ದೃಷ್ಟಿದೋಷವುಳ್ಳ ವೃದ್ಧ ದಂಪತಿ ತಮ್ಮ ಮನೆಯಲ್ಲಿ ಪುತ್ರ ಸಾವನ್ನಪ್ಪಿರುವ ವಿಚಾರ ತಿಳಿಯದೆ ನಾಲ್ಕು ದಿನಗಳ ಕಾಲ ಕಿರಿಯ ಪುತ್ರನ ಶವದೊಂದಿಗೆ ವಾಸವಾಗಿರುವ (Sad News) ಹೃದಯ ವಿದ್ರಾವಕ ಹೈದರಾಬಾದ್ ನ ನಾಗೋಲ್‌ನಲ್ಲಿ ಘಟನೆ ನಡೆದಿದೆ. ವೃದ್ದ ದಂಪತಿಯ ಮಗ ಸತ್ತು ಮೂರು ದಿನ ಕಳೆದರೂ ಅರಿಯದ ದಂಪತಿ ಶವದೊಂದಿಗೆ ದಿನ ಕಳೆದಿದ್ದಾರೆ. ಶವ ಸತ್ತು ಮೂರು ದಿನಗಳು ಕಳೆದ ಹಿನ್ನೆಲೆಯಲ್ಲಿ ದುರ್ವಾಸನೆ ಬಂದಿದ್ದು, ಅಕ್ಕಪಕ್ಕದವರು ಗಮನಿಸಿ ಪರಿಶೀಲನೆ ನಡೆಸಿದಾಗ ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಹೃದರಾಬಾದ್ ನ ನಾಗೋಲ್ ಪ್ರದೇಶದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಕಳೆದ ನಲವತ್ತು ವರ್ಷಗಳಿಂದ ವೃದ್ದ ದಂಪತಿಯಾದ ಕಾಲುವ ರಮಣ ಹಾಗೂ ಪತ್ನಿ ಶಾಂತಿಕುಮಾರಿ ಬಾಡಿಗೆ ಮನೆಯಲ್ಲಿ (Sad News) ವಾಸವಿದ್ದರು. ಅವರೊಂದಿಗೆ ಕಿರಿಯ ಪುತ್ರ ಪ್ರಮೋದ್ ಸಹ ವಾಸವಿದ್ದ. ಈ ವೃದ್ದ ಅಂಧ ದಂಪತಿಗೆ ಇಬ್ಬರು ಮಕ್ಕಳು, ಹಿರಿಯ ಪುತ್ರ ತನ್ನ ಕುಟುಂಬದೊಂದಿಗೆ ಬೇರೆಯಾಗಿ ವಾಸವಿದ್ದ. ಪ್ರಮೋದ್ ಗೆ ಮದುವೆಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ನಿಯಿಂದ ಬೇರೆಯಿದ್ದ. ಈ ಕಾರಣದಿಂದ ಪ್ರಮೋದ್ ಕುಡಿಯುವ ಅಭ್ಯಾಸ ಬೆಳೆಸಿಕೊಂಡಿದ್ದ. ಮೂರು ದಿನಗಳ ಹಿಂದೆ (Sad News) ಆತ ಕುಡಿದು ಮನೆಗೆ ಬಂದು ಮಲಗಿದ್ದು, ಮಲಗಿದ್ದಾಗಲೇ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಇನ್ನೂ ಮೂರು ದಿನಗಳ ಹಿಂದೆ ಪ್ರಮೋದ್ ತನ್ನ ಪೋಷಕರಿಗೆ (Sad News) ರಾತ್ರಿ ಊಟ ಬಡಿಸಿ ನಿದ್ರೆಗೆ ಜಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮೋದ್ ನಿದ್ರೆಯಲ್ಲಿಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ. ದೃಷ್ಟಿ ವಿಕಲಚೇತನ ದಂಪತಿಗೆ ಮಗ ತೀರಿಕೊಂಡಿದ್ದರಿಂದ (Sad News) ಮೂರು ದಿನ ಊಟ, ನೀರು ಇರಲಿಲ್ಲ. ಅಲ್ಲದೆ, ಅವರು ತಮ್ಮ ಕೈಕಾಲುಗಳನ್ನು ಚಲಿಸುವ ಸ್ಥಿತಿಯಲ್ಲಿರಲಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇನ್ನೂ ವೃದ್ದ ದಂಪತಿಗೆ ತನ್ನ ಮಗ ಸತ್ತಿರುವುದು ತಿಳಿದಿರಿಲ್ಲ. ಶವ ಕೊಳೆಯಲು ಶುರುವಾಗುತ್ತಿದ್ದಂತೆ ಅಕ್ಕಪಕ್ಕದ ಮನೆಯವರಿಗೆ ದುರ್ವಾಸನೆ ಶುರುವಾಗಿದೆ. ಇದನ್ನು ಗಮನಿಸಿ ಮನೆಯೊಳಗೆ ನೋಡಿದಾಗ ಪ್ರಮೋದ್ ಮೃತಪಟ್ಟಿರುವುದು ಕಂಡು (Sad News) ಬಂದಿದ್ದು, ಕೂಡಲೇ ನಾಗೋಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.