Accident – ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಬತ್ತಲಹಳ್ಳಿ ಗ್ರಾಮದ ಬಳಿ, ಇಂದು (ಆ.18) ಬೆಳಗ್ಗೆ ಎಂ. ರಾಮಯ್ಯ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್, ಮಂಡಿಕಲ್ ಶಾಲೆಗೆ ಸೇರಿದ ಮಕ್ಕಳಿದ್ದ ವಾಹನ ಅಪಘಾತಕ್ಕೊಳಗಾಗಿದೆ. ಸಕಾಲಕ್ಕೆ ನೆರವು ಸಿಕ್ಕಿದ್ದರಿಂದ ವಾಹನದಲ್ಲಿದ್ದ ವಿದ್ಯಾರ್ಥಿಗಳು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
Accident – ಘಟನೆಯ ಹಿನ್ನೆಲೆ ಮತ್ತು ರಕ್ಷಣಾ ಕಾರ್ಯ
ದಿನನಿತ್ಯದಂತೆ ವಿದ್ಯಾರ್ಥಿಗಳನ್ನು ತುಂಬಿಕೊಂಡು ಶಾಲೆಗೆ ಹೊರಟಿದ್ದ ವಾಹನ, ಬತ್ತಲಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ಪಲ್ಟಿಯಾಗಿದೆ. ಈ ಘಟನೆಯಿಂದ ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಗುಡಿಬಂಡೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್, ಯಾವುದೇ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
Accident – ಸ್ಥಳೀಯರು, ಪೊಲೀಸರ ನೆರವಿನಿಂದ ಮಕ್ಕಳಿಗೆ ಆಸರೆ
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು, ಪೊಲೀಸ್ ಸಿಬ್ಬಂದಿ ಮತ್ತು ಶಾಲೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಕೂಡಲೇ ಗಾಯಗೊಂಡಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರ ತೆಗೆದು, ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದರು. ನಂತರ ಜೆಸಿಬಿ ಯಂತ್ರದ ಸಹಾಯದಿಂದ ಅಪಘಾತಕ್ಕೊಳಗಾದ ವಾಹನವನ್ನು ಮೇಲೆ ಎತ್ತಲಾಯಿತು.