Railway Jobs – 10ನೇ ತರಗತಿ ಹಾಗೂ ಪಿಯುಸಿ ಓದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಹುದ್ದೆ ಪಡೆಯುವ ಅವಕಾಶ ಇಲ್ಲಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಆಗ್ನೇಯ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತ ಸರ್ಕಾರದ ರೈಲ್ವೆ ಸಚಿವಾಲಯದಡಿ ಬರುವ ರೈಲ್ವೆ ನೇಮಕಾತಿ ಸೆಲ್ (Railway Jobs) 1791 ಅಪ್ರೆಂಟೀಸ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ (rrcser.co.in) ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಸೌಥ್ ಈಸ್ಟರ್ನ್ ರೈಲ್ವೆಯು (ಆಗ್ನೇಯ ರೈಲ್ವೆ) ತನ್ನ ವಿವಿಧ ವರ್ಕ್‌ಶಾಪ್, ಡಿವಿಷನ್‌ಗಳಲ್ಲಿ ಖಾಲಿಯಿರುವ ಶಿಶುಕ್ಷು ತರಬೇತುದಾರರನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ತನ್ನ 10 ಕ್ಕೂ ಹೆಚ್ಚು ವರ್ಕ್ ಶಾಪ್‌ಗಳಲ್ಲಿ (Railway Jobs) ಈ ತರಬೇತುದಾರರನ್ನು ಆಗ್ನೇಯ ರೈಲ್ವೆ ಭರ್ತಿ ಮಾಡಲಿದೆ. ಆಗ್ನೇಯ ರೈಲ್ವೆಯ ಟಾಟಾ, ಸಿನಿ, ಬೊಂಡಮುಂಡ, ಖರಗ್‌ಪುರ್, ಎಡಿಆರ್‌ಎ, ರಾಂಚಿ, ಟಿಪಿಕೆಆರ್, ಸಂತ್ರಗಚಿ, ಚಕ್ರದಾಪುರ್ ಸೇರಿದಂತೆ ಹಲವು ಡಿವಿಷನ್‌ಗಳು, (Railway Jobs) ವರ್ಕ್‌ಶಾಪ್‌ಗಳು ಇದ್ದು, ಇಲ್ಲಿ ವಿವಿಧ ಟ್ರೇಡ್‌ನಲ್ಲಿ ಅಪ್ರೆಂಟೀಸ್ ಗಳನ್ನು ನೇಮಕ ಮಾಡಲು ಅರ್ಹ ಮತ್ತು ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ರೈಲ್ವೆ ಇಲಾಖೆಯು ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ, 1961/1992 ಅಪ್ರೆಂಟಿಸ್ ಕಾಯ್ದೆಯಡಿ ನೇಮಕ ಮಾಡಿಕೊಳ್ಳಲಿದೆ. (Railway Jobs) ಈ ಹುದ್ದೆಯ ಅವಧಿಯಲ್ಲಿ ಮಾಸಿಕ ಸ್ಟೈಫಂಡ್ ಅನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
ಶೈಕ್ಷಣಿಕ ಅರ್ಹತೆ: (Railway Jobs) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ SSLC ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಶೇಕಡಾ 50% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಹಾಗೂ ಸಂಬಂಧಿಸಿದ ಐಟಿಐ ಟ್ರೇಡ್ ಗಳಲ್ಲಿ ಪಾಸಾಗಿರಬೇಕು.
ವಯೋಮಿತಿ: (Railway Jobs) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ದಿನಾಂಕ 10 ಡಿಸೆಂಬರ್ 2024ಕ್ಕೆ ಕನಿಷ್ಠ 15 ವರ್ಷ ಪೂರೈಸಿರಬೇಕು. ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು. ಎಸ್ಸಿ, ಎಸ್ಟಿ (SC/ST) ಅಭ್ಯರ್ಥಿಗಳಿಗೆ: 05 ವರ್ಷ ಒಬಿಸಿ(OBC) ಅಭ್ಯರ್ಥಿಗಳಿಗೆ: 03 ವರ್ಷ, ಪಿಡಬ್ಲ್ಯೂಡಿ (PWD) ಅಭ್ಯರ್ಥಿಗಳಿಗೆ: 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ: (Railway Jobs) ಈ ಹುದ್ದೆಗಳಿಗೆ ಅರ್ಜೀ ಸಲ್ಲಿಸಲು ಬಯುಸವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬೇಕಿದೆ. ಎಲ್ಲಾ ಅಭ್ಯರ್ಥಿಗಳಿಗೆ: ರೂ. 100/- SC/ ST/ ಮಹಿಳೆಯರು/ PWD ಅಭ್ಯರ್ಥಿಗಳಿಗೆ: ಇರುವುದಿಲ್ಲ.
ಆಯ್ಕೆ ವಿಧಾನ: (Railway Jobs) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವಯ ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರಿಸಿ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು: (Railway Jobs)
- ಅರ್ಜಿ ಸ್ವೀಕರಿಸಲು ಪ್ರಾರಂಭದ ದಿನಾಂಕ : ನವೆಂಬರ್ 10, 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 10, 2024
ಪ್ರಮುಖ ಲಿಂಕ್ಗಳು: (Railway Jobs)
- ಅಧಿಸೂಚನೆ ನೋಡಲು: ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ