ಗುಡಿಬಂಡೆ : ಪರಿಸರ ವೇದಿಕೆಯ ವತಿಯಿಂದ ಗಿಡ ನೆಟ್ಟು ವಿಶ್ವಪ್ರಕೃತಿ ಸಂರಕ್ಷಣಾ ದಿನವನ್ನು (Save Nature) ಗುಡಿಬಂಡೆ ವಿನಾಯಕ ನಗರದ ಉದ್ಯಾನವನದಲ್ಲಿ ಆಚರಿಸಲಾಯಿತು. ಪ್ರತಿಯೊಬ್ಬರು ವಿಶೇಷ ದಿನಗಳಂದು ಸಸಿ ನೆಟ್ಟು ಅದರ ಪೋಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡು ಪರಿಸರವನ್ನು ಸಂರಕ್ಷನೆ ಮಾಡಬೇಕೆಂದು ಪರಿಸರ ಪ್ರೇಮಿಗಳು ಅರಿವು ಮೂಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ (Save Nature) ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಗುಂಪು ಮರದ ಆನಂದ್ ಮಾತನಾಡಿ, ಪ್ರತಿ ವರ್ಷ ಜುಲೈ 28ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನದ ಆಚರಣೆಯ ಮುಖ್ಯ ಉದ್ದೇಶ ಜನರು ಪ್ರಕೃತಿಯನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡುವುದು ಮತ್ತು ಅದನ್ನು ಸಂರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ದುರುಪಯೋಗ ದಿಂದಾಗಿ ಜಾಗತಿಕ ತಾಪಮಾನದ ಏರಿಕೆ. ವಿವಿಧ ಸಾಂಕ್ರಾಮಿಕ ರೋಗಗಳು ಪ್ರಕೃತಿ ವಿಕೋಪಗಳು ಸೇರಿದಂತೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸುವಂತಾಗಿದೆ. (Save Nature) ಹೀಗಾಗಿ ಪ್ರಸ್ತುತ ಅದನ್ನು ತಡೆಯುವುದು ಅನಿವಾರ್ಯವಾಗಿದ್ದು ಅದನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಗುಡಿಬಂಡೆ (Save Nature) ಪರಿಸರ ವೇದಿಕೆ ಅಧ್ಯಕ್ಷರಾದ ಬಿ ಮಂಜುನಾಥ್ ಮಾತನಾಡಿ, ನಮ್ಮ ಪ್ರಕೃತಿ ಸಂಪನ್ಮೂಲಗಳಾದ ಗಾಳಿ. ನೀರು. ಖನಿಜಗಳು. ಸಸ್ಯವರ್ಗ ಪ್ರಾಣಿಗಳನ್ನು ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗುಡಿಬಂಡೆ ಸೇರಿದಂತೆ ವಿವಿಧ ಕಡೆ ಪರಿಸರ ವೇದಿಕೆ ವತಿಯಿಂದ ಹುಟ್ಟುಹಬ್ಬ, ಹಬ್ಬ ಹರಿದಿನ ಸೇರಿದಂತೆ ವಿಶೇಷ ದಿನಗಳಂದು ಸಸಿ ನೆಡುವ ಮೂಲಕ ಪರಿಸರದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ (Save Nature) ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಂಜುನಾಥ್. ಶೋಭಾ. ಹಾಗೂ ಪರಿಸರವಾದಿಗಳಾದ ಸರ್ದಾರ್. ಗಂಗಾಧರಪ್ಪ.ರಮೇಶ್. ವನಸಿರಿ ನಿಶ್ಚಿತ. ಚೇತನ್. ಸಮರ್ಥ್. ವೇದಾಂತ್. ಧನುಶ್ರೀ. ಧನುಷ್. ಮುಂತಾದರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಮಾಡಿದರು.