Tuesday, July 15, 2025
HomeEntertainmentLove Reddy: ಕರ್ನಾಟಕದ ಗಡಿಭಾಗದಲ್ಲಿ ಚಿತ್ರೀಕರಿಸಿದ ಲವ್ ರೆಡ್ಡಿ ಸಿನೆಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ, ಟ್ರೈಲರ್...

Love Reddy: ಕರ್ನಾಟಕದ ಗಡಿಭಾಗದಲ್ಲಿ ಚಿತ್ರೀಕರಿಸಿದ ಲವ್ ರೆಡ್ಡಿ ಸಿನೆಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ, ಟ್ರೈಲರ್ ಬಿಡುಗಡೆ ಮಾಡಿದ ದುನಿಯಾ ವಿಜಯ್….!

Love Reddy – ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಎಂಬ ಆಂಧ್ರದ ಗಡಿಭಾಗದಲ್ಲಿರುವ ಚಿಕ್ಕ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣವಾದ ಲವ್ ರೆಡ್ಡಿ (Love Reddy) ಎಂಬ ತೆಲುಗು ಸಿನೆಮಾ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವುದರ ಜೊತೆಗೆ ಸ್ಟಾರ್‍ ಸೆಲೆಬ್ರೆಟಿಗಳಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು. ತೆಲುಗಿನಲ್ಲಿ ಬಿಡುಗಡೆಯಾದ ಈ ಸಿನೆಮಾ ಇದೀಗ ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಈ ಲವ್ ರೆಡ್ಡಿ ಕನ್ನಡ ರಿಮೇಕ್ ನ ಟ್ರೈಲರ್‍ (Love Reddy) ಅನ್ನು ಕನ್ನಡದ ಸ್ಟಾರ್‍ ನಟ ದುನಿಯಾ ವಿಜಯ್ ರವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

Love Reddy in Kannada version 2

ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ಲವ್ ರೆಡ್ಡಿ (Love Reddy) ಸಿನೆಮಾ ಬಹುತೇಕ ಚಿತ್ರೀಕರಣಗೊಂಡಿದೆ. ಈ ಸಿನೆಮಾದಲ್ಲಿ ನಟಿಸಿದ ಬಹುತೇಕ ಕಲಾವಿದರೂ ಹೊಸ ಕಲಾವಿದರೇ ಆಗಿದ್ದಾರೆ. ಈ ಸಿನೆಮಾವನ್ನು ಸ್ಮರಣ್ ರೆಡ್ಡಿ ರವರು ನಿರ್ದೇಶನ ಮಾಡಿದ್ದಾರೆ. ಸಿನೆಮಾದ ಹಿರೋ ಆಗಿ ಅಂಜನ್ ರಾಮಚಂದ್ರ ಹಿರೋಯಿನ್ ಆಗಿ ಶ್ರಾವಣಿ ಪಾತ್ರಗಳನ್ನು ಪೋಷಣೆ ಮಾಡಿದ್ದಾರೆ. ಈ ಸಿನೆಮಾವನ್ನು ಅಂಜನ್ ಕುಟುಂಬದವರೇ ನಿರ್ಮಾಣ ಮಾಡಿದ್ದಾರೆ. ಇದೀಗ ಈ ಸಿನೆಮಾವನ್ನು ಹೊಂಬಾಳೆ ಫಿಲಂಸ್ ಬ್ಯಾನರ್‍ ಮೂಲಕ ಕರ್ನಾಟಕದಲ್ಲಿ (Love Reddy) ಕನ್ನಡ ಭಾಷೆಯಲ್ಲಿ ನ.22 ರಂದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಅಂದಹಾಗೆ ಈ ಸಿನೆಮಾ ನಟ ದುನಿಯಾ ವಿಜಯ್ ರವರಿಗೂ ತುಂಬಾನೆ ಇಷ್ಟವಾಗಿತ್ತು ಎನ್ನಲಾಗಿದೆ.

Love Reddy in Kannada version 1

ಇನ್ನೂ ಲವ್ ರೆಡ್ಡಿ ಸಿನೆಮಾ ಕರ್ನಾಟಕ ಹಾಗೂ ಆಂಧ್ರ ಗಡಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಸಿನೆಮಾ (Love Reddy) ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಸಿನೆಮಾ ಕನ್ನಡದ ಪ್ರೇಕ್ಷಕರಿಗೂ ಹೆಚ್ಚು ಕನೆಕ್ಟ್ ಆಗಬಹುದಾಗಿದೆ. ಯಾವುದೇ ಸಿನೆಮಾ ಹಿನ್ನೆಲೆಯಿಲ್ಲದಿದ್ದರೂ ಅಂಜನ್ ರಾಮ ಚಂದ್ರ ಸಿನೆಮಾ ಮಾಡುವ ಉದ್ದೇಶ ಹೊಂದಿದ್ದರು. ಹೊಸಬರ ಸಿನೆಮಾ ಆದ ಕಾರಣ ಯಾರೂ ನಿರ್ಮಾಣ (Love Reddy) ಮಾಡಲು ಮುಂದೆಬರಲಿಲ್ಲ. ಆದ್ದರಿಂದ ನಾವೆಲ್ಲರೂ ಸೇರಿ ಈ ಸಿನೆಮಾ ನಿರ್ಮಾಣ ಮಾಡಿದ್ದೇವೆ, ಸ್ಟಾರ್‍ ನಟ ಬಾಹುಬಲಿ ಪ್ರಭಾಸ್ ರವರು ಸೇರಿದಂತೆ ಅನೇಕರು ದೊಡ್ಡ ದೊಡ್ಡ ಸೆಲೆಬ್ರೆಟಿಗಳು ಸಿನೆಮಾ ಇಷ್ಟಪಟ್ಟಿದ್ದಾರೆ. ದುನಿಯಾ ವಿಜಯ್ ರವರಿಗೂ ನಮ್ಮ ಕಡೆಯಿಂದ ತುಂಬು ಹೃದಯ ಧನ್ಯವಾದಗಳು ಎಂದು ನಿರ್ಮಾಪಕರು ಹೇಳಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular