ಕೇಂದ್ರ ಮೋಟಾರು ವಾಹನಗಳ ನಿಯಮಗಳಂತೆ ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನಗಳಿಗೆ ಅನುಮತಿ ನೀಡಿರುವ ಹೆಡ್ ಲೈಟ್ ಗಳನ್ನು ಮಾತ್ರ ಅಳವಡಿಸಬೇಕಿದೆ. ಅದರಂತೆ LED ಲೈಟ್ ಗಳನ್ನು ಅಳವಡಿಸಿರುವ ವಾಹನ ಸವಾರರು ದಂಡ ಪಾವತಿಸಬೇಕಿದೆ. LED ಲೈಟ್ ಗಳನ್ನು ನಿರ್ಬಂಧಿಸಿದ ಆದೇಶ ಹೊರಡಿಸಲಾಗಿದೆ. ಈ ಕುರಿತು ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಹೆಚ್ಚು ಬೆಳಕು ನೀಡುವಂತಹ LED ಹೆಡ್ ಲೈಟ್ ಗಳಿಂದ ನಿಮ್ಮ ಎದುರು ಬರುವಂತಹ ವಾಹನ ಸವಾರರಿಗೆ ತೊಂದರೆ ಆಗುತ್ತದೆ. ಅದರಿಂದ ಅಪಘಾತಗಳಾಗುವ ಸಾಧ್ಯತೆಯಿದೆ. ಆದ್ದರಿಂದ LED ಲೈಟ್ ಗಳ ಅಳವಡಿಕೆಗೆ ನಿರ್ಬಂಧ ವಿಧಿಸಲಾಗಿದೆ. LED ಲೈಟ್ ಗಳ ಬ್ಯಾನ್ ಬಗ್ಗೆ ಮಾತನಾಡುತ್ತಿಲ್ಲ. ಹೆಚ್ಚು ಹೊಳೆಯುವಂತಹ ಲೈಟ್ ಗಳನ್ನು ಅಳವಡಿಕೆ ಮಾಡಿದರೇ, ಅದು ರಾತ್ರಿ ಸಮಯದಲ್ಲಿ ಮುಂಬರುವಂತಹ ವಾಹನಗಳ ಸವಾರರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಅಪಘಾತ ಪ್ರಕರಣಗಳನ್ನು ದಾಖಲಿಸುವಾಗ ಮಾಹಿತಿ ಪಡೆದಿದ್ದೇವೆ. ಈ ರೀತಿಯ ಲೈಟ್ ಗಳ ಬಳಕೆಯಿಂದ ಚಾಲಕರ ಮೇಲೆ ಅನಾನುಕೂಲತೆ ಉಂಟು ಮಾಡುತ್ತದೆ. ಆದ್ದರಿಂದ ಈ LED ದೀಪಗಳ್ನು ಅಳವಡಿಸಿಕೊಳ್ಳದಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ನೀವು ನಿಯಮ ಉಲ್ಲಂಘಿಸಿ LED ಲೈಟ್ ಗಳನ್ನು ಅಳವಡಿಸಿಕೊಂಡರೇ, ಅಪಘಾತಗಳು ಹೆಚ್ಚಾಗಲು ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಲಾರಿ, ಟ್ರಕ್, ಕಾರುಗಳು, ಹಾಗೂ ಬೈಕ್ ಗಳೂ ಸಹ ಎಲ್.ಇ.ಡಿ ಲೈಟ್ ಗಳನ್ನು ಅಳವಡಿಸಿಕೊಂಡು ವಾಹನ ಚಲಾಯಿಸುತ್ತಿದ್ದಾರೆ. ಈ ಲೈಟ್ ಗಳು ಬೇರೆ ವಾಹನಗಳ ಚಾಲಕರಿಗೆ ತೊಂದರೆ ಕೊಡುತ್ತಿದೆ. ಆದ್ದರಿಂದ ಇನ್ನು ಮುಂದೆ ಈ ಮಾದರಿಯ ಲೈಟ್ ಗಳನ್ನು ಬಳಸಬಾರದು. ಎಲ್ಲಾ ವಾಹನ ಸವಾರರು ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಅಲೋಕ್ ಕುಮಾರ್ ರವರು ಸೂಚನೆ ನೀಡಿದ್ದಾರೆ. ಇನ್ನೂ ಮಾರ್ಗಸೂಚಿ ಉಲ್ಲಂಘನೆ ಮಾಡಿದರೇ IVMಕಾಯ್ದೆಯ ಕಲಂ 177ರಡಿ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ವಾಹನ ತಪಾಸಣೆ ನಡೆಸಿ ಜುಲೈ 31 ರಂದು ವರದಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.