Thursday, November 21, 2024

Rahul Gandhi : ದಲಿತರ ಮನೆಯಲ್ಲಿ ಅಡುಗೆ ಮಾಡಿ ಊಟ ಸವಿದ ರಾಹುಲ್ ಗಾಂಧಿ, ವಿಡಿಯೋ ವೈರಲ್…..!

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಭೇಟಿ ನೀಡಿದ್ದು, ಈ ಸಮಯದಲ್ಲಿ ದಲಿತ ಕುಟುಂಬದವರೊಡನೆ ಸೇರಿ ಪಾಕಪದ್ದತಿ ರುಚಿಯನ್ನು ಸವಿದಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ರಾಹುಲ್ ಗಾಂಧಿಯವರ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಜೊತೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Rahul gandhi make food in maharastra 0

ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ರವರು ಕಳೆದ ಅ.5 ರಂದು ಮಹಾರಾಷ್ಟ್ರದ ಕೊಲ್ಲಾಪುರದ ಉಂಚಾನ್ ಗ್ರಾಮದ ರೈತ ದಲಿತ ರೈತ ಅಜಯ್ ತುಕಾರಾಂ ಸನಡೆ ಹಾಗೂ ಅಂಜನಾ ತುಕಾರಂ ಸನಡೆ ಎನ್ನುವವರ ಮನೆಗೆ ಭೇಟಿ ನೀಡಿ ಅವರ ಪಾಕ ಪದ್ದತಿ ಅವರ ಊಟ ಪದ್ದತಿ ಹೇಗಿರುತ್ತದೆ ಎಂಬ ವಿಚಾರವನ್ನು ತಿಳಿದುಕೊಂಡರು. ಅವರ ಕುಟುಂಬದವರೊಂದಿಗೆ ಸೇರಿ ಮಸಾಲೆ ಭರಿತ ಊಟವನ್ನು ತಯಾರಿಸಿ, ತಾವೂ ಊಟ ಸೇವಿಸಿದ್ದಾರೆ. ಈ ಸಮಯದಲ್ಲಿ ರಾಹುಲ್ ಗಾಂಧಿಯವರೊಂದಿಗೆ ದಲಿತ್ ಕಿಚನ್ಸ್ ಆಫ್ ಮರಾಠವಾಡ ಪುಸ್ತಕದ ಲೇಖಕ ಶಾಹು ಪಟೋಲೆ ರವರು ಇದ್ದರು.

ರಾಹುಲ್ ಗಾಂಧಿಯವರ ಪೋಸ್ಟ್ ಇಲ್ಲಿದೆ ನೋಡಿ: ಇಲ್ಲಿ ಕ್ಲಿಕ್ ಮಾಡಿ

ಇನ್ನೂ ರಾಹುಲ್ ಗಾಂಧಿಯವರು, ದಲಿತ ಕುಟುಂಬದೊಂದಿಗೆ ಆಹಾರ ತಯಾರು, ಸೇವನೆ ಮಾಡುವುದರ ಜೊತೆಗೆ ಅವರೊಂದಿಗೆ ಸಂವಾದ ಸಹ ಮಾಡಿದ್ದಾರೆ. ನಿಮ್ಮ ದೈನಂದಿನ ಊಟ ಏನು? ಅಡುಗೆ ಪದ್ದತಿ ಹೇಗಿದೆ ಎಂಬ ವಿಚಾರ ಯಾರಿಗೂ ತಿಳಿದಿಲ್ಲ. ಅದನ್ನು ತಿಳಿಯಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ. ಇಂದಿಗೂ ದಲಿತರ ಅಡುಗೆ ಮನೆಗಳ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ದಲಿತರು ಏನು ತಿನ್ನುತ್ತಾರೆ? ಅವರು ಹೇಗೆ ಅಡುಗೆ ಮಾಡುತ್ತಾರೆ ಎಂಬುದು ಎಂಬುದು ಯಾರಿಗೂ ತಿಳಿದಿಲ್ಲ. ಸಾಮಾಜಿಕ ಮತ್ತು ರಾಜಕೀಯ ಪ್ರಾಮುಖ್ಯತೆಯ ಬಗ್ಗೆ ಆಸಕ್ತಿ ಹೊಂದಿದ್ದೇನೆ. ನಾನು ಅಜಯ್ ತುಕಾರಾಂ ಸನಡೆ ಮತ್ತು ಅಂಜನಾ ತುಕಾರಾಂ ಸನದೆ ಅವರೊಂದಿಗೆ ಮಧ್ಯಾಹ್ನ ಊಟ ಮಾಡಿದ್ದೇನೆ . ಇವರು ನನ್ನನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ತಮ್ಮ ಮನೆಗೆ ಅಡುಗೆಮನೆಯಲ್ಲಿ ಸಹಾಯ ಮಾಡಲು ಆಹ್ವಾನಿಸುವ ಮೂಲಕ ನನ್ನನ್ನು ಗೌರವಿಸಿದರು. ನಾವು ಒಟ್ಟಿಗೆ ‘ಚಾನೆ ಕೆ ಸಾಗ್ ಕಿ ಸಬ್ಜಿ’, ‘ಹರಭಾರಿಯಾಚಿ ಭಾಜಿ’ ಮತ್ತು ಬದನೆಯೊಂದಿಗೆ ದಾಲ್’ ಅಡುಗೆ ಮಾಡಿದ್ದೇವೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನೂ ಈ ಕುರಿತು ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿಡಿಯೋ ಹಾಗೂ ವಿಚಾರವನ್ನು ಹಂಚಿಕೊಂಡಿದ್ದಾರೆ. ದಲಿತರ ಊಟದೆಡೆಗೆ ಅವಜ್ಞೆಯಷ್ಟೇ ಅಲ್ಲ, ತೀವ್ರ ಅಸಹನೆಯನ್ನೂ ಬೆಳೆಸಿಕೊಂಡಿರುವ ಸಮಾಜ ನಮ್ಮದು. ದಲಿತರ ಕೈಯಿಂದ ತಯಾರಿಸಿದ ಅಡುಗೆಯ ಸೇವನೆ ಇರಲಿ, ಅವರು ಊಟಕ್ಕೆ ಬಳಸುವ ಪಾತ್ರೆ ಮುಟ್ಟಿದರೂ ಅದನ್ನು ಮೈಲಿಗೆ ಎಂದು ಕರೆಯುವ ಮನಸ್ಥಿತಿ ಇಂದಿಗೂ ನಮ್ಮಲ್ಲಿ ವ್ಯಾಪಕವಾಗಿದೆ.

ಶಾಲೆಗಳಲ್ಲಿ ದಲಿತ ಸಮುದಾಯದವರು ಅಡುಗೆ ಮಾಡಿದರೆ ಅದನ್ನು ವಿರೋಧಿಸುವುದು, ಜಾತ್ರೆ, ದೇವಸ್ಥಾನಗಳ ಅಡುಗೆಯ ಉಸ್ತುವಾರಿಯಿಂದ ದಲಿತರನ್ನು ಪ್ರಜ್ಞಾಪೂರ್ವಕವಾಗಿ ಕೈ ಬಿಡುವುದು ಅಥವಾ ದೂರವಿರಿಸುವುದು ಇವೆಲ್ಲವನ್ನು ನಮ್ಮ ಸಮಾಜದಿಂದ ಇಂದಿಗೂ ತೊಡೆಯಲಾಗಿಲ್ಲ.  ಆಹಾರವೆನ್ನುವುದು ಅವರವರ ರುಚಿ, ಇಚ್ಛೆಗೆ ಅನುಸಾರವಾಗಿಯೇ ಇರುವುದಾದರೂ, ತಳ ಸಮುದಾಯಗಳ ಆಹಾರ ಸಂಸ್ಕೃತಿಯನ್ನು ಕೀಳಾಗಿ ಕಾಣುವ ಕೊಳಕು ಮನಸ್ಥಿತಿಯನ್ನು ಬೇರು ಸಹಿತ ಕಿತ್ತು ಹಾಕದೆ ದೇಶದಲ್ಲಿ ನೈಜ ಸಾಂಸ್ಕೃತಿಕ ಸಮ್ಮಿಳನ ಸಾಧ್ಯವಾಗದು.

ಸಿದ್ದರಾಮಯ್ಯನವರ ಪೋಸ್ಟ್ ಇಲ್ಲಿದೆ ನೋಡಿ: ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದ ಮರಾಠವಾಡದ ದಲಿತ ಆಹಾರ ಸಂಸ್ಕೃತಿಯನ್ನು ಕಟ್ಟಿಕೊಟ್ಟಿರುವ ಲೇಖಕ ಶಾಹೂ ಪಟೋಲೆ ಅವರೊಂದಿಗೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿಯವರು ಅಡುಗೆ ತಯ್ಯಾರಿಯಲ್ಲಿ ಭಾಗಿಯಾಗಿ, ಊಟದೊಟ್ಟಿಗೆ ನಡೆಸಿದ ಆಹಾರ ಸಂಸ್ಕೃತಿಯ ಚರ್ಚೆ ಅವರು ತಯಾರಿಸಿದ ಆಹಾರಾದಷ್ಟೇ ಚೇತೋಹಾರಿಯಾಗಿದೆ.

ಇಂದು ನಮಗೆ ಸಾಮಾಜಿಕವಾಗಿ ಬೇಕಾಗಿರುವುದು ‘ಚಾಯ್‌ ಪೇ ಚರ್ಚಾ’ದಂತಹ ಬೀಡಾಡಿ ಚರ್ಚೆಗಳಲ್ಲ, ನಮ್ಮೆಲ್ಲರನ್ನು ಬೆಸೆಯುವಂತಹ, ಚಿಂತನೆಗೆ ಹಚ್ಚುವಂತಹ ಆಹಾರ ಸಂಸ್ಕೃತಿಯಂತಹ ಮೌಲಿಕ ಚರ್ಚೆಗಳು. ರಾಹುಲ್‌ ಗಾಂಧಿಯವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೋ ತುಣುಕನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುವ ಖುಷಿ ನನ್ನದು ಎಂದು ವಿಡಿಯೋ ಹಂಚಿಕೊಂಡಿದ್ದಾರೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!