ಇತ್ತೀಚಿಗೆ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವೊಂದು ಪ್ರಕರಣಗಳಲ್ಲಿ ಸಾಲಬಾದೆ, ಪ್ರೇಮ ವೈಫಲ್ಯ ಸೇರಿದಂತೆ ಹಲವು ಕಾರಣಗಳಿಂದ ಆತ್ಮಹತ್ಯೆಗಳು ನಡೆದರೇ, ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮನೆಯಲ್ಲಿ ಪೋಷಕರು ಬೈದ ಕಾರಣದಿಂದ ಮನನೊಂದು BBA ವಿದ್ಯಾರ್ಥಿನಿಯೊಬ್ಬರು (Sad News) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂದಿನ ಕಾಲದಲ್ಲಿ ತಮ್ಮ ಮಕ್ಕಳಿಗೆ ಅಪ್ಪ ಅಮ್ಮ ಬೈಯ್ಯೊದು, ಬುದ್ದಿವಾದ ಹೇಳುವುದು ತಪ್ಪು ಎಂಬಂತಾಗಿಬಿಟ್ಟಿದೆ. ತಮ್ಮ ಮಕ್ಕಳು ಉದ್ದಾರವಾಗಲಿ ಎಂದು ಬುದ್ದಿವಾದ ಹೇಳಲು ಕೋಪದಿಂದ ಜೋರಾಗಿ ಮಾತನಾಡಿದರೂ ಕೆಲ ಮಕ್ಕಳು ಸಹಿಸಿಕೊಳ್ಳುವುದಿಲ್ಲ. ತಮ್ಮ ಪೋಷಕರು ಏತಕ್ಕಾಗಿ ಕೋಪದಲ್ಲಿ ಮಾತನಾಡುತ್ತಿದ್ದಾರೆ ಎಂಬುದನ್ನೂ ಸಹ ಮಕ್ಕಳು ಅರ್ಥ ಮಾಡಿಕೊಳ್ಳಲು ಸಿದ್ದರಿರುವುದಿಲ್ಲ. ಕೋಪದಲ್ಲಿ ಬುದ್ದಿ ಕಳೆದುಕೊಂಡ ಮಕ್ಕಳು ಮನೆಯನ್ನು ಬಿಟ್ಟು ಹೋಗುವ ತಪ್ಪು ನಿರ್ಣಯ ತೆಗೆದುಕೊಳ್ಳುತ್ತಾರೆ, ಆದ್ದರಿಂದ ವಯಸ್ಸಿಗೆ ಬಂದ ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದು ಇಂದಿನ ಕಾಲದಲ್ಲಿ ಪೋಷಕರಿಗೆ ತುಂಬಾನೆ ಕಷ್ಟಕರವಾಗಿದೆ.
ಈ ರೀತಿಯ ಕ್ಷುಲ್ಲಕ ಕಾರಣದಿಂದ ಬದುಕಿ ಬಾಳಬೇಕಾದ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರಿನ ಚಾಮರಾಜಪೇಟೆ 3ನೇ ಮೈನ್ ಮನೆಯೊಂದರಲ್ಲಿ ವಾಸವಾಗಿದ್ದ ಶ್ರಾವ್ಯ (19) ಎಂಬ ಯುವತಿ ಮೃತ ದುರ್ದೈವಿ. ಶ್ರಾವ್ಯ ಖಾಸಗಿ ಕಾಲೇಜೊಂದರಲ್ಲಿ ಬಿಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದಳು. ಅಮ್ಮ ನಿಂದಿಸಿದ್ದಾಳೆ ಅಂತಾ ಕೋಪಗೊಂಡ ಶ್ರಾವ್ಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಬದುಕಿ ತಂದೆ ತಾಯಿಗೆ ಒಳ್ಳೆಯ ಹೆಸರು ತಂದುಕೊಡಬೇಕಾಗಿದ್ದ ಶ್ರಾವ್ಯ ಇದೀಗ ಇಹಲೋಕ ತ್ಯೆಜಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.