Sunday, June 29, 2025
HomeEntertainmentPushpa 2: ಬಹುನಿರೀಕ್ಷಿತ ಪುಷ್ಪಾ-2 ಸಿನೆಮಾದ ಟ್ರೈಲರ್ ಬಿಡುಗಡೆಗೆ ಮೂಹೂರ್ತ ಫಿಕ್ಸ್, ನ.17 ರಂದು ರಿಲೀಸ್….!

Pushpa 2: ಬಹುನಿರೀಕ್ಷಿತ ಪುಷ್ಪಾ-2 ಸಿನೆಮಾದ ಟ್ರೈಲರ್ ಬಿಡುಗಡೆಗೆ ಮೂಹೂರ್ತ ಫಿಕ್ಸ್, ನ.17 ರಂದು ರಿಲೀಸ್….!

ಸ್ಟೈಲೀಷ್ ಸ್ಟಾರ್‍ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನೆಮಾ ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಭಾರಿ ಸದ್ದು ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೇ ಕಲೆಕ್ಷನ್ ಮಾಡಿದೆ. ಜೊತೆಗೆ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದೆ. ಇದೀಗ ಪುಷ್ಪಾ-2 (Pushpa 2) ಸಿನೆಮಾ ಸಹ ಶೀಘ್ರದಲ್ಲೇ ತೆರೆಕಾಣಲಿದೆ. ಈ ಸಂಬಂಧ ಚಿತ್ರತಂಡ ಸಿನೆಮಾ ಟ್ರೈಲರ್‍ ಸಹ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ನವೆಂಬರ್‍ 17 ರಂದು ಪುಷ್ಪಾ-2 (Pushpa 2) ಸಿನೆಮಾದ ಟ್ರೈಲರ್‍ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಸೋಷಿಯಲ್ ಮಿಡಿಯಾದಲ್ಲಿ ಅಪ್ಡೇಟ್ ನೀಡಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲು ಅರ್ಜುನ್ ಫ್ಯಾನ್ಸ್ ಪುಲ್ ಖುಷಿಯಾಗಿದ್ದಾರೆ.

Pushpa 2 trailer on Nov 17 0

ಕೆಲವು ದಿನಗಳಿಂದ ಪುಷ್ಪಾ-2 (Pushpa 2) ಸಿನೆಮಾದ ಟ್ರೈಲರ್‍ ಬಿಡುಗಡೆಯ ಬಗ್ಗೆ ಅಂತೆ ಕಂತೆಗಳು ಉದ್ಬವಿಸಿದ್ದವು. ನ.15 ರಂದು ಪುಷ್ಪಾ-2 (Pushpa 2) ಸಿನೆಮಾದ ಟ್ರೈಲರ್‍ ಬಿಡುಗಡೆಯಾಗಲಿದೆ ಎಂದು ಗಾಸಿಪ್ ಹಬ್ಬಿಸಿದ್ದರು. ಆದರೆ ಇದೀಗ ಸ್ವತಃ ಅಲ್ಲು ಅರ್ಜುನ್ ರವರೇ ನ.17 ರಂದು ಪುಷ್ಪಾ-2 ಸಿನೆಮಾದ ಟ್ರೈಲರ್‍ ರಿಲೀಸ್ ಆಗಲಿದೆ ಎಂದು ಸೋಷಿಯಲ್ ಮಿಡಿಯಾ ಮೂಲಕ ಅಪ್ಡೇಟ್ ನೀಡಿದ್ದಾರೆ. ಪುಷ್ಪಾ-2 ಸಿನಿಮಾದ ಟ್ರೇಲರ್​ ರಿಲೀಸ್​ ದಿನಾಂಕದ ಬಗ್ಗೆ ಮಾಹಿತಿ ನೀಡಲು ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರು ರಗಡ್ ಲುಕ್ ಕೊಟ್ಟಿದ್ದಾರೆ. ಹೆಗಲ ಮೇಲೆ ಬಂದೂಕು ಹಿಡಿದು ಬರುತ್ತಿರುವ ರೀತಿಯಲ್ಲಿ ಅವರು ಪೋಸ್ ನೀಡಿದ್ದಾರೆ. ಈ ಪೋಸ್ಟರ್‍ ನೋಡಿದ ಬಳಿಕ ಅಭಿಮಾನಿಗಳಲ್ಲಿ ಟ್ರೈಲರ್‍ ಮೇಲೆ ಮತಷ್ಟು ನಿರೀಕ್ಷೆ ಹುಟ್ಟುವಂತೆ ಮಾಡಿದೆ.

ಪುಷ್ಪಾ-2 (Pushpa 2) ಸಿನೆಮಾದ ಟ್ರೈಲರ್‍ ಪೋಸ್ಟ್ ಇಲ್ಲಿದೆ ನೋಡಿ: Click Here

ಸದ್ಯ ಲಭ್ಯವಾಗಿರುವ ಮಾಹಿತಿಯಂತೆ ನ.17 ರಂದು ಸಂಜೆ 6 ಗಂಟೆ 3 ನಿಮಿಷಕ್ಕೆ ಪುಷ್ಪಾ-2 ಸಿನೆಮಾದ ಟ್ರೈಲರ್‍ ಬಿಡುಗಡೆಯಾಗಲಿದೆ. ಈ ಟ್ರೈಲರ್‍ ರಿಲೀಸ್ ಆದ ಬಳಿಕ ಸಿನೆಮಾದ ಮೇಲೆ ಕೊಂಚ ಐಡಿಯಾ ಸಿಗಲಿದೆ. ಈ ಸಿನೆಮಾದ ನಿರ್ದೇಶಕ ಸುಕುಮಾರ್‍ ತುಂಬಾನೆ ಸಮಯ ತೆಗೆದುಕೊಂಡು ಸಿನೆಮಾ ಮಾಡಿದ್ದಾರೆ. ಸದ್ಯ ಸಿನೆಮಾದ ಕೊನೆಯ ಹಂತದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಸಿನೆಮಾ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಬಿಡುಗಡೆಯಾಗಲಿದೆ. ಡಿಸೆಂಬರ್‍ 5 ರಂದು ಈ ಸಿನೆಮಾ ಅದ್ದೂರಿಯಾಗಿ ತೆರೆಕಾಣಲಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್ ಜೊತೆಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಸೇರಿದಂತೆ ಡಾಲಿ ಧನಂಜಯ್, ಫಹಾದ್ ಫಾಸಿಲ್ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಈ ಸಿನೆಮಾ ದೇಶದ ಯಾವೆಲ್ಲಾ ಸಿನೆಮಾಗಳ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular