ತುಮಕೂರಿನ ಹೊರವಲಯದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಲ್ಲಿ ನಿವಾಸಿಯೊಬ್ಬರ ಮನೆಯ ಕಾಂಪೌಂಡ್ ನಲ್ಲಿ ನಿಲ್ಲಿಸಿರುವ ಹೊಂಡಾ ಆಕ್ಟಿವಾ ವಾಹನದಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ.
ತುಮಕೂರಿನ ಹೊರವಲಯದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಿವಾಸಿ ಮಾಯ ರಂಗಯ್ಯ ರವರ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ ಆಕ್ಟಿವಾ ವಾಹನದಲ್ಲಿ ನಾಗರಹಾವೊಂದು ಸೇರಿಕೊಂಡಿತ್ತು. ಹಾವನ್ನು ಕಂಡ ರಂಗಯ್ಯ ಭಯಭೀತರಾಗಿದ್ದರು. ಬಳಿಕ ವನ್ಯ ಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು.
ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ದ್ವಿಚಕ್ರದ ಒಳಗೆ ಸೇರಿದ್ದ ನಾಗರಹವನ್ನು ರಕ್ಷಣೆ ಮಾಡಿ, ಬಳಿಕ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಹಾವುಗಳು ಇತರ ವನ್ಯ ಜೀವಿಗಳು ಜನವಸತಿ ಪ್ರದೇಶದಲ್ಲಿ ಕಂಡು ಬಂದರೆ ಅವುಗಳಿಗೆ ತೊಂದರೆ ಕೊಡದೆ, ಹತ್ತಿರದ ವನ್ಯಜೀವಿ ರಕ್ಷಕರಿಗೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡುವಂತೆ ಉರಗ ತಜ್ಞ ದಿಲೀಪ್ ಮನವಿ ಮಾಡಿದ್ದಾರೆ.