Friday, November 22, 2024

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ನೀವು ನೋಡಬೇಕಾ, ನಿಮ್ಮ ಪೋನ್ ನಲ್ಲಿ ಈ ಸೆಟ್ಟಿಂಗ್ಸ್ ಮಾಡಿ ಸಾಕು….!

ಇಂದಿನ ಕಾಲದಲ್ಲಿ ವಿಶ್ವದಾದ್ಯಂತ ಭಾರಿ ಖ್ಯಾತಿ ಪಡೆದುಕೊಂಡಿರುವ ವಾಟ್ಸಾಪ್ ಮೆಸೆಜಿಂಗ್ ಆಪ್ ನಮ್ಮ ಜೀವನದ ಒಂದು ಭಾಗವಾಗಿದೆ. ಸ್ಮಾರ್ಟ್ ಪೋನ್ ಹೊಂದಿದ ಪ್ರತಿಯೊಬ್ಬರು ಈ ಆಪ್ ಬಳಸುತ್ತಾರೆ. ಅದರಲ್ಲೂ ವಾಟ್ಸಾಪ್ ಇಲ್ಲದೇ ಅನೇಕರ ಕೆಲಸಗಳೂ ಸಹ ನಡೆಯಲ್ಲ ಎಂದೇ ಹೇಳಬಹುದಾಗಿದೆ. ನಮ್ಮ ಜೀವನದಲ್ಲಿ ವ್ಯಕ್ತಿಗತವಾಗಿ ಅಥವಾ ವೃತ್ತಿಪರವಾಗಿ ವಾಟ್ಸಾಪ್ ತುಂಬಾನೆ ಪ್ರಮುಖ ಪಾತ್ರ ವಹಿಸುತ್ತಿದೆ. ಇನ್ನೂ ವಾಟ್ಸಾಪ್ ಸಹ ತನ್ನ ಬಳಕೆದಾರರಿಗಾಗಿ ಕಾಲ ಕಾಲಕ್ಕೆ ಅಪ್ಡೇಟ್ಸ್ ನೀಡುತ್ತಲೇ ಇರುತ್ತದೆ. ಇದೀಗ ತಾವು ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ಹೇಗೆ ಓದಬೇಕು ಎಂಬುದುನ್ನು ತಿಳಿಯೋಣ ಬನ್ನಿ.

whatsapp deleted msg 0

ದೈತ್ಯ ಮೆಸೆಜಿಂಗ್ ಆಪ್ ಗಳಲ್ಲಿ ವಾಟ್ಸಾಪ್ ಮೊದಲ ಸ್ಥಾನದಲ್ಲಿರುತ್ತದೆ. ವಾಟ್ಸಾಪ್ ಇಲ್ಲದೇ ಇಂದು ಅನೇಕ ಕೆಲಸಗಳು ನಡೆಯೋದೆ ಇಲ್ಲ. ಸರ್ಕಾರಿ ಇಲಾಖೆಗಳಿಂದ ಹಿಡಿದು ಸಾಮಾನ್ಯ ಜನರಿಗೂ ವಾಟ್ಸಾಪ್ ಅತಿ ಮುಖ್ಯವಾಗಿದೆ. ಇನ್ನೂ ವಾಟ್ಸಾಪ್ ತಮ್ಮ ಬಳಕೆದಾರರ ಅನುಕೂಲಕ್ಕಾಗಿ  ವಿವಿಧ ಅಪ್ಡೇಟ್ ಗಳನ್ನು ಆಗಾಗೆ ಕೊಡುತ್ತಿರುತ್ತದೆ. ಸಾಮಾನ್ಯವಾಗಿ ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ಓದುವುದು ತುಂಬಾನೆ ಕಷ್ಟ. ಆದರೆ ಕೆಲವೊಂದು ಟ್ರಿಕ್ಸ್ ಬಳಸದರೇ ನೀವು ಸಹ ಡಿಲೀಟ್ ಆದಂತಹ ಸಂದೇಶಗಳನ್ನು ಓದಬಹುದಾಗಿದೆ. ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ ನೀವು ಒಮ್ಮೆ ಡಿಲೀಟ್ ಆದ ಮೆಸೇಜ್ ಗಳನ್ನು ಓದಲು ಟ್ರೈ ಮಾಡಿ.

ಇನ್ನೂ ಅನೇಕರು ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೇಸೇಜ್ ಗಳನ್ನು ಓದಲು ಥರ್ಡ್ ಪಾರ್ಟಿ ಆಪ್ ಗಳನ್ನು ಬಳಸುತ್ತಿರುತ್ತಾರೆ. ಆದರೆ ಅದರ ಅವಶ್ಯಕತೆಯಿರಲ್ಲ. ನೀವು ನಿಮ್ಮ ಪೋನ್ ಸೆಟ್ಟಿಂಗ್ ಗಳನ್ನು ಬದಲಿಸುವುದರ ಮೂಲಕ ಡಿಲೀಟ್ ಆದಂತಹ ಮೆಸೇಜ್ ಗಳನ್ನು ಓದಬಹುದು. ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ.

whatsapp deleted msg 1

  • ಮೊದಲು ಪೋನ್ ಸೆಟ್ಟಿಂಗ್ ಗಳಿಗೆ ಹೋಗಿ
  • ಬಳಿಕ ಆಪ್ಸ್, ನೊಟಿಫೀಕೆಷನ್ ಆಯ್ಕೆ ಮಾಡಿ
  • ಬಳಿಕ ನೊಟಿಫೀಕೆಷನ್ ಆಯ್ಕೆ ಮಾಡಿ
  • ಇಲ್ಲಿ ನೀವು ಕಳೆಗೆ ಸ್ಕ್ರೋಲ್ ಮಾಡಿದರೇ, ನೊಟಿಫಿಕೇಷನ್ ಹಿಸ್ಟರಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ
  • ಡಿಲೀಟ್ ಆದ ಸಂದೇಶಗಳನ್ನು ಓದಲು, ನೊಟಿಫಿಕೇಷನ್ ಹಿಸ್ಟರಿ ಟೋಗುಲ್ ಆನ್ ಮಾಡಿ
  • ಈ ಪ್ರಕ್ರಿಯೆ ಪೂರ್ಣ ಗೊಳಿಸದ ಬಳಿಕ ನೀವು ಡಿಲೀಟ್ ಆದ ಸಂದೇಶಗಳನ್ನು ಓದಬಹುದಾಗಿದೆ
  • ಈ ಸೆಟ್ಟಿಂಗ್ಸ್ ಮಾಡುವುದರ ಮೂಲಕ ವಾಟ್ಸಾಪ್ ಮಾತ್ರವಲ್ಲದೇ ಇತರೆ ಆಪ್ ಗಳ ನೊಟಿಫಿಕೇಷನ್ ಸಹ ಓದಬಹುದು.

ಇನ್ನೂ ತಾವು ಇಲ್ಲೊಂದು ಪ್ರಮುಖ ವಿಚಾರವನ್ನು ಗಮನಿಸಬೇಕಾಗಿದೆ. ಎಲ್ಲಾ ಪೋನ್ ಗಳಲ್ಲಿ ಸೆಟ್ಟಿಂಗ್ಸ್ ಒಂದೇ ಮಾದರಿಯಲ್ಲಿ ಇರೊಲ್ಲ. ಒಂದೊಂದು ಪೋನ್ ನಲ್ಲಿ ಒಂದೊಂದು ಆಪ್ಷನ್ ಇರುತ್ತದೆ. ಆದ್ದರಿಂದ ತಮ್ಮ ಪೋನ್ ಗಳಲ್ಲಿರುವ ಸೆಟ್ಟಿಂಗ್ಸ್ ನಂತೆ ನೊಟಿಫಿಕೇಷನ್ ಹಿಸ್ಟರಿಯನ್ನು ಆಯ್ಕೆ ಮಾಡಬೇಕಾಗುತ್ತದೆ (ಸಂಗ್ರಹ ಮಾಹಿತಿ)

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!