ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಲು ಮುಂದಾಗಿದ್ದಾರೆ. ರಾಮನಗರ ಹೆಸರಿನ ಬದಲಿಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ (Ramanagara name change) ಮಾಡಲು ಡಿಕೆಶಿ ಮುಂದಾಗಿದ್ದಾರೆ. ಮರುನಾಮಕರಣದ ಸಂಬಂಧ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಹ ಸಲ್ಲಿಸಲಾಗಿದೆ. ಈ ಕುರಿತು ಪರ ವಿರೋಧ ಹೇಳಿಕೆಗಳು ಸಹ ಹೊರಬರುತ್ತಿವೆ. ರಾಮನಗರ ಹೆಸರಿನ ಮರುನಾಮಕರಣ ಬಗ್ಗೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ರಿಯಾಕ್ಟ್ ಆಗಿದ್ದಾರೆ.
ರಾಮನಗರ ಹೆಸರು ಬದಲಾವಣೆಯ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಹೊಸ ಸರ್ಕಾರ ರಚನೆ ಮಾಡಿದ ಮೇಲೆ ರಾಮನಗರ ಹೆಸರು ಏಕೆ ಬದಲಾವಣೆ (Ramanagara name change) ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಬೆಂಗಳೂರಿನ ವಂಶಸ್ಥರು ನಾವು, ಅಲ್ಲಿಗೆ ಸೇರಬೇಕು, ಬೆಂಗಳೂರಿಗೆ ಸೇರಿದರೇ ಮೂಟಗಟ್ಟಲೇ ತುಂಬಬಹುದು ಎಂಬ ಉದ್ದೇಶದಿಂದ ಮರುನಾಮಕರಣ ಮಾಡುತ್ತಿರಬಹುದು ಎಂದು ಡಿಕೆಶಿ ರವರಿಗೆ (D K Shivakumar)ಟಾಂಗ್ ಕೊಟ್ಟಿದ್ದಾರೆ. ಬೆಂಗಳೂರಿಗೆ ನಾಲ್ಕು ತಾಲೂಕುಗಳನ್ನು ಸೇರಿಸುತ್ತೇನೆ, ಭೂಮಿ ಮಾರಾಟ ಮಾಡಬೇಡಿ ಎಂದು ಹೇಳಿದ್ದರು. ರಾಮನಗರ ಮಾಡಿದ್ದ ಉದ್ದೇಶ ಏನು ಎಂಬುದು ಆ ವ್ಯಕ್ತಿಗೆ ಗೊತ್ತಿದೆ. ರಾಮನ ಹೆಸರು ಇರುವುದು ಒಂದು ಭಾಗವಾಗಿದೆ. ರಾಮನಗರಕ್ಕೆ ಅದರದ್ದೇ ಆದ ಇತಿಹಾಸವಿದೆ. ಭೂಮಿ ಲಪಾಟಾಯಿಸಿ ಯಾವುದರ ಬೆಲೆ ಏರಿಕೆ ಮಾಡಿದ್ದಾರೆ ಗೊತ್ತಿದೆ. ಅವರು ಇದನ್ನೆಲ್ಲಾ ಬಿಟ್ಟು ಅಭಿವೃದ್ದಿ ಮಾಡುವತ್ತ ಗಮನಹರಿಸಲಿ ಎಂದು ಆಕ್ರೋಷ ಹೊರಹಾಕಿದರು.
ಇನ್ನೂ ರಾಮನಗರ ಜಿಲ್ಲೆ ಮಾಡಿದ್ದು ನಾವೇ, ಅದನ್ನು ತೆಗೆಯಬೇಕು ಎಂಬುದು ಅವರ ಉದ್ದೇಶ. ದೇವೇಗೌಡರು ಹಾಗೂ ನಾನು ಏನೆಲ್ಲಾ ಅಭಿವೃದ್ದಿ ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಿದೆ. ನಮ್ಮ ಅಭಿವೃದ್ದಿಯ ಬಗ್ಗೆ ಅವರ ಸರ್ಟಿಫಿಕೇಟ್ ನಮಗೆ ಬೇಕಿಲ್ಲ. ಯಾವುದರ ಬೆಲೆ ಏರಿಕೆಯಾಗಿದೆ ಎಂಬುದು ಗೊತ್ತಿದೆ. ಈ ಹಿಂದೆ ಕನಕಪುರ ಸಾತನೂರು ಹೇಗಿತ್ತು, ಆಗ ಇವರು ಯಾರದೋ ಸೇವೆ ಮಾಡಿಕೊಂಡಿದ್ದರು. ಸದ್ಯ ರಾಮನಗರ ಹೆಸರು ಬದಲಾಯಿಸಿದರೂ ನಾನು ಮತ್ತೆ ಬಂದೇ ಬರ್ತಿನಿ ಎಂಬ ವಿಶ್ವಾಸ ಇದೆ. ಸದ್ಯ ನಾಲ್ಕು ತಾಲೂಕುಗಳನ್ನು ಸೇರಿಸಿ ಬೆಂಗಳೂರು ದಕ್ಷಿಣ ಮಾಡಲು ಹೊರಟಿದ್ದಾರೆ. ಈಗಾಗಲೇ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಇದೆ. ಬೇರೆ ಹೆಸರು ಇಟ್ಟರೇ ಆಗೋದೆ ಬೇರೆ. ಆದ್ದರಿಂದ ಅದನ್ನು ಮಾಡುತ್ತಿಲ್ಲ. ಹೆಸರು ಬದಲಾಯಿಸಿದರೇ ಸರ್ಕಾರಿ ದಾಖಲೆಗಳಿಗೆ ಸಹ ಸಮಸ್ಯೆಯಾಗಲಿದೆ ಎಂದು ಹಲವು ವಿಚಾರಗಳ ಬಗ್ಗೆ ಮಾತನಾಡಿದರು.