ರಾಜ್ಯದಲ್ಲಿ ಮುಡಾ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ನವರ ರಾಜೀನಾಮೆಗೆ ವಿಪಕ್ಷಗಳು ಸಹ ಆಗ್ರಹಿಸುತ್ತಿವೆ. ಇದರ ಬೆನ್ನಲ್ಲೆ ಕೆಲ ಪ್ರಭಾವಿ ಸಚಿವರುಗಳು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂಬ ಚರ್ಚೆ ಸಹ ಜೋರಾಗಿದೆ. ಇದಕ್ಕೆ ಮತಷ್ಟು ಪುಷ್ಟಿ ನೀಡುವಂತೆ ಸತೀಶ್ ಜಾರಕೀಹೊಳಿ, ಡಾ.ಜಿ.ಪರಮೇಶ್ವರ್ ಹಾಗೂ ಕೆಲ ಸಚಿವರು ಊಟ-ತಿಂಡಿ ನೆಪದಲ್ಲಿ ಭೇಟಿಯಾಗಿ ಕೆಲವೊಂದು ಚರ್ಚೆ ನಡೆಸಿತ್ತು. ಈ ಸಭೆಗಳಿಂದ ಗೊಂದಲ ಸೃಷ್ಟಿಯಾಗಿದ್ದು, ಸಿಎಂ ಸಿದ್ದರಾಮಯ್ಯ ಈ ಸಚಿವರುಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯನವರ ವಿರುದ್ದ ಮುಡಾ ಹಗರಣದ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಈ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲೂ ಸಹ ಸಿಎಂ ಸಿದ್ದರಾಮಯ್ಯನವರಿಗೆ ಹಿನ್ನಡೆಯಾಯಿತು. ಬಳಿಕ ಸಿಎಂ ವಿರುದ್ದ ಎಫ್.ಐ.ಆರ್ ಸಹ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಈ ಪ್ರಕರಣದ ಸಂಬಂಧ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದರೇ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಜೊರಾಗಿದೆ. ದಲಿತ ಸಿಎಂ ಕೂಗೂ ಸಹ ಕೇಳಿಬಂದಿದೆ. ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವರು ಪ್ರಭಾವಿ ಸಚಿವರು ಸಿಎಂ ಸ್ಥಾನದ ಮೇಲೆ ಒಲವು ತೋರಿಸಿದ್ದಾರೆ. ಜೊತೆಗೆ ಕೆಲವೊಂದು ಸಭೆಗಳನ್ನು ಸಹ ನಡೆಸಿದ್ದಾರೆ. ಈ ಸಂಬಂಧ ಹೈಕಮಾಂಡ್ ಸಹ ಬೇಸರಗೊಂಡಿದ್ದು, ಈ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಸಹ ಪ್ರತ್ಯೇಕ ಸಭೆ ನಡೆಸಿದ ಸಚಿವರ ವಿರುದ್ದ ಗರಂ ಆಗಿದ್ದಾರೆ.
ಇನ್ನೂ ಈ ಸಂಬಂಧ ಅ.10 ರಂದು ನಡೆದ ಕ್ಯಾಬಿನೆಟ್ ಸಭೆ ಆಯೋಜಿಸಿದ್ದರು. ಸಭೆಗೂ ಮುನ್ನಾ ಊಟ, ತಿಂಡಿ ನೆಪದಲ್ಲಿ ಪ್ರತ್ಯೇಕ ಸಭೆ ಮಾಡುತ್ತಿರುವ ನಾಯಕರುಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಮುಡಾ ಕೇಸ್ ಏನೂ ಆಗಲ್ಲ, ನಾನು ಇನ್ನೂ ಸಿಎಂ ಸ್ಥಾನದಲ್ಲಿ ಇರುತ್ತೇನೆ. ಸಿಎಂ ಸ್ಥಾನದ ವಿಚಾರವಾಗಿ ಯಾರೂ ಕೂಡ ಬಹಿರಂಗ ಚರ್ಚೆ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ಪದೇ ಪದೇ ಈ ರೀತಿಯ ಸಭೆಗಳನ್ನು ಮಾಡುತ್ತಿದ್ದರೇ, ಅದನ್ನು ನೋಡಿಕೊಂಡು ಹೈಕಮಾಂಡ್ ಸುಮ್ಮನಿರುವುದಿಲ್ಲ. ಅಲ್ಲಿಂದಲೇ ನೊಟೀಸ್ ಬರುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇನ್ನೂ ಸಿಎಂ ವಿಚಾರದ ಬಗ್ಗೆ ಸಚಿವ ಸತೀಸ್ ಜಾರಕಿಹೊಳಿ ಯವರೂ ಸಹ ಹೈಕಮಾಂಡ್ ಗೆ ಮೂರು ಕಂಡಿಷನ್ ಗಳನ್ನು ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಬದಲಾವಣೆಯ ವಿಚಾರದ ಸಂಬಂಧ ಮಾತನಾಡಿದ ಅವರು, ಸದ್ಯ ಸಿಎಂ ಸಿದ್ದರಾಮಯ್ಯನವರು ಸಿಎಂ ಆಗಿ ಮುಂದುವರೆದಿದ್ದಾರೆ. ಮುಂದಿನ ಅವಧಿಯವರೆಗೂ ಕಾಯೋಣ, ನಾವು ಸಿಎಂ ಬದಲಾವಣೆಯ ಬಗ್ಗೆ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ಎಲ್ಲವೂ ಊಹಾಪೋಹಗಳಷ್ಟೆ ಎಂದು ಹೇಳಿದ್ದಾರೆ. ಇನ್ನೂ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದ್ದು, ಸತೀಶ್ ಜಾರಕಿಹೊಳಿ ಹೈಕಮಾಂಡ್ ಗೆ ಮೂರು ಕಂಡಿಷನ್ ಇಟ್ಟಿದ್ದಾರಂತೆ. ಮೊದಲಿಗೆ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಬಾರು. ಎರಡನೇಯದು ರಾಜೀನಾಮೆ ಕೊಡಲೇ ಬೇಕಾದ ಪರಿಸ್ಥಿತಿ ಬಂದರೇ ಸಿದ್ದರಾಮಯ್ಯನವರು ಹೇಳುವ ವ್ಯಕ್ತಿಯನ್ನೆ ಸಿಎಂ ಮಾಡಬೇಕು. ಮೂರನೇಯದು ಯಾವುದೇ ಕಾರಣಕ್ಕೂ ಡಿ.ಕೆ.ಶಿವಕುಮಾರ್ ರವರನ್ನು ಸಿಎಂ ಮಾಡಬಾರದು ಎಂಬ ಮೂರು ಕಂಡಿಷನ್ ಗಳನ್ನು ಹಾಕಿದ್ದು, ಅದಕ್ಕೆ ಕಾಂಗ್ರೇಸ್ ಹೈಕಮಾಂಡ್ ಸಹ ಒಪ್ಪಿಗೆ ಸೂಚಿಸಿದೆ ಎಂದು ಹೇಳಲಾಗಿದೆ.