School Girl – ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಿರ್ಭೀತಿಯಿಂದ ರಸ್ತೆಯಲ್ಲಿ ಓಡಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಸರಗಳ್ಳರು, ಕಳ್ಳಕಾಕರು ಒಂದು ಕಡೆಯಾದರೆ, ಇನ್ನೊಂದು ಕಡೆ ಪುಂಡರ ಕಾಟ. ಅದರಲ್ಲೂ, ಒಬ್ಬಂಟಿಯಾಗಿ ಓಡಾಡುವ ಹುಡುಗಿಯರನ್ನೇ ಗುರಿಯಾಗಿಸಿಕೊಂಡು ಕೆಲವರು ಚುಡಾಯಿಸುವುದು ಸಾಮಾನ್ಯವಾಗಿದೆ.
ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಹುಡುಗಿಯರು ಭಯಗೊಂಡು, ಅಲ್ಲಿಂದ ಓಡಿ ಹೋಗುತ್ತಾರೆ. ಆದರೆ, ಉತ್ತರ ಪ್ರದೇಶದ (Uttar Pradesh) ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು (School Girl) ತನ್ನನ್ನು ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲೇ ಚಪ್ಪಲಿ ಏಟು ನೀಡಿ ಬುದ್ಧಿ ಕಲಿಸಿದ್ದಾಳೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral Video) ಆಗುತ್ತಿದೆ.
School Girl – ಚುಡಾಯಿಸಿದವನಿಗೆ ಚಪ್ಪಲಿ ಏಟು!
ಉತ್ತರ ಪ್ರದೇಶದ ಉನ್ನಾವೋದಲ್ಲಿ (Unnao) ನಡೆದ ಈ ಘಟನೆ ಅನೇಕರಿಗೆ ಮಾದರಿಯಾಗಿದೆ. ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಈ ಯುವತಿಯನ್ನು ಚುಡಾಯಿಸಲು ಯತ್ನಿಸಿದ್ದಾನೆ. ಆದರೆ, ಅದಕ್ಕೆ ಭಯಪಡದ ಆಕೆ, ಆತನ ಕಾಲರ್ ಹಿಡಿದು, “ಹುಡುಗಿಯರಿಗೆ ಚುಡಾಯಿಸುತ್ತೀಯಾ?” ಎಂದು ಪ್ರಶ್ನಿಸಿ, ನಡು ರಸ್ತೆಯಲ್ಲೇ ಆತನಿಗೆ ಧರ್ಮದೇಟು ನೀಡಿದ್ದಾಳೆ.
ಈ ವಿಡಿಯೋವನ್ನು ‘Ghar Ke Kalesh’ ಎಂಬ X ಖಾತೆಯಲ್ಲಿ (ಹಿಂದಿನ ಟ್ವಿಟ್ಟರ್) ಹಂಚಿಕೊಳ್ಳಲಾಗಿದ್ದು, “ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಿರುಕುಳ ನೀಡಿದ ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ ವಿದ್ಯಾರ್ಥಿನಿ” ಎಂಬ ಶೀರ್ಷಿಕೆ ನೀಡಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click here
School Girl – ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ಈ ವಿಡಿಯೋದಲ್ಲಿ, ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿ ಒಬ್ಬ ವ್ಯಕ್ತಿಗೆ ಸಾರ್ವಜನಿಕವಾಗಿ ಹೊಡೆಯುತ್ತಿರುವುದನ್ನು ನೋಡಬಹುದು. ಆಕೆ ಶಾಲೆಗೆ ಹೋಗುತ್ತಿದ್ದಾಗ ಆ ವ್ಯಕ್ತಿ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಹುಡುಗಿ, ಆತನ ಕಾಲರ್ ಹಿಡಿದು ರಸ್ತೆಯ ಮಧ್ಯಕ್ಕೆ ಎಳೆದು ತಂದು, ಎಲ್ಲರೆದುರೇ ಚಪ್ಪಲಿಯಿಂದ ಹೊಡೆದಿದ್ದಾಳೆ.
Read this also : Viral : ಹೊಟ್ಟೆ ನೋವಿನಿಂದ ಬಂದ ವ್ಯಕ್ತಿ, ಸಿಟಿ ಸ್ಕ್ಯಾನ್ ನೋಡಿ ವೈದ್ಯರೇ ಶಾಕ್…!
School Girl – ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ಮೆಚ್ಚುಗೆ
ಜುಲೈ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 44 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಅನೇಕ ಕಮೆಂಟ್‌ಗಳನ್ನು ಪಡೆದುಕೊಂಡಿದೆ.
- ಒಬ್ಬ ಬಳಕೆದಾರರು, “ಅಲ್ಲಿ ನಿಂತುಕೊಂಡು ನೋಡುತ್ತಿದ್ದ ಒಬ್ಬರಾದರೂ ಹುಡುಗಿಯ ಸಹಾಯಕ್ಕೆ ಬಂದ್ರಾ? ಅವರಿಗೆ ನಾಚಿಕೆ ಆಗಬೇಕು. ಆದರೂ ಈ ಹುಡುಗಿಯ ಧೈರ್ಯಕ್ಕೆ ಮೆಚ್ಚಲೇಬೇಕು” ಎಂದು ಹೇಳಿದ್ದಾರೆ.
- ಇನ್ನೊಬ್ಬರು, “ಆ ಹುಡುಗಿಗೆ ಖಂಡಿತ ಪ್ರಶಸ್ತಿ ನೀಡಬೇಕು” ಎಂದು ಕಮೆಂಟ್ ಮಾಡಿದ್ದಾರೆ.
- ಮತ್ತೊಬ್ಬ ಬಳಕೆದಾರರು, “ಈ ಹುಡುಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾಳೆ” ಎಂದು ಶ್ಲಾಘಿಸಿದ್ದಾರೆ.