ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ನಲ್ಲಿರುವ ಒಂದೇ ಕಟ್ಟಡದಲ್ಲಿರುವ ಐದು ವಾಣಿಜ್ಯ ಮಳಿಗೆಗಳಲ್ಲಿ ಗುರುವಾರ (ಜೂ.27) ರ ಬೆಳಗಿನ ಜಾವ 2.30ರ ಸುಮಾರಿನಲ್ಲಿ ಕಳ್ಳತನ ನಡೆದಿದೆ. ಈ ಕೃತ್ಯ ಅಂಗಡಿ ಮಳಿಗೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯಿದ್ದ ಐದು ವಾಣಿಜ್ಯ ಮಳಿಗೆಗಳಲ್ಲಿ ಕಳ್ಳರು ತಮ್ಮಕೈ ಚಳಕ ತೋರಿಸಿದ್ದಾರೆ. ಯುವಕರ ಗುಂಪೊಂದು ಒಂದೇ ಕಟ್ಟಡದಲ್ಲಿನ ಐದು ಅಂಗಡಿಗಳಲ್ಲಿನ ತರಕಾರಿ ಅಂಗಡಿ, ಮೊಬೈಲ್ ಶಾಪ್, ಕೆನರಾ ಬ್ಯಾಂಕ್ ಬ್ಯಾಂಕ್ ಮಿತ್ರ, ಸೂಪರ್ ಮಾಕ್ರೆಟ್ ಗಳಲ್ಲಿ ಕಳ್ಳತನ ಮಾಡಿದ್ದು, ಕಳ್ಳತನ ಮಾಡುವ ವಿಡಿಯೋ ಮೊಬೈಲ್ ಅಂಗಡಿಯಲ್ಲಿನ ಸಿಸಿ ಟಿ.ವಿ. ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಇನ್ನೂ ಸಿಸಿ ಟಿ.ವಿ. ಕ್ಯಾಮೆರಾದಲ್ಲಿನ ವಿಡಿಯೋದಲ್ಲಿ 20 ವರ್ಷದ ಆಸುಪಾಸಿನ ಮೂರು ಮಂದಿ ಯುವಕರು ಸುಮಾರು ಅಂಗಡಿ ಶೆಟರ್‌ನ ಬೀಗ ಮುರಿದು ಒಳ ನುಗ್ಗಿ ಟೇಬಲ್ ಚೆಕ್ ಮಾಡಿ, ಹಣ ದೋಚಿ, ಮೊಬೈಲ್ ಇತರೆ ಸಣ್ಣ ಪುಟ್ಟ ವಸ್ತುಗಳನ್ನು ದೋಚುತ್ತಿರುವ ದೃಶ್ಯ ಸೆರೆಯಾಗಿದೆ. ಇನ್ನೂ ವಿಡಿಯೋದಲ್ಲಿ ಕಳ್ಳರ ಮುಖಗಳು ವಿಡಿಯೋದಲ್ಲಿ ಕಾಣುತ್ತದೆ. ಬ್ಯಾಂಕ್ ಮಿತ್ರ ಕೇಂದ್ರದಲ್ಲಿ ಎಲ್ಲಾ ಹುಡುಕಾಡಿದ ಕಳ್ಳರಿಗೆ ಏನು ಸಿಗದ ಕಾರಣ ಲ್ಯಾಪ್ ಟಾಪ್ ಹೊಡೆದು ಹಾಕಿದ್ದಾರೆ. ತರಕಾರಿ ಮಳಿಗೆಯಲ್ಲಿದ್ದ ಹಣ, ಸೂಪರ್ ಮಾರ್ಕೆಟ್ ನಲ್ಲಿದ್ದ ಹಣ ಕಳುವಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ತನಿಖೆ ಶುರು ಮಾಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.