IPL 2024ರ ಎಲಿಮಿನೇಟರ್ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ತಾನ್ ರಾಯಲ್ಸ್ (RR) ನಡುವೆ ನಡೆಯಲಿದೆ. ಈ ಪಂದ್ಯಾವಳಿ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಾತ್ರಿ 7.30 ರಿಂದ ಈ ಪಂದ್ಯಾವಳಿ ಆರಂಭವಾಗಲಿದ್ದು, ಕೋಟ್ಯಂತರ ಅಭಿಮಾನಿಗಳು ಈ ಪಂದ್ಯ ವೀಕ್ಷಣೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿಗೆ ಬೆದರಿಕೆ ಬಂದಿದ್ದು, ಅವರ ಸುರಕ್ಷತೆ ಇದೀಗ ಆರ್.ಸಿ.ಬಿ ಗೆ ದೊಡ್ಡ ಆಂತಕ ತಂದುಕೊಟ್ಟಿದೆ. ಆದ್ದರಿಂದಲೇ ಪ್ರಾಕ್ಟೀಸ್ ಮ್ಯಾಚ್ ಸಹ ಆಡಿಲ್ಲ. ಜೊತೆಗೆ ಪತ್ರಿಕಾ ಗೊಷ್ಟಿಯನ್ನು ಸಹ ನಡೆಸಿಲ್ಲ. ಈ ಹಿನ್ನೆಯಲ್ಲಿ ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆಗಳು ಮೂಡಿದೆ.
ವಿರಾಟ್ ಕೊಹ್ಲಿ (Virat Kohli) ರವರ ಸುರಕ್ಷತೆ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ತಾನ್ ರಾಯಲ್ಸ್ (RR) ಎರಡೂ ತಂಡಗಳಿಂದ ಪತ್ರಿಕಾ ಗೋಷ್ಟಿಯನ್ನು ರದ್ದು ಮಾಡಲಾಗಿದೆ. ಎರಡೂ ತಂಡಗಳು ಕಳೆದ ಸೋಮವಾರ ಅಹಮದಾಬಾದ್ ಗೆ ತಲುಪಿದ್ದವು. RCB ಕಳೆದ ಶನಿವಾರ ಚೆನೈ ವಿರುದ್ದ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಿ ಜಯಗಳಿಸಿತ್ತು. ಈ ಪಂದ್ಯದ ಬಳಿಕ RCB ಆಟಗಾರರು ಭಾನುವಾರ ಹಾಗೂ ಸೋಮವಾರ ವಿಶ್ರಾಂತಿ ಪಡೆದಿದ್ದರು. ಇದರ ಹೊರತಾಗಿಯೂ ಅಹಮದಾಬಾದ್ ತಲುಪಿದರು. ಆರ್.ಸಿ.ಬಿ ಎಲಿಮಿನೇಟರ್ ಪಂದ್ಯದ ಮೊದಲು ಅಭ್ಯಾಸವನ್ನು ರದ್ದುಗೊಳಿಸಿತು. ಕೊಹ್ಲಿರವರ ಭದ್ರತಾ ದೃಷ್ಟಿಯಿಂದ ಅಭ್ಯಾಸವನ್ನು ರದ್ದು ಗೊಳಿಸಿದೆ. ಜೊತೆಗೆ ಎರಡೂ ತಂಡಗಲೂ ಪತ್ರಿಕಾಗೋಷ್ಟಿ ಸಹ ನಡೆಸಿಲ್ಲ ಎಂದು ಹೇಳಲಾಗುತ್ತಿದೆ.
ಇನ್ನೂ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ತಾನ್ ರಾಯಲ್ಸ್ (RR) ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಭಯೋತ್ಪಾದಕ ಚಟುವಟಿಕೆಗಳ ಶಂಕೆಯ ಮೇರೆಗೆ ನಾಲ್ಕು ಶಸ್ತ್ರಾಸ್ತ್ರಧಾರಿಗಳನ್ನು ಗುಜರಾತ್ ಪೊಲೀಸರು ಬಂಧನ ಮಾಡಿದ್ದಾರೆ. ಅವರಿಂದ ಶಸ್ತ್ರಾಸ್ತ್ರಗಳನ್ನು, ಅನುಮಾನಾಸ್ಪದ ವಿಡಿಯೋಗಳು ಹಾಗೂ ಕೆಲವೊಂದು ಪಠ್ಯ ಸಂದೇಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ತಾನ್ ರಾಯಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಈ ನಡುವೆ ನಾಲ್ವರು ಶಂಕಿತರನ್ನು ಬಂಧನ ಮಾಡಿದ್ದು ಆರ್.ಸಿ.ಬಿ ತುಂಬಾನೆ ಟೆನ್ಷನ್ ಗೆ ಒಳಗಾಗಿದೆ ಎನ್ನಲಾಗಿದೆ. ವಿರಾಟ್ ಕೊಹ್ಲಿ ರವರಿಗೂ ಬೆದರಿಕೆಯಿದೆ ಎನ್ನಲಾಗಿದ್ದು, ಅವರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭ್ಯಾಸವನ್ನು ರದ್ದುಗೊಳಿಸಲಾಗಿದೆ. ಆದರೆ ರಾಜಸ್ತಾನ್ ರಾಯಲ್ಸ್ ಮೈದಾನದಲ್ಲಿ ಅಭ್ಯಾಸ ನಡೆಸಿದೆ ಎನ್ನಲಾಗಿದೆ. ಆದರೆ ಆರ್.ಸಿ.ಬಿ. ಫ್ರಾಂಚೈಸಿ ಪ್ರಾಕ್ಟೀಸ್ ಏಕೆ ರದ್ದುಗೊಳಿಸಿತು ಎಂಬ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕೊಹ್ಲಿರವರ ಸುರಕ್ಷತೆ ದೃಷ್ಟಿಯಿಂದ ಅಭ್ಯಾಸ ರದ್ದು ಮಾಡಿದ್ದಾಗಿ ಕೆಲವೊಂದು ವರದಿಗಳ ಮೂಲಕ ತಿಳಿದುಬಂದಿದೆ.