ಕರ್ನಾಟಕ ರಾಜ್ಯ ಸರ್ಕಾರ ಕಬಾಬ್, ಫಿಶ್, ಚಿಕನ್ ಗೆ ಬಳಸುವಂತಹ ಕೃತಕ ಬಣ್ಣ ಬಳಕೆಗೆ ನಿರ್ಬಂಧ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದಾದ್ಯಂತ ಈ ಆದೇಶ ಹೊರಡಿಸಿದೆ. ರಾಜ್ಯದ 36 ಕಡೆ ಕಬಾಬ್ ಮಾದರಿಯ ಕಲರ್ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿದ್ದು, ಅದರಲ್ಲಿ ಯಲ್ಲೋ ಹಾಗೂ ಕಾರ್ಮೊಸಿನ್ ಮಾದರಿ ಕಂಡುಬಂದಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಆಯುಕ್ತ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಗೋಬಿ, ಕಾಟನ್ ಕ್ಯಾಂಡಿ ಗೆ ಕೃತಕ ಬಣ್ಣ ಬಳಕೆಯನ್ನು ನಿರ್ಬಂಧಿಸಲಾಗಿತ್ತು.
ರಾಜ್ಯದಾದ್ಯಂತ ಕಬಾಬ್, ಫಿಶ್, ಚಿಕನ್ ಗೆ ಬಳಸುವಂತಹ ಕೃತಕ ಬಣ್ಣ ಬಳಕೆಯನ್ನು ರಾಜ್ಯ ಸರ್ಕಾರ ನಿರ್ಬಂಧಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿ ಆಹಾರ ವಸ್ತುಗಳಿಗೆ ಬಳಸುವಂತಹ ಕೃತಕ ಬಣ್ಣಗಳಲ್ಲಿ ರಾಸಾಯನಿಕ ಇರುವುದರಿಂದ, ಈ ಪದಾರ್ಥಗಳ ಮಾದರಿಯನ್ನು FSSAI ಸಂಗ್ರಹ ಮಾಡಿದ್ದು, ರಾಜ್ಯದಾದ್ಯಂತ 170 ಕ್ಕೂ ಹೆಚ್ಚು ಕಡೆ ಪರೀಕ್ಷೆ ಮಾಡಲಾಗಿತ್ತು. ಈ ವೇಳೆ ಕೃತಕ ಬಣ್ಣಗಳಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕ ಪದಾರ್ಥಗಳಿರುವುದು ಪತ್ತೆಯಾಗಿದ್ದು, ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿ ಆದೇಶ ಮಾಡಲಾಗಿತ್ತು.
ಇನ್ನೂ ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್-B ಎಂಬ ರಾಸಾಯನಿಕ ಅಂಶ ಪತ್ತೆಯಾಗಿತ್ತು. ಗೋಬಿ ಮಂಚೂರಿಯಲ್ಲಿ ಸನ್ ಸೆಟ್ ಯೆಲ್ಲೋ ಬಣ್ಣ ಹಾಗೂ ಟಾಟ್ರಾಜಿನ್ ಪತ್ತೆಯಾಗಿತ್ತು. ಈ ರಾಸಾಯನಿಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೃತಕ ಬಣ್ಣ ಬಳಕೆಯನ್ನು ನಿಷೇಧ ಮಾಡಲಾಗಿತ್ತು. ರೋಡ್ ಮೈನ್ ಬಿ ರಾಸಾಯನಿಕ ವನ್ನು ಜವಳಿ, ಚರ್ಮ, ಕಾಗದ ಉದ್ಯಮಗಳಲ್ಲಿ ಕೆಂಪು ಹಾಗೂ ಗುಲಾಭಿ ಬಣ್ಣಕ್ಕಾಗಿ ಬಳಸಲಾಗುತ್ತದೆ ಎನ್ನಲಾಗಿದೆ. ಈ ರಾಸಾಯನಿಕ ಆಹಾರದ ಮೂಲಕ ದೇಹ ಸೇರಿದರೇ ಕ್ಯಾನ್ಸರ್ ಕಾಯಿಲೆಗೆ ತುತ್ತಾಗು ಸಾಧ್ಯತೆಯಿದೆ ಎನ್ನಲಾಗಿದೆ. ಈ ರಾಸಾಯನಿಕ ನಿರಂತರವಾಗಿ ದೇಹ ಸೇರಿದರೇ ಮೆದುಳಿಗೂ ಸಹ ತುಂಬಾ ಸಮಸ್ಯೆಯಾಗುವ ಸಾಧ್ಯತೆಯಿದೆಯಂತೆ. ಆದ್ದರಿಂದ FSSAI ಈ ಕೃತಕ ಕಲರ್ ಅನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ.