ರೇಣುಕಾಸ್ವಾಮಿ ಪವಿತ್ರಾ ಗೌಡಗೆ 5 ತಿಂಗಳಿಂದ ಮೆಸೇಜ್ ಮಾಡ್ತಿದ್ದನಂತೆ, ತನಿಖೆಯ ವೇಳೆ ಬಯಲಾದ ರಹಸ್ಯ….!

ಸದ್ಯ ಕರ್ನಾಟಕದಲ್ಲಿ ಭಾರಿ ಸುದ್ದಿಯಾಗುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕಿನಿಂದ ನಡೆಯುತ್ತಿದೆ. ಇದೀಗ ತನಿಖೆಯಲ್ಲಿ ಮೃತ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಸುಮಾರು 5 ತಿಂಗಳಿನಿಂದ ಮೆಸೇಜ್ ಗಳನ್ನು ಮಾಡುತ್ತಿದ್ದನಂತೆ. ಕಳೆದ ಫೆಬ್ರವರಿ ಮಾಹೆಯಿಂದ ಸುಮಾರು 200 ಕ್ಕೂ ಮೆಸೇಜ್ ಗಳನ್ನು ಮಾಡಿದ್ದು, ಎಲ್ಲವೂ ಅಶ್ಲೀಲ ಸಂದೇಶಗಳಾಗಿವೆ ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

Renukaswamy sent messages to pavitra 1

ಕನ್ನಡ ಸಿನಿರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್‍ ದರ್ಶನ್ ಹಾಗೂ ಅವರ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ ನಡೆದಿತ್ತು. ಈ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಸದ್ಯ ಈ ಪ್ರಕರಣದ ಹಿನ್ನೆಲೆಯಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಇತ್ತ ಪ್ರಕರಣದ ತನಿಖೆ ಸಹ ನಡೆಯುತ್ತಿದೆ. ತನಿಖೆಯ ವೇಳೆ ಮತಷ್ಟು ವಿವರಗಳನ್ನು ಕಲೆ ಹಾಕಲಾಗುತ್ತಿದೆ. ಇದೀಗ ತನಿಖೆಯಲ್ಲಿ ಮೃತ ರೇಣುಕಾಸ್ವಾಮಿ ಆರೋಪಿ ಪವಿತ್ರಾ ಗೌಡಗೆ ಕಳೆದ ಫೆಬ್ರವರಿ ಮಾಹೆಯಿಂದ ಸಂದೇಶಗಳನ್ನು ಕಳುಹಿಸುತ್ತಿದ್ದನಂತೆ. ಸುಮಾರು 200 ಕ್ಕೂ ಹೆಚ್ಚು ಮೆಸೇಜ್ ಗಳನ್ನು ಕಳುಹಿಸಿದ್ದು, ಎಲ್ಲಾ ಮೆಸೇಜ್ ಗಳು ಅಶ್ಲೀಲ ಮೆಸೇಜ್ ಗಳು ಎನ್ನಲಾಗಿದೆ.

Renukaswamy sent messages to pavitra 0

ಇನ್ನೂ ರೇಣುಕಾಸ್ವಾಮಿ ಅಷ್ಟೆಲ್ಲಾ ಮೆಸೇಜ್ ಗಳು ಕಳುಹಿಸುತ್ತಿದ್ದರು ಪವಿತ್ರಾ ಗೌಡ ರಿಪ್ಲೆ ಮಾಡಿರಲಿಲ್ಲ. ಈ ಕಾರಣದಿಂದ ಕೋಪಗೊಂಡ ರೇಣುಕಾಸ್ವಾಮಿ ಆಕೆಗೆ ಅಶ್ಲೀಲ ಪೊಟೋಗಳನ್ನು ರವಾನಿಸುತ್ತಿದ್ದ ಎನ್ನಲಾಗಿದೆ. ಈ ಕಾರಣದಿಂದ ಕೋಪಗೊಂಡ ಪವಿತ್ರಾಗೌಡ ಈ ವಿಚಾರವನ್ನು ಪವನ್ ಗೆ ಹೇಳಿದ್ದರಂತೆ. ಬಳಿಕ ಪವನ್, ಪವಿತ್ರಾ ಗೌಡ ರೀತಿ ಚಾಟ್ ಮಾಡಲು ಶುರು ಮಾಡಿದ್ದ, ಪವಿತ್ರಾ ಗೌಡ ರಿಪ್ಲೆ ಕೊಟ್ಟಿದ್ದಾಳೆ ಎಂದು ಭಾವಿಸಿದ ರೇಣುಕಾಸ್ವಾಮಿ ಸಹ ಚಾಟ್ ಮಾಡಿದ್ದ, ಬಳಿಕ ರೇಣುಕಾಸ್ವಾಮಿ ಪೊಟೋ ಕಳುಹಿಸುವಂತೆ ಪವನ್ ಕೇಳಿದ್ದ. ಅದರಂತೆ ರೇಣುಕಾಸ್ವಾಮಿ ತನ್ನ ಪೊಟೋ ಕಳುಹಿಸಿದ್ದ, ರೇಣುಕಾಸ್ವಾಮಿ ಪೊಟೋ ಸಿಕ್ಕ ಮೇಳೆ ಡಿ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾರೆ.

Leave a Comment

Your email address will not be published. Required fields are marked *

Scroll to Top