Pushpa-2 – ದೇಶದ ಸಿನಿರಂಗದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಪುಷ್ಪಾ-2 ಸಿನೆಮಾ ಸಹ ಒಂದಾಗಿದೆ. ಇನ್ನೇನು ಕೆಲವೇ ಘಂಟೆಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಸಿನೆಮಾಗಾಗಿ ಕಾಯುತ್ತಿದ್ದಾರೆ. ಡಿ.5 ರಂದು ಈ ಸಿನೆಮಾ ಅದ್ದೂರಿಯಾಗಿ ತೆರೆ ಕಾಣಲಿದೆ. ಈಗಾಗಲೇ ಈ ಸಿನೆಮಾದ ಹಾಡುಗಳೂ ಸಹ ಭಾರಿ ಸದ್ದು ಮಾಡುತ್ತಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಸಹ ಪುಷ್ಪರಾಜ್ ಹವಾ ಇದೆ ಎಂದೇ ಹೇಳಬಹುದಾಗಿದೆ. ಇದೀಗ ಲಂಡನ್ ನಲ್ಲಿ ಪುಷ್ಪಾ-2 ಸಿನೆಮಾದ ಹಾಡಿಗೆ ಅಲ್ಲು ಅರ್ಜುನ್ ಅಭಿಮಾನಿಗಳು (Pushpa-2) ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun 2) ರವರಿಗೆ ನ್ಯಾಷನಲ್ ಅವಾರ್ಡ್ ಸೇರಿದಂತೆ ಅನೇಕ ಅವಾರ್ಡ್‌ಗಳನ್ನು ತಂದುಕೊಟ್ಟಂತಹ ಪುಷ್ಪಾ ಸಿನೆಮಾದ ಮುಂದಿನ ಭಾಗ ಪುಷ್ಪಾ-2 (Pushpa 2) ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ನಟ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸ್ಪೇಷಲ್ ಸಾಂಗ್ ನಲ್ಲಿ ಯಂಗ್ ಬ್ಯೂಟಿ ಶ್ರೀಲೀಲಾ (Sreeleela) ಸಹ ಸ್ಟೆಪ್ಸ್ ಹಾಕಿದ್ದಾರೆ. ಕಿಸ್ಸಿಂಗ್ ಎಂಬ ಹೆಸರಿನ ಈ ಹಾಡೂ ಸಹ ಭಾರಿ ಸದ್ದು ಮಾಡುತ್ತಿದೆ. ಇದರ ಜೊತೆಗೆ ಪೀಲಿಂಗ್ಸ್ ಹಾಡು ಸಹ ಸಖತ್ ಸೌಂಡ್ ಮಾಡುತ್ತಿದೆ. ಇದೀಗ ಪುಷ್ಪಾ-2 (Pushpa 2)ಸಿನೆಮಾದ ಹಾಡೊಂದಕ್ಕೆ ಲಂಡನ್ ನಲ್ಲಿರುವ ಅಲ್ಲು ಅರ್ಜುನ್ ಅಭಿಮಾನಿಗಳು ನೃತ್ಯ ಮಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಪುಷ್ಪಾ-2 ಸಿನೆಮಾದ ಹಾಡಿಗೆ ಲಂಡನ್ ನಲ್ಲಿರುವ ಕೆಲ ಅಲ್ಲು ಅರ್ಜುನ್ ಅಭಿಮಾನಿಗಳು ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ. ಡ್ಯಾನ್ಸ್ ಶಾಲೆಯ ವಿದ್ಯಾರ್ಥಿಗಳು ಲಂಡನ್ ಬೀದಿಯಲ್ಲಿ ಪುಷ್ಪಾ-2 (Pushpa 2) ಸಿನೆಮಾದ ಟೈಟಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಈ ಹಾಡು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅನೇಕರು ಈ ವಿಡಿಯೋವನ್ನು ರೀಪೋಸ್ಟ್ ಮಾಡುವ ಮೂಲಕ, ಲೈಕ್ ಕಾಮೆಂಟ್ ಗಳನ್ನು ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಪುಷ್ಪಾ-2 (Pushpa 2) ಸಿನೆಮಾ ಬಿಡುಗಡೆಗೂ ಮುಂಚೆಯೇ ಹಲವು ರೆಕಾರ್ಡ್‌ಗಳನ್ನು ಸಹ ಮಾಡಿದೆ.