Sunday, August 31, 2025
HomeSpecialSim Card: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಗಳಿವೆ? ಇದನ್ನು ಹೇಗೆ ಪತ್ತೆಹಚ್ಚುವುದು ಗೊತ್ತಾ? ಈ...

Sim Card: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಗಳಿವೆ? ಇದನ್ನು ಹೇಗೆ ಪತ್ತೆಹಚ್ಚುವುದು ಗೊತ್ತಾ? ಈ ಸುಲಭ ಮಾರ್ಗ ಅನುಸರಿಸಿ…!

Sim Card – ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಪೋನ್ ಗಳು ತುಂಬಾನೆ ಪಾತ್ರವಹಿಸುತ್ತವೆ. ಮೊಬೈಲ್ ಇಲ್ಲದೇ ಬಹುತೇಕ ಕೆಲಸಗಳು ನಡೆಯೋದೆ ಇಲ್ಲ ಎನ್ನಬಹುದಾಗಿದೆ. ಆ ಮೊಬೈಲ್ ಪೋನ್ ಗಳಿಗೆ ಸಿಮ್ ಕಾರ್ಡ್ ಬೇಕೇ ಬೇಕಾಗುತ್ತದೆ. ಸಿಮ್ ಕಾರ್ಡ್ ತೆಗೆದುಕೊಳ್ಳಲು ಕೆಲವೊಂದು ಅಗತ್ಯ ದಾಖಲೆಗಳನ್ನು ಬಳಸಬೇಕಾಗುತ್ತದೆ. ಆದರೆ ಕೆಲವರು ತಮ್ಮ ದಾಖಲೆಯನ್ನು ಬಳಸಿ ನಕಲಿ ಸಿಮ್ ಕಾರ್ಡ್ ಗಳನ್ನು ಆಕ್ಟೀವೇಟ್ ಮಾಡಿಕೊಂಡು ವಂಚನೆ ಮಾಡುವಂತಹ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ. ಇದೀಗ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಆಕ್ಟೀವೇಟ್ ಆಗಿದೆ ಎಂದು ನೀವೇ ತಿಳಿದುಕೊಳ್ಳಬಹುದು. ಅದಕ್ಕಾಗಿ ಈ ಸುಲಭ ಮಾರ್ಗ ಅನುಸರಿಸಿದರೇ ಸಾಕು.

checking sim cards on ur document

ದೂರ ಸಂಪರ್ಕ ಇಲಾಖೆಯ ನಿಯಮಗಳಂತೆ ಒಂದು ಆಧಾರ್‍ ಕಾರ್ಡ್ ನಲ್ಲಿ ಒಬ್ಬ ವ್ಯಕ್ತಿಯು 9 ಸಿಮ್ ಕಾರ್ಡ್ ಗಳನ್ನು ಹೊಂದಲು ಅನುಮತಿಸಲಾಗಿದೆ. ಆದರೆ ಕೆಲವರು ಬೇರೊಬ್ಬರ ಆಧಾರ್‍ ಕಾಡ್ ಬಳಸಿ ನಕಲಿ ಸಿಮ್ ಗಳನ್ನು ಆಕ್ಟಿವೇಟ್ ಮಾಡಿಕೊಂಡಿರುತ್ತಾರೆ. ಇತ್ತೀಚಿಗೆ ನಕಲಿ ಸಿಮ್ ಗಳ ಆಕ್ಟಿವೇಟ್ ಗಳು ಕಡಿಮೆಯಾಗಿದೆ ಎಂದು ಹೇಳಬಹುದಾಗಿದೆ. ಆದರೂ ನಿಮ್ಮ ಆಧಾರ್‍ ಕಾರ್ಡ್ ನಲ್ಲಿ ಎಷ್ಟು ಸಿಮ್ ಗಳು ಆಕ್ಟಿವೇಟ್ ಆಗಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ. ಈ ಸಂಬಂಧ ದೂರ ಸಂಪರ್ಕ ಇಲಾಖೆ ಒಂದು ವೆಬ್ ಸೈಟ್ ಅನ್ನು ಸಹ ನಿರ್ವಹಣೆ ಮಾಡುತ್ತಿದೆ. TAFCOP  ಎಂಬ ಅಧಿಕೃತ ವೆಬ್ ಸೈಟ್ ಮೂಲಕ ತಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಗಳು ಆಕ್ಟಿವೇಟ್ ಆಗಿದೆ ಎಂಬುದನ್ನು ತಿಳಿಯಬಹುದಾಗಿದೆ.

checking sim cards on ur document 1

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಿಮ್ ಕಾರ್ಡ್‌ ಗಳು ಆಕ್ಟಿವೇಟ್ ಆಗಿದೆ ಎಂಬುದನ್ನು ಈ ರೀತಿ ಚೆಕ್ ಮಾಡಿಕೊಳ್ಳಿ:

  • ಮೊದಲಿಗೆ TAFCOP ವೆಬ್‌ಸೈಟ್‌ಗೆ ಹೋಗಿ: https://tafcop.dgtelecom.gov.in
  • ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ. ಪ್ರಾಥಮಿಕ ಹಂತದಲ್ಲಿ ನಿಮ್ಮ ನಂಬರನ್ನು ಬಳಸಿ OTP ಮೂಲಕ ಲಾಗಿನ್ ಆಗಬೇಕು
  • ನೋಂದಾಯಿತ ಸಂಖ್ಯೆಗಳ ವಿವರ ನೋಡಿ. ನಂತರ ಲಾಗಿನ್ ಆಗಿ, ನಿಮ್ಮ ಆಧಾರ್ ಮೂಲಕ ನೊಂದಣಿಯಾದ ಎಲ್ಲಾ ನಂಬರ್‍ ಗಳು ಕಾನಿಸುತ್ತವೆ.
  • ಅಲ್ಲಿ ಕಾಣುವಂತಹ ಮೊಬೈಲ್ ಸಂಖ್ಯೆಗಳ ಪೈಕಿ ನೀವು ಬಳಸದೇ ಇರುವಂತಹ ಅಥವಾ ನಿಮಗೆ ಸಂಬಂಧಿಸದೇ ಇರುವಂತಹ ಸಂಖ್ಯೆಗಳಿದ್ದರೇ ನೀವು ಆ ನಂಬರ್‍ ಗಳನ್ನು ಅನ್ ಲಿಂಕ್ ಮಾಡಲು ಮನವಿ ಸಹ ಸಲ್ಲಿಸಬಹುದು.
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular