ಅನೇಕ ಉದ್ಯೋಗಿಗಳ ಪ್ರತಿ ಮಾಹೆಯ ಸಂಬಂಳದಲ್ಲಿ ಕೊಂಚ ಹಣವನ್ನು ಪಿ.ಎಫ್. ಖಾತೆಯಲ್ಲಿ ಜಮೆ ಮಾಡಲಾಗುತ್ತದೆ. ಸರ್ಕಾರ ಪಿ.ಎಫ್. ಖಾತೆಗೆ ಸ್ಥಿರ ಬಡ್ಡಿಯನ್ನು ಕೊಡುತ್ತದೆ. ಈ ಎಲ್ಲವನ್ನೂ Employees Provident Fund Organization (EPFO) ನಿರ್ವಹಿಸುತ್ತದೆ. ನಿಮ್ಮ PF ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬೆಲ್ಲಾ ವಿವರಗಳನ್ನು ನೀಡುತ್ತಿರುತ್ತದೆ. ಫಿ.ಎಫ್. ಖಾತೆದಾರರು ತಮ್ಮ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ಸುಲಭವಾಗಿ ತಿಳಿಯುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.
ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ತಿಳಿಯಿರಿ: ಪಿ.ಎಫ್, ಖಾತೆದಾರರು ನಿಮ್ಮ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ತಿಳಿದುಕೊಳ್ಳಬಹುದು. ಅದಕ್ಕಾಗಿ ನೀವು ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ನಿಂದ 9966044425 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಬೇಕು. ಈ ನಂಬರ್ ಗೆ ಕರೆ ಮಾಡಿದ ಕೂಡಲೇ ತನ್ನಿದ್ದ ತಾನೆ ಡಿಸ್ ಕನೆಕ್ಟ್ ಆಗುತ್ತದೆ. ಬಳಿಕ ನಿಮ್ಮ ಬ್ಯಾಲೆನ್ಸ್ ವಿವರಗಳು ನಿಮ್ಮ ನಂಬರ್ ಗೆ ಬರುತ್ತದೆ.
EPFO ವೆಬ್ ಸೈಟ್ ಮೂಲಕ ವಿವರ ಪಡೆಯಬಹುದು: ಇನ್ನೂ ಪಿ.ಎಫ್ ಖಾತೆದಾರರು EPFO ವೆಬ್ ಸೈಟ್ ಮೂಲಕವೂ ತಮ್ಮ ಬ್ಯಾಲೆನ್ಸ್ ಸೇರಿದಂತೆ ಇತರೆ ವಿವರಗಳನ್ನು ಪಡೆಯಬಹುದಾಗಿದೆ. ನೀವು ಮೊದಲಿಗೆ UAN ನಂಬರ್ ನಮೂದಿಸಬೇಕು. ಬಳಿಕ ನಿಮ್ಮ ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಬೇಕು. ಬಳಿಕ ನಿಮ್ಮ ಪಾಸ್ ಬುಕ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮ್ಮ ಪಾಸ್ ಬುಕ್ ಒಪೆನ್ ಆಗುತ್ತದೆ. ಅಲ್ಲಿ ನಿಮ್ಮ ಖಾತೆಯ ವಿವರಗಳನ್ನು ಪಡೆಯಬಹುದಾಗಿದೆ.
SMS ಮೂಲಕ ಸಹ PF ಬ್ಯಾಲೆನ್ಸ್ ತಿಳಿಯಿರಿ: ನೀವು ಸುಲಭವಾಗಿ SMS ಮಾಡುವ ಮೂಲಕ ಪಿ.ಎಫ್. ಬ್ಯಾಲೆನ್ಸ್ ಪಡೆದುಕೊಳ್ಳಬಹುದು. ನಿಮ್ಮ ರಿಜೆಸ್ಟರ್ ಮೊಬೈಲ್ ನಂಬರ್ ನಿಂದ EPFOHO ಎಂದು ಟೈಪ್ ಮಾಡಿ ಬಳಿಕ ನಿಮ್ಮ UAN ನಂಬರ್ ನಮೂದಿಸಿ, 7738299899 ಸಂಖ್ಯೆಗೆ ಸಂದೇಶ ಕಳುಹಿಸಬೇಕು. ಬಳಿಕ ನಿಮ್ಮ ಮೊಬೈಲ್ ಗೆ ನಿಮ್ಮ ಪಿ.ಎಫ್ ವಿವರಗಳು ಬರುತ್ತವೆ.
UMANG ಆಪ್ ಮೂಲಕ ಮಾಹಿತಿ ಪಡೆಯಿರಿ: UMANG ಎಂಬ ಆಪ್ ಹಾಗೂ ತಾಣದ ಮೂಲಕವೂ ತಮ್ಮ ಪಿ.ಎಫ್. ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ನಿಮ್ಮ ಪಿ.ಎಫ್. ವಿವರಗಳು, ವಿತ್ ಡ್ರಾ ಸೇರಿದಂತೆ ಮತಷ್ಟು ವಿವರಗಳನ್ನು ಪಡೆದುಕೊಳ್ಳಬಹುದು. UMANG ಆಪ್ ಅನ್ನು ತಾವು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು.