ಕನ್ನಡ ಸಿನಿರಂಗದ ತಾಕತ್ತು ಏನು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಂತಹ ಸಿನೆಮಾ ಕೆಜಿಎಫ್ ಎಂದೇ ಹೇಳಬಹುದು. ಈ ಸಿನೆಮಾ ಅನೇಕ ಸಿನೆಮಾಗಳ ರೆಕಾರ್ಡ್ಗಳನ್ನು ಪುಡಿ ಮಾಡಿತ್ತು. ಕೆಜಿಎಫ್ (KGF)ಸಿರೀಸ್ ಬಳಿಕ ಯಶ್ (Yash)ರವರ ಮುಂದಿನ ಸಿನೆಮಾದ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ. ಈ ಸಿನೆಮಾದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಕಾತುರ ಅಭಿಮಾನಿಗಳಲ್ಲಿತ್ತು. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ. ರಾಕಿಂಗ್ ಸ್ಟಾರ್ ಯಶ್ ರವರಿಗೂ ಅನಂತ್ ಅಂಬಾನಿ ಮದುವೆಯ (Ambani Marriage) ಆಮಂತ್ರಣ ಸಿಕ್ಕಿದ್ದು, ಮದುವೆಗೆ ಯಶ್ ಹಾಜರಾಗಿದ್ದರು. ಈ ವೇಳೆ ಯಶ್ ಹೊಸ ಸ್ಟೈಲ್ ಅವರ ಅಭಿಮಾನಿಗಳನ್ನು ಫಿದಾ ಮಾಡಿದೆ.
ಇಡೀ ವಿಶ್ವವೇ ಉದ್ಯಮಿ ಅಂಬಾನಿ (Ambani Marriage) ರವರ ಮದುವೆಯ ಬಗ್ಗೆ ಚರ್ಚೆ ಮಾಡುತ್ತಿದೆ. ಅಂಬಾನಿ ರವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ರವರ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಈ ಮದುವೆ ಸಮಾರಂಭಕ್ಕೆ ದೇಶ ಸೇರಿದಂತೆ ವಿವಿಧ ದೇಶಗಳ ಕಲಾವಿದರು ಸಹ ಆಗಮಿಸುತ್ತಿದ್ದಾರೆ. ಈ ಮದುವೆಗೆ ರಾಕಿಂಗ್ ಸ್ಟಾರ್ ಯಶ್ ರವರಿಗೂ ಆಹ್ವಾನ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಯಶ್ ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ತೆರಳಿದ್ದಾರೆ. ಈ ಸಮಯದಲ್ಲಿ ಅವರ ಹೊಸ ಸ್ಟೈಲ್ ಅಭಿಮಾನಿಗಳು ಫಿದಾ ಆಗುವಂತೆ ಮಾಡಿದೆ. ಇನ್ನೂ ಯಶ್ (Yash) ರವರಿಗೆ ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿ ಬಳಗವಿದೆ. ಕೆಜಿಎಫ್ ಸಿರೀಸ್ ಮೂಲಕ ಅವರ ವಿಶ್ವ ಮಟ್ಟದಲ್ಲಿ ಕ್ರೇಜ್ ಪಡೆದುಕೊಂಡರು. ಕೆಜಿಎಫ್ (KGF) ಸಿನೆಮಾದಲ್ಲಿ ಯಶ್ ಸ್ಟೈಲ್ ಎಲ್ಲರನ್ನೂ ಸೆಳೆದಿತ್ತು. ಇದೀಗ ಅವರ ಮುಂದಿನ ಸಿನೆಮಾಗಾಗಿ ಸ್ಟೈಲ್ ಬದಲಿಸಿದ್ದಾರೆ ಎನ್ನಲಾಗಿದೆ.
ಕೆಜಿಎಫ್ ಸಿನೆಮಾದ ಬಳಿಕ ಯಶ್ (Yash) ಮಲಯಾಳಂ ಮೂಲದ ನಿರ್ದೇಶಕಿ ಗೀತು ಮೋಹನದಾಸ್ ರವರ ನಿರ್ದೇಶನದಲ್ಲಿ ಟಾಕ್ಸಿಕ್ (Toxic Movie) ಸಿನೆಮಾ ಮಾಡುತ್ತಿದ್ದಾರೆ. ಈ ಸಿನೆಮಾದ ಟೈಟಲ್ ಟೀಸರ್ ಸಹ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿತ್ತು. ಬಳಿಕ ಸಿನೆಮಾದ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿತ್ತು. ಈ ಸಿನೆಮಾದ ಆಕ್ಷನ್ ಸಿನೆಮಾ ಆಗಿರಲಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಯಶ್ ತಮ್ಮ ಮುಂದಿನ ಸಿನೆಮಾಗಾಗಿ ತಲೆಯ ಕೂದಲನ್ನು ಶಾರ್ಟ್ ಮಾಡಿಸಿಕೊಂಡಿದ್ದಾರೆ. ಜೊತೆಗೆ ಗಡ್ಡ ಸಹ ಕೊಂಚ ಬದಲಾಗಿದೆ. ಅಂಬಾನಿ ಮಗನ (Ambani Marriage) ಮದುವೆಯಲ್ಲಿ ಯಶ್ (Yash) ನ್ಯೂ ಲುಕ್ ರಿವೀಲ್ ಆಗಿದ್ದು, ಅಭಿಮಾನಿಗಳು ಪುಲ್ ಫಿದಾ ಆಗಿದ್ದಾರೆ. ಈ ಮದುವೆಗೆ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದ್ದಾರೆ.