Dharmasthala – ಕಳೆದ ಕೆಲ ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ತಾನು ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಿಕೊಂಡ ಅನಾಮಿಕ ವ್ಯಕ್ತಿಯೊಬ್ಬ, ಧರ್ಮಸ್ಥಳದ ಆವರಣದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ತನಿಖೆಗೆ ಆದೇಶಿಸಿದೆ. ಸರ್ಕಾರದ ಈ ನಿರ್ಧಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಗತಿಸಿದೆ.
Dharmasthala – ಸತ್ಯ ಹೊರಬರಲಿ: ಧರ್ಮಸ್ಥಳದ ವಕ್ತಾರರ ಆಗ್ರಹ
ಈ ಬಗ್ಗೆ ಧರ್ಮಸ್ಥಳ ಕ್ಷೇತ್ರದ ವಕ್ತಾರರಾದ ಕೆ. ಪಾರ್ಶ್ವನಾಥ್ ಜೈನ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ಹಲವಾರು ಶವಗಳನ್ನು ಹೂತಿದ್ದೆ” ಎಂಬ ದೂರಿನಿಂದ ಸಾರ್ವಜನಿಕವಾಗಿ ಗೊಂದಲ ಉಂಟಾಗಿದೆ. ಸರ್ಕಾರ SIT ತನಿಖೆಗೆ ಹಸ್ತಾಂತರಿಸಿರುವ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ.
ಸತ್ಯವೇ ಸಮಾಜದ ನೈತಿಕತೆಗೆ ಆಧಾರ. ಹೀಗಾಗಿ, SIT ತನಿಖಾ ತಂಡವು ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಸತ್ಯಾಂಶವನ್ನು ಹೊರತರಬೇಕು ಮತ್ತು ಅದನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದು ಜೈನ್ ಆಗ್ರಹಿಸಿದರು. ಧರ್ಮಸ್ಥಳದ ಬಗ್ಗೆ ಪದೇ ಪದೇ ಆರೋಪಗಳನ್ನು ಮಾಡಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ, ಈ ಪ್ರಕರಣದ ಸತ್ಯಾಂಶವನ್ನು ತನಿಖೆ ಮೂಲಕ ಬಯಲು ಮಾಡಬೇಕು ಎಂದು ಧರ್ಮಸ್ಥಳ ಒತ್ತಾಯಿಸಿದೆ. Read this also : ಪ್ರಾಧ್ಯಾಪಕರ ಕಿರುಕುಳಕ್ಕೆ ಬಲಿಯಾದ ವಿದ್ಯಾರ್ಥಿನಿ: ಗ್ರೇಟರ್ ನೋಯ್ಡಾದಲ್ಲಿ ನಡೆದ ದುರಂತ..!
Dharmasthala – ಏನಿದು ಆರೋಪ?
ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅನಾಮಿಕ ವ್ಯಕ್ತಿ, ಕೆಲವು ಪ್ರಭಾವಿಗಳ ಸೂಚನೆಯ ಮೇರೆಗೆ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪಿಸಿದ್ದಾನೆ. ಒಂದು ವೇಳೆ ರಕ್ಷಣೆ ನೀಡಿದರೆ, ಹೂತಿಟ್ಟ ಕಳೇಬರಗಳನ್ನು ಹೊರತೆಗೆಯುವುದಾಗಿ ಆತ ದೂರಿನಲ್ಲಿ ತಿಳಿಸಿದ್ದಾನೆ.