…ಸ್… ಎಂಬ ಶಬ್ದ ಕೇಳಿದೆ. ಕೂಡಲೇ ಮನೆಯವರು ಗ್ಯಾಸ್ ಲೀಕ್ ಆಗುತ್ತಿರಬಹುದು ಎಂದು ಭಾವಿಸಿ ಅಡುಗೆ ಕೋಣೆಯೊಳಗೆ ಹೋಗಿ ನೋಡಿದ್ದಾರೆ. ಆದರೆ ಅಲ್ಲಿ ಗ್ಯಾಸ್ ಲೀಕ್ ಆಗುತ್ತಿರಲಿಲ್ಲ. ಬದಲಿಗೆ ನಾಗರಹಾವು ಬುಸುಗುಡುತ್ತಿತ್ತು. ಹಾವನ್ನು ನೋಡಿದ ಮನೆಯವರು ಭಯಭೀತರಾಗಿ ಓಡಿದ್ದಾರೆ.
ಈ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ದುವ್ವಡಾ ಎಂಬ ಪ್ರದೇಶದಲ್ಲಿ ಮಹಿಳೆಯೊಬ್ಬರು ಅಡುಗೆ ಮಾಡಲು ಅಡುಗೆ ಮನೆಗೆ ಹೋಗಿದ್ದಾಳೆ. ಅಡುಗೆ ಮಾಡಲು ಗ್ಯಾಸ್ ಆನ್ ಮಾಡಲು ಹೋಗಿದ್ದಾಳೆ. ಈ ವೇಳೆ ಸ್…ಸ್…ಎಂಬ ಶಬ್ದ ಕೇಳಿಬಂದಿದೆ. ಮೊದಲು ಆಕೆ ಆ ಶಬ್ದ ಕೇಳಿ ಗ್ಯಾಸ್ ಲೀಕ್ ಆಗುತ್ತಿದೆ ಏನೋ ಎಂದು ಭಾವಿಸಿ ಚೆಕ್ ಮಾಡಿದ್ದಾಳೆ. ಆದರೆ ಗ್ಯಾಸ್ ಲೀಕ್ ಆಗುತ್ತಿರಲಿಲ್ಲ. ಗ್ಯಾಸ್ ವಾಸನೆ ಸಹ ಬರುತ್ತಿಲ್ಲ. ಆದರೆ ಗ್ಯಾಸ್ ಲೀಕ್ ಆಗುತ್ತಿದ್ದಂತೆ ಶಬ್ದ ಮಾತ್ರ ಬರುತ್ತಿದೆ. ಶಬ್ದ ನಿಲ್ಲದೇ ಬರುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಗೆ ಅನುಮಾನ ಬಂದಿದೆ. ಬಳಿಕ ಆಕೆ ಮನೆಯಲ್ಲಿದ್ದವರನ್ನು ಕರೆದು ಗ್ಯಾಸ್ ಸಿಲಂಡರ್ ಪಕ್ಕಕ್ಕೆ ಸರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಈ ಸಮಯದಲ್ಲಿ ನಾಗರಹಾವು ಹೆಡೆ ಬಿಚ್ಚಿ ಜೋರಾಗಿ ಬುಸುಗುಡುತ್ತಿದೆ.
ಇನ್ನೂ ನಾಗರಹಾವು ಬುಸುಗುಡುತ್ತಿದ್ದ ದೃಶ್ಯ ನೋಡಿದ ಕೂಡಲೇ ಎಲ್ಲರೂ ಭಯಭೀತರಾಗಿ ಅಲ್ಲಿಂದ ಓಡಲು ಆರಂಭಿಸಿದ್ದಾರೆ. ಬಳಿಕ ಸ್ಥಳೀಯರು ಉರಗತಜ್ಞರಿಗೆ ಕರೆ ಮಾಡಿ ಕರೆದಿದ್ದಾರೆ. ಬಳಿಕ ಅಲ್ಲಿಗೆ ಬಂದ ಉರಗ ತಜ್ಞ ಕೋಪದಿಂದ ಬುಸುಗುಡುತ್ತಿದ್ದ ಹಾವನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ. ಹಾವು ಹಿಡಿದ ಬಳಿಕ ಮನೆಯವರು ನಿಟ್ಟಿಸುರು ಬಿಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಮಳೆಗಾಲವಾದ್ದರಿಂದ ಮಳೆಗೆ ಹಾವುಗಳು ಮನೆಯೊಳಗೆ ಬಂದು ಸೇರಿಕೋಳ್ಳುತ್ತಿರುತ್ತವೆ. ಆದ್ದರಿಂದ ಮನೆಯಲ್ಲಿ ಈ ರೀತಿಯ ಶಬ್ದಗಳು ಕಂದುಬಂದರೇ ಹಾಗೂ ಕಾರುಗಳು, ಬೈಕ್ ಗಳು, ಹಾಗೂ ಶೂ ಗಳಲ್ಲಿ ಸಹ ಹಾವುಗಳು ಸೇರಿಕೊಂಡಿರುವ ಸಾಧ್ಯತೆಯಿರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಸೂಕ್ತ.